Advertisement

ಮಕ್ಕಳನ್ನು ಅಡ್ಡದಾರಿ ಹಿಡಿಸುವ ಕೆಲಸವನ್ನು ಪೋಷಕರು,ರಾಜಕಾರಣಿಗಳು ಮಾಡುತ್ತಿದ್ದಾರೆ: ಹೊರಟ್ಟಿ

11:41 AM Feb 12, 2022 | Team Udayavani |

ಬೆಂಗಳೂರು: ಮಕ್ಕಳನ್ನು ಅಡ್ಡದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯಗಳನ್ನು ಶಾಲೆಗಳಲ್ಲಿ ತರಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ವಿವಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ವಿಧಾನ ಪರಿಷತ್ ಕಲಾಪ‌ ಆರಂಭವಾಗಲಿದೆ. ರಾಜ್ಯಪಾಲರ ಭಾಷಣದ ಬಳಿಕ ಪರಿಷತ್ ಕಲಾಪ ಆರಂಭವಾಗಲಿದೆ. ನಿಯಮ 72 ರಡಿ ಚರ್ಚೆ ವೇಳೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಸದನದ ಬಾವಿಯಲ್ಲಿ ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ. ನಿಯಮಗಳ ಪಾಲನೆಗೆ ಎಲ್ಲಾ ಸದಸ್ಯರಿಗೂ ಸೂಚನೆ ನೀಡಲಾಗಿದೆ. ಮೇಲ್ಮನೆಯ ಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ತೀರ್ಮಾನ ಮಾಡಿದ್ದೇವೆ. ಮೊನ್ನೆ ನಡೆದ ತರಬೇತಿ ಶಿಬಿರದಲ್ಲಿ 48 ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. 60 ದಿನ ಸದನ ನಡೆಯಬೇಕೆಂದು ನಾವು ಹೇಳುತ್ತಲೇ ಬರುತ್ತಿದ್ದೇವೆ. ಸರ್ಕಾರ ಅವಕಾಶ ಕೊಟ್ಟಷ್ಟು ದಿನ ನಾವು ನಡೆಸಬೇಕಾಗುತ್ತದೆ. 60 ದಿನ ನಡೆಯಬೇಕೆಂದು ಅನೇಕ ಜನರ ಅಭಿಪ್ರಾಯ ಇದೆ. ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ಹಮ್ಮಿಕೊಳ್ಳುವ ಚಿಂತನೆ ಇದೆ. ಸರ್ಕಾರ ಒಪ್ಪಿಕೊಂಡರೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಕಾಲೇಜು ಆರಂಭ : ಏನಾಗಲಿದೆ ಎಂದು ನೋಡಿಕೊಂಡು ತೀರ್ಮಾನ; ಸಿಎಂ

ಮೊದಲೇ ವಿಧೇಯಕ ಕೊಡಬೇಕು ಅಂತಾ‌ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ. ಸರಳ ಪ್ರಶ್ನೆಗಳಿಗೆ ಉತ್ತರಿಸಲು ಕೆಲವು ಬಾರಿ ಸಚಿವರು ತಿಂಗಳ ಕಾಲ ಸಮಯ ಕೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಲ್ಮನೆಯ ಬಗ್ಗೆ ಬಂದ ಟೀಕೆ ಟಿಪ್ಪಣಿಗಳು ಬಂದವು. ಯಾವುದೇ ಟೀಕೆಗಳನ್ನು ನಾನು ವಿರೋಧಿಸುವುದಿಲ್ಲ. ಚುನಾವಣೆಯಲ್ಲಿ ಸೋತವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಗುತ್ತದೆ. ಸಾಹಿತಿ ಎಂದು ಪುಸ್ತಕ ಬರೆದ ರಾಜಕಾರಣಿಯನ್ನು ಆಯ್ಕೆ ಮಾಡುತ್ತಾರೆ. ಯಾವ್ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಇರುತ್ತಾರೋ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಹೊರಟ್ಟಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next