Advertisement
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಬಸವಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಅಂಬೇಡ್ಕರರಿಗೆ ಹಾಗೂ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿಯವರು ಆಗಮಿಸಿದ್ದ ವೇಳೆ ಬಸವಣ್ಣನವರ ಸಾಮಾಜಿಕ ಕ್ರಾಂತಿ ಹಾಗೂ ವಚನದ ತಾತ್ಪರ್ಯವನ್ನು ಮನನ ಮಾಡಿಸಿದ್ದರು. ಹೀಗಾಗಿ ಇವರಿಬ್ಬರ ಮೇಲೆ ಬಸವಣ್ಣನವರ ಕ್ರಾಂತಿ ದೊಡ್ಡ ಪ್ರಭಾವ ಬೀರಿತ್ತು ಎಂದರು.
Related Articles
Advertisement
ಸಮಾರಂಭದಲ್ಲಿ ಗಾವಡಗೆರೆ ನಟರಾಜಸ್ವಾಮೀಜಿ, ಮಾದಹಳ್ಳಿಯ ಸಾಂಬಸದಾಶಿವಸ್ವಾಮೀಜಿ, ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಕಟ್ಟನಾಯಕ, ಜಯಲಕ್ಷ್ಮೀರಾಜಣ್ಣ, ವೀರಶೆ„ವ ಮಹಾಸಭಾದ ಅಧ್ಯಕ್ಷ ರಮೇಶಕುಮಾರ್, ಮಹಿಳಾಘಟಕದ ಅಧ್ಯಕ್ಷ ಬಸಮ್ಮಣ್ಣಿವಜ್ರ, ಬಸವ ಬಳಗದ ಅಧ್ಯಕ್ಷ ಸೋಮಶೇಖರ್, ಅರ್ಪಿತಾ ಪ್ರತಾಪಸಿಂಹ, ಶಿಕ್ಷಕರಾದ ಚನ್ನವೀರಪ್ಪ, ಹರವೆಮಹದೇವ್, ತಹಶೀಲ್ದಾರ್ ಬಸವರಾಜ್, ಇಒ ಕೃಷ್ಣಕುಮಾರ್, ವೀರಶೈವ ಯುವಘಟಕದ ಅಧ್ಯಕ್ಷ ಚಂದ್ರು, ಡಾ.ವೃಷಬೇಂದ್ರಸ್ವಾಮಿ, ಬಸವರಾಜ್ ಇತರರಿದ್ದರು.
ಸಾಧಕರಿಗೆ ಸನ್ಮಾನ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿರುವ ಉಯಿಗೌಡನಹಳ್ಳಿ ತೇಜಸ್, ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕಗಳಿಸಿರುವ ಡಾ.ಉಮಾಶಂಕರ್, ಮೂಳೆತಜ್ಞ ಡಾ|ಸಚ್ಚಿದಾನಂದಮೂರ್ತಿ, ಪಶುವೈದ್ಯ ಡಾ.ಷಡಕ್ಷರಿಸ್ವಾಮಿ, ಶಿರಸ್ತೇದಾರ್ ಪ್ರಭುಲಿಂಗಸ್ವಾಮಿ, ಶಿಕ್ಷಕ ಗಿರೀಶ್ ಹಾಗೂ ಎಸ್.ಎಸ್.ಎಲ್.ಸಿ-ಪಿಯುಸಿಯ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಂದೇ ಮೀಸಲಾತಿ ಸಂದೇಶ: ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ಬಸವಣ್ಣನವರು ಅಂದೇ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಆಡಳಿತದ ಅನುಭವವು ಹೊಸಬೆಳಕಿನಲ್ಲಿ ಅಧ್ಯಯನವಾಗಬೇಕಿದ್ದು, ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ಹಿಂದೆಯೇ ಮಾದಿಗರ ಮನೆಯಲ್ಲಿ ಸಹಪಂಕ್ತಿಭೋಜನ ನಡೆಸಿ, ತಮ್ಮ ಆಡಳಿತದಲ್ಲಿ ಮೀಸಲಾತಿಯ ಸಂದೇಶವನ್ನು ಜಾರಿಗೆ ತಂದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ ಹಾಕಿದ್ದರೆಂದು ಶ್ಲಾ ಸಿದರು.