Advertisement

ಬಸವಣ್ಣನವರೇ ವೀರಶೈವ ಮತ ಸ್ವೀಕರಿಸಿದ್ದರು: ಶ್ರೀ

06:40 AM Jan 14, 2019 | Team Udayavani |

ಬಾಗಲಕೋಟೆ: ವೀರಶೈವ ಮತ್ತು ಲಿಂಗಾಯತ ಎಂಬುದು ಭೇದವಲ್ಲ. ಬಸವಣ್ಣ ನವರೇ ವೀರಶೈವ ಮತ ಸ್ವೀಕರಿಸಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಹೇಳಿದರು.

Advertisement

ಗುಳೇದಗುಡ್ಡದಲ್ಲಿ ಲಕ್ಷ್ಮೀ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತ ನಾಡಿದರು. ಬಸವಣ್ಣನವರು ಹೊಸ ಮತದ ಪ್ರವರ್ತಕರಲ್ಲ. ಶಿವಭಕ್ತಿಯನ್ನು ಪ್ರಚಾರ ಮಾಡಿದ್ದಾರೆ. ಅವರೊಬ್ಬ ಅತಿ ದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದರು. ಲಿಂಗಾಯತರು, ಹಿಂದೂಗಳೇ ಅಲ್ಲ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಶಿವನ ಆರಾಧನೆ ಮಾಡುತ್ತ ಹಿಂದೂ ಸಂಪ್ರದಾಯ ಅನುಸರಿಸಿದ್ದಾರೆ ಎಂದರು.

ಕೃಷ್ಣಮಠವನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗುತ್ತದೆ ಎಂಬ ಅಪಪ್ರಚಾರ ದಿಂದ ಕಾಂಗ್ರೆಸ್‌ ಪಕ್ಷ ಸೋಲಬೇಕಾಯಿತು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಏನೂ ಹೇಳಿಲ್ಲ. ಅಪಪ್ರಚಾರವನ್ನೂ ಮಾಡಿಲ್ಲ. ಅದರ ಬಗ್ಗೆ ತಾವು ಪರ ಅಥವಾ ವಿರುದ್ಧ ಮಾತನಾಡಿಲ್ಲ ಎಂದರು. ರಾಮ ಮಂದಿರ ನಿರ್ಮಾಣ ಕುರಿತು ಕುಂಭಮೇಳದಲ್ಲಿ ಚರ್ಚೆಗೆ ಬರಲಿದೆ. ಮುಂದೆ ಏನು ಮಾಡಬೇ ಕೆಂಬುದರ ಕುರಿತು ಜನವರಿ ಅಂತ್ಯದಲ್ಲಿ ನಿರ್ಧಾರವಾಗಲಿದೆ. ಪ್ರಭಾಕರ ಭಟ್ ಕಲ್ಲಡ್ಕ ಅವರು ಅಜ್ಞಾತ ಸ್ಥಳದಲ್ಲಿದ್ದಾರೆಂದು ನನಗೆ ಅನಿಸುವುದಿಲ್ಲ. ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next