Advertisement
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
12ನೇ ಶತಮಾನದಲ್ಲಿಯೇ ಬಸವಣ್ಣ ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಬಸವಣ್ಣನವರ ಕನಸು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಲಿಂಗತಾರತಮ್ಯ, ವರ್ಗ ತಾರತಮ್ಯ, ಜಾತಿ ತಾರತಮ್ಯ ಹೋಗಲಾಡಿಸುವ ಚಿಂತನೆ ಸಮಾಜಕ್ಕೆ ನೀಡಿದ ಅವರು ಧಾರ್ಮಿಕತೆಗೆ ಹೊಸ ವ್ಯಾಖ್ಯಾನ ನೀಡಿ ಬಡವರಿಗೂ ದೇವರ ಕಾಣುವ, ದೇವಸ್ಥಾನ ಕಟ್ಟುವ ಹಕ್ಕಿದೆ ಎಂಬುವುದನ್ನು ಮೊಟ್ಟ ಮೊದಲಿಗೆ ಅರಿವು ಮೂಡಿಸಿದರೆಂದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಸ.ನ ನಾಗೇಂದ್ರ ಮಾತನಾಡಿ, ಶತಮಾನಗಳ ಹಿಂದೆ ಇದ್ದ ಮೌಡ್ಯ, ಕಂದಾಚಾರ ಪದ್ಧತಿಗಳು 21ನೇ ಶತಮಾನದಲ್ಲೂ ಆಚರಣೆಯಲ್ಲಿವೆ.
ಮೇಲು, ಕೀಳು, ಜಾತಿ ಎಂಬ ಸಂಪ್ರದಾಯ ಜೀವಂತವಾಗಿದೆ. ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಎಲ್ಲಾ ಕುಲ ಕಸಬುಗಳ ವ್ಯಕ್ತಿಗಳ ಕಾಯಕಕ್ಕೆ ಗೌರವ ನೀಡಿ ಅಸಮಾನತೆ ಹೋಗಲಾಡಿಸಲು ಪಣ ತೊಟ್ಟಿದ್ದರು ಎಂದರು.
12 ಶತಮಾನದ ಕಾಲಘಟ್ಟದಲ್ಲಿ ಬಸವಣ್ಣವನರು ಹಾಕಿಕೊಂಡ ಸಮಾಜ ಸುಧಾರಣೆ ಅಭಿವೃದ್ಧಿ ಚಿಂತನೆಗಳು ಎಲ್ಲಾ ಕಾಲಗಳಲ್ಲೂ ಪ್ರಸ್ತುತವೆನ್ನಿಸುತ್ತದೆ. ಅವರ ಚಿಂತನೆಗಳ ಸಾಕಾರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಲವು ಸರ್ಕಾರಗಳು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರೇರಣೆ ಎಂದು ಬಣ್ಣಿಸಿದರು.
ದಯೆ ಧರ್ಮದ ಮೂಲ ಎಂಬ ಸಾರವನ್ನು ಸನಾತನ, ಬೌದ್ಧ, ಸಿಖ್, ಜೈನ, ಇಸ್ಲಾಂ ಧರ್ಮಗಳಲ್ಲಿ ಅಡಕವಾಗಿದ್ದರೂ ಅದನ್ನು ಸಮಾಜಕ್ಕೆ ತೀರಾ ನಿಕಟವಾಗಿ ತಲುಪಿಸಿದವರಲ್ಲಿ ಬಸವಣ್ಣನವರು ಓರ್ವರು. ಕಲ್ಮಶ ರಹಿತ ಮನಸ್ಸಿನಿಂದ ಶಾಂತಿ ಪ್ರಾಪ್ತಿ.
ಪ್ರಜಾಸತ್ತಾತ್ಮಕ ದೇಗುಲ ಬಾಗಿಲು ತೆರೆಸುವ ಮೂಲಕ ಅಸಂಖ್ಯಾತ ದೀನ, ದಲಿತ, ದುರ್ಬಲ ಜನಾಂಗದವರ ಮನಗೆಲ್ಲುವಂತೆ ಮಾಡಿದ್ದರೆಂದರು. ಈ ವೇಳೆ ರೇಷ್ಮೆ ಇಲಾಖೆಯ ಮ.ಗ.ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ದಾಸಪ್ಪ, ತೋಟಗಾರಿಕೆ ಇಲಾಖೆ ರವಿಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.