Advertisement

ಶಾಲಾ-ಕಾಲೇಜು ಬಂದ್‌ ಕುರಿತು ಶೀಘ್ರ ನಿರ್ಧಾರ: ಬೊಮ್ಮಾಯಿ

08:55 PM Mar 21, 2021 | Team Udayavani |

ಧಾರವಾಡ: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಕ್ಕೆ ಪರಿಣತರ ಸಮಿತಿ ಶಿಫಾರಸು ಮಾಡಿದೆ. ಶಾಲಾ-ಕಾಲೇಜು ಬಂದ್‌ ಮಾಡುವ ವಿಚಾರದಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿವೆ. ರಾಜ್ಯದಲ್ಲಿ ಲಾಕ್‌ಡೌನ್‌ ಬಗ್ಗೆ ಚರ್ಚೆಯೇ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಸಿ ಡಿ ಪ್ರಕರಣವನ್ನು ಎಸ್‌ಐಟಿ ಸರಿಯಾಗಿಯೇ ತನಿಖೆ ಮಾಡಲಿದ್ದು, ಯಾವುದೇ ಕಾರಣಕ್ಕೂ ಬೇರೆ ತನಿಖಾ ಸಂಸ್ಥೆಗೆ ವರ್ಗಾಯಿಸುವ ಚಿಂತನೆ ಇಲ್ಲ. ಎಸ್‌ಐಟಿ ಸ್ವತಂತ್ರ ಸಂಸ್ಥೆ. ತನಿಖಾಧಿಕಾರಿಗಳು ಕಾನೂನು ಪ್ರಕಾರವೇ ಕೆಲಸ ಮಾಡುತ್ತಾರೆ.

ಇದನ್ನೂ ಓದಿ:ಬಿಜೆಪಿ ಸರ್ಕಾರದ ತೀರ್ಮಾನದಲ್ಲಿ ಕಾಂಗ್ರೆಸ್‌ ನೆರಳು : ಕೋಡಿಹಳ್ಳಿ ಟೀಕೆ

ಅವರ್ಯಾರಿಗೂ ಕೈಗೊಂಬೆಯಲ್ಲ. 2016ರಲ್ಲಿ ಇದೇ ರೀತಿ ಸಚಿವರೊಬ್ಬರ ಸಿ ಡಿ ಪ್ರಕರಣ ನಡೆದಿತ್ತು. ಆಗಲೂ ಎಸ್‌ಐಟಿಯೇ ತನಿಖೆ ನಡೆಸಿತ್ತು. ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next