Advertisement

ಸೋಲಿಲ್ಲದ‌ ಸರದಾರ ಎಂದೇ‌ ಹೆಸರಾದ ಹೊರಟ್ಟಿ ಈ ಬಾರಿಯೂ ಗೆಲ್ಲಲಿದ್ದಾರೆ : ಜಗದೀಶ ಶೆಟ್ಟರ್

08:25 PM May 31, 2022 | Team Udayavani |

ಶಿರಸಿ : ಬಸವರಾಜ್ ಹೊರಟ್ಟಿ ಅವರ‌ ಮತಗಳು, ಬಿಜೆಪಿ ಮತಗಳು ಸೇರಿ ಶೇ. 80 ಕ್ಕಿಂತ ಹೆಚ್ಚು‌ ಮತಗಳನ್ನು‌ ಪಡೆದು ಪಶ್ಚಿಮ‌ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿಪಾದಿಸಿದರು.

Advertisement

ಅವರು ಸೋಮವಾರ ಪಶ್ಚಿಮ‌ ಶಿಕ್ಷಕರ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ವೇಳೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಪ್ರಚಾರದ ಓಡಾಟದಲ್ಲಿ ಒಳ್ಳೆ‌ಯ ಪ್ರತಿಕ್ರಿಯೆ ಇದೆ.

42 ವರ್ಷದಿಂದ 7 ಬಾರಿ ಆಯ್ಕೆಯಾಗಿ ಸೋಲಿಲ್ಲದ‌ ಸರದಾರ ಎಂದೇ‌ ಹೆಸರಾದ ಹೊರಟ್ಟಿ ಅವರು ಈ ಬಾರಿ ಬಿಜೆಪಿಯಿಂದ ಗೆಲ್ಲಲಿದ್ದಾರೆ ಎಂದರು.

ಹೋರಾಟದ ಮೂಲಕ ಶಿಕ್ಷಕರ ಸಂಘದ ಕೆಲಸ‌ ಮಾಡಿ ಸಂಘದ ಬೇಡಿಕೆ ಈಡೇರಿಸಿದ್ದಾರೆ. ಹೊರಟ್ಟಿ ಅವರಿಗೆ‌ ಹಾಗೂ ಬಿಜೆಪಿಗೆ ನೇರ ಸ್ಪರ್ಧೆ ಇತ್ತು. ಈಗ ಎರಡೂ ಶಕ್ತಿಗಳು ಒಂದಾಗಿದೆ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೇಸ್ ನಗಣ್ಯ, ಬಿಜೆಪಿ ಹಾಗೂ ಹೊರಟ್ಟಿ ಶಕ್ತಿ ಸೇರಿ.‌ ಇದು ಮಹಾ ಶಕ್ತಿಯಾಗಿದೆ. ಶೇ.80ರಷ್ಟು ಮತ ಸಿಗಲಿದೆ. ಹೊರಟ್ಟಿ ಅವರ ನಿರಂತರ ಸಂಪರ್ಕ ಇಲ್ಲಿ‌ ಕೆಲಸ ಮಾಡಲಿದೆ, ಮತದಾರರಿಗೆ ಅವರ ಬಗ್ಗೆ ಪ್ರೀತಿ ವಿಶ್ವಾಸ ಮೂಡಿದೆ ಎಂದರು.

Advertisement

ಇದನ್ನೂ ಓದಿ : ಶಹಾಪುರ: ಉಪನ್ಯಾಸಕನ ಕೊಲೆ ಪ್ರಕರಣ; ಮೊದಲ ಹೆಂಡತಿ ಮಗ ಸೇರಿ ಮೂವರ ಬಂಧನ

ಮತದಾರರು ಬಿಜೆಪಿ ಹಾಗೂ ಹೊರಟ್ಟಿ ಅವರೊಂದಿಗೆ ಹೊಂದಿಕೊಂಡಿದ್ದಾರೆ. ಎರಡು‌ ಎಲೆಕ್ಷನ್ ಬಿಜೆಪಿಗೆ ಬೆಂಬಲಿಸಿದರೆ ಹೊರಟ್ಟಿ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸುತ್ತಾರೆ. ಈ‌ ಕಾರಣದಿಂದ ಈ ಬಾರಿಯ ಗೆಲುವು ದೊಡ್ಡ ಪ್ರಮಾಣದಲ್ಲಿ ಆಗಲಿದೆ ಎಂದರು.

ಕಾಂಗ್ರೆಸ್ ಮತ ನೋಡಿದರೆ ದುರ್ಬಲ ಆಗಿದೆ. ತಳ ಹಂತದ‌ ಕಾರ್ಯಕರ್ತರಿಲ್ಲದೆ ಪಕ್ಷ ಸಂಘಟನೆ ಇಲ್ಲದಂತಾಗಿದೆ ಎಂದರು.

ನಾಲ್ಕು ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು. ಮೈಸೂರು‌ ಸೇರಿದಂತೆ ನಾಲ್ಕೂ ಕಡೆಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದರು.

ಹೊರಟ್ಟಿ ಅವರು ಬಿಜೆಪಿಗೆ ಬಂದಿದ್ದು ಯಾರಿಗೂ ಅಸಮಧಾನ ಇಲ್ಲ. ಅವರೇ ಗೆಲ್ಲುತ್ತಾರೆ ಎಂದೂ ಹೇಳಿದರು.
ಅಭ್ಯರ್ಥಿ ಬಸವ ರಾಜ್ ಹೊರಟ್ಟಿ, ಸಚಿವ ಶಿವರಾಮ ಹೆಬ್ಬಾರ್, ಪ್ರಮುಖರಾದ ಮಹೇಶ ತೆಂಗಿನಕಾಯಿ, ಎಸ್.ವಿ.ಸಂಕನೂರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next