Advertisement

ದುಬೈ ಕನ್ನಡಿಗರ ಕುಟುಂಬದ ಕಾಳಜಿ ಜವಾಬ್ದಾರಿ ‌ನಮ್ಮದು: ಗೃಹ ಸಚಿವ ಬಸವರಾಜ ಬೊಮ್ಮಾಯಿ

09:13 AM Apr 19, 2020 | keerthan |

ಬೆಂಗಳೂರು: ಕೋವಿಡ್-19 ಸಂಕಷ್ಟದ ಸಮಯದಲ್ಲಿ ದುಬೈ ಕನ್ನಡಿಗರು ಯಾವುದೇ ಆತಂಕಕ್ಮೆ ಒಳಗಾಗುವ ಅವಷ್ಯಕತೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Advertisement

ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರ  ದುಬೈ ಕನ್ನಡಿಗರ ಜೊತೆ ಇದೆ. ಇಲ್ಲಿರುವ ನಿಮ್ಮ ಕುಟುಂಬಕ್ಕೂ ಯಾವುದೇ ರೀತಿ ಸಮಸ್ಯೆ ಆಗಲು ನಾವು ಬಿಡುವುದಿಲ್ಲ. ನಿಮ್ಮ ಕುಟುಂಬದ ಕಾಳಜಿ ವಹಿಸುತ್ತೇವೆ ಎಂದು ಅಭಯ ನೀಡಿದ್ದಾರೆ.

ದುಬೈನಲ್ಲಿರುವ ಕನ್ನಡಿಗ ಉದ್ಯಮಿಗಳು, ನೌಕರರು, ಕೋವಿಡ್-19 ವಿರುದ್ದ ಹೋರಾಡಲು ನೆರವಾಗಿ. ಸರ್ಕಾರಕ್ಕೆ ನಿಮ್ಮ ಸಹಕಾರ ಇರಲಿ. ಅಲ್ಲಿರುವ ಕನ್ನಡಿಗ ಕಾರ್ಮಿಕರು, ಕೆಲಸಗಾರರ ಬಗ್ಗೆಗೂ ನೀವು ಕಾಳಜಿ ವಹಿಸಿ. ಅಸಹಾಯಕರಿಗೆ ಸಹಾಯ ಮಾಡಿ. ಸರ್ಕಾರ ಯಾವಾಗಲೂ ನಿಮ್ಕ ಜೊತೆ ಇದೆ ಎಂದು ದುಬೈ ಕನ್ನಡಿಗರಿಗೆ ಧೈರ್ಯ ತುಂಬಿದ್ದಾರೆ. ಸರ್ಕಾರದ ಜೊತೆ ನಿಂತು ಸಹಕಾರ ಕೊಡುವಂತೆ ಬೊಮ್ಮಾಯಿ‌ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next