Advertisement

ಸರಕಾರಿ ಬಂಗಲೆಗಾಗಿ ಏಳು ಪತ್ರ ಬರೆದಿದ್ದೇನೆ, ಸರಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ: ಹೊರಟ್ಟಿ

10:23 AM Sep 03, 2021 | Team Udayavani |

ಹುಬ್ಬಳ್ಳಿ: ತಮಗೆ ಸರಕಾರಿ ಬಂಗಲೆ ನೀಡಿಕೆ ಬಗ್ಗೆ ಸರಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ. ಈಗಾಗಲೇ ಏಳು ಪತ್ರ ಬರೆದಿದ್ದೇನೆ, ಬಂಗಲೆ ನೀಡಿದರೆ ನೀಡಲಿ ಇಲ್ಲವಾದರೆ ಬಿಡಲಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

Advertisement

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಲ್ಯಾಮಿಂಗ್ಟನ್ ಶಾಲೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಲೆಗಾಗಿ ಇನ್ನೊಂದು ಪತ್ರ ಬರೆಯುವೆ. ಮುಂದಿನ ನಿರ್ಧಾರ ಸರಕಾರಕ್ಕೆ ಬಿಟ್ಟಿದ್ದು, ಇನ್ನೆಂದೂ ಬಂಗಲೆ ವಿಚಾರವಾಗಿ ಕೇಳುವುದಿಲ್ಲ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಧಾರಿತ ರಾಜಕೀಯ ಇಲ್ಲವಾಗುತ್ತಿದೆ. ಹಳೇ ಚುನಾವಣೆ ವ್ಯವಸ್ಥೆ ಇದೀಗ ಮುಗಿದ ಅಧ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆಗಳ ಆರಂಭದ ಕುರಿತು, ಈ ಹಿಂದೆಯೇ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರಿಗೆ ಹೇಳಿದ್ದೆ. ಈಗಲೂ ಹೇಳುತ್ತೇನೆ ಶಾಲೆಗಳು ಆರಂಭಿಸಬೇಕು ಎಂದರು.

ಇದನ್ನೂ ಓದಿ:ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: 533 ಮತಗಟ್ಟೆಗಳಲ್ಲಿ ಮತದಾನ ಶುರು

Advertisement

ಶಿಕ್ಷಕರ ವರ್ಗಾವಣೆ ಅರ್ಧ ತಾಸಿನ ಕೆಲಸ, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರು ವರ್ಗಾವಣೆ ಆಗಿಲ್ಲ. ಶಿಕ್ಷಣ ಇಲಾಖೆಯಲ್ಲಿ ನೂರಾರು ಕಡಿತಗಳು ಹಾಗೇ ಉಳಿದಿವೆ ಎಂದರು.

ಕೋವಿಡ್ ಭೀತಿ ಇರುವುದರಿಂದ ಮಾಸ್ಕ್ ಹಾಕದೆ ಇರುವವರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಜೋಶಿ ಪುತ್ರಿಯ ಮದುವೆಗೆ ಕೋವಿಡ್ ರೂಲ್ಸ್ ಬ್ರೇಕ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಸಿ ಸಹ ರಾಜಕಾರಣಿಗಳ ಕೈಯಲ್ಲಿ ಕೆಲಸ ಮಾಡುವವರು. ದಕ್ಷತೆಯಿಂದ ಕೆಲಸ ಮಾಡಬೇಕು. ಸದನದಲ್ಲಿ ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ, ನಾನು ಸಹ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next