Advertisement

ಯಾರಿಗೆ ಬೊಮ್ಮಾಯಿ ಮಿಠಾಯಿ? ಚುನಾವಣ ವರ್ಷವಾದ್ದರಿಂದ ನಿರೀಕ್ಷೆ

01:06 AM Feb 16, 2023 | Team Udayavani |

ಬೆಂಗಳೂರು: ಹಾಲಿ ಸರಕಾರದ ಕೊನೆಯ ಬಜೆಟ್‌ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಲಿದ್ದಾರೆ. ಇದು ಬೊಮ್ಮಾಯಿ ಮಂಡಿಸುವ 2ನೇ ಬಜೆಟ್‌ ಆಗಿದ್ದು, ಚುನಾವಣ ವರ್ಷವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಸಮುದಾಯವನ್ನೂ ಸಂತೃಪ್ತಿಪಡಿಸುವ ನಿರೀಕ್ಷೆಯಿದೆ.

Advertisement

ರಾಜ್ಯದ ಆದಾಯ ಉತ್ತಮವಾಗಿದೆ ಎಂದು ಪದೇಪದೆ ಹೇಳುವ ಮೂಲಕ ಸಿಎಂ “ಸರ್ವಸ್ಪರ್ಶಿ’ ಬಜೆಟ್‌ನ ಮುನ್ಸೂ ಚನೆ ನೀಡಿದ್ದಾರೆ. ಕಾಂಗ್ರೆಸ್‌ ನ ಗ್ಯಾರಂಟಿ ಸರಣಿ ಯೋಜನೆಗೂ ಬಜೆಟ್‌ನಲ್ಲಿ ಉತ್ತರ ನೀಡಲು ಮುಂದಾಗಿದ್ದಾರೆ.

ರೈತಾಪಿ ವರ್ಗಕ್ಕೆ ಖುಷಿ
ಒಂದು ಮೂಲದ ಪ್ರಕಾರ, ಈ ವರ್ಷ ರೈತಾಪಿ ವರ್ಗವನ್ನು ಮೆಚ್ಚಿಸಲು ಬೊಮ್ಮಾಯಿ ಲೆಕ್ಕಾಚಾರ ಹಾಕಿದ್ದಾರೆ. ಈ ಮೂಲಕ ಬಹುದೊಡ್ಡ ಮತವರ್ಗದ ಮೇಲೆ ಪ್ರಭಾವ ಬೀರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3ರಿಂದ 5 ಲಕ್ಷ ರೂ.ಗೆ ಏರಿಸುವ ನಿರೀಕ್ಷೆ ಇದೆ. ಜತೆಗೆ ಫ‌ಲಾನುಭವಿಗಳ ಸಂಖ್ಯೆಯನ್ನು 33 ಲಕ್ಷದಿಂದ 40 ಲಕ್ಷಕ್ಕೆ ವಿಸ್ತರಿಸುವ ಬಗ್ಗೆಯೂ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸರಕಾರಿ ನೌಕರರಿಗೆ ಬಂಪರ್‌
ಸರಕಾರಿ ನೌಕರರಿಗೆ ಬಂಪರ್‌ ಹೊಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಳೆ ಪಿಂಚಣಿ ವ್ಯವಸ್ಥೆಗಾಗಿ ಆಗ್ರಹಿಸುತ್ತಿರುವ ನೌಕರ ರನ್ನು 7ನೇ ವೇತನ ಆಯೋಗ ಜಾರಿ ಮೂಲಕ ತೃಪ್ತಿಪಡಿಸಲು ಬೊಮ್ಮಾಯಿ ಪ್ರಯತ್ನಿಸುವ ಸಾಧ್ಯತೆ ಇದೆ. ಜತೆಗೆ ಈಗಾಗಲೇ ಘೋಷಣೆ ಮಾಡಿರುವ “ಗೃಹ ಲಕ್ಷಿ$¾à’ ಯೋಜನೆಗೆ ಬಜೆಟ್‌ನಲ್ಲಿ ಆರ್ಥಿಕ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನಾಳೆ ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡನೆ
ಶುಕ್ರವಾರ ಬೆಳಗ್ಗೆ 10.15ಕ್ಕೆ ಬೊಮ್ಮಾಯಿ ಬಜೆಟ್‌ ಮಂಡಿಸಲಿದ್ದಾರೆ. ತಮಗೆ ಅನುಕೂಲ ಕಲ್ಪಿಸಬೇಕೆಂದು ಈಗಾಗಲೇ ಹಲವು ಸಮುದಾಯದವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Advertisement

ಹೀಗಾಗಿ ಕುಲಕಸುಬು ಆಧರಿತ ವೃತ್ತಿ ನಂಬಿಕೊಂಡ ಸಮುದಾಯಕ್ಕೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಒಂದಿಷ್ಟು ಹೊಸ ನಿಗಮಗಳ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next