Advertisement
ನಗರದ ಶಿವಕುಮಾರಸ್ವಾಮಿ ವೃತ್ತದಲ್ಲಿ ತಾಲೂಕು ವೀರಶೈವ ಸಮಾಜದ ಸಂಘ ಮತ್ತು ವೀರಶೈವ ಮಹಿಳಾ ಸಂಘ ಹಾಗೂ ಅರ್ಚಕರ ಒಕ್ಕೂಟ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಉದ್ದೇಶಿತ ಶ್ರೀನಂದಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಕಚೇರಿ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಮಯಕ್ಕೆ ಸಾಲ ಮರುಪಾವತಿಸಿ: ಶಾಸಕ ಎಲ್.ಎನ್.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಎಲ್ಲಾ ಹಳ್ಳಿಗಳಲ್ಲಿ 500 ಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳಿದ್ದು ಶಿಸ್ತುಬದ್ಧ ಹಾಗೂ ಆರ್ಥಿಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಬ್ಯಾಂಕುಗಳಲ್ಲಿ ಪುರುಷರಿಗೆ ಸಾಲ ನೀಡಲು ಹಿಂದೆ ನೋಡುತ್ತಾರೆ ಆದರೆ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿ ಕೂಡಲೇ ಸಾಲ ಮಂಜೂರು ಮಾಡುತ್ತಾರೆ.
ಸ್ತ್ರೀಶಕ್ತಿ ಸಂಘಗಳು ಅವರು ತೆಗೆದುಕೊಂಡ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುತ್ತಾರೆ ಎಂಬ ದೃಢನಂಬಿಕೆಯಿಂದ ಸಾಲ ನೀಡುತ್ತಾರೆ. ಅದೇ ರೀತಿ ಸದಸ್ಯರು ತೆಗೆದುಕೊಳ್ಳುವ ಸಾಲವನ್ನು ಮರುಪಾವತಿಸಿದಾಗ ಬಾಂಧವ್ಯ ಹೆಚ್ಚಾಗಿ ಸಂಸ್ಥೆ ಉತ್ತಮವಾಗಿ ನಡೆಯಲಿದೆ ಎಂದರು.
ಸನ್ಮಾನ: ಇದೇ ವೇಳೆ ತಾಲೂಕಿನ ವೀರಶೈವ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನೂತನವಾಗಿ ದೇವನಹಳ್ಳಿ ಹಾಗೂ ನೆಲಮಂಗಲ ಪುರಸಭೆಗೆ ಆಯ್ಕೆಯಾದ ಸದಸ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಚಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ವಿಜಯ್ ಕುಮಾರ್, ಪುರಸಭೆ ಸದಸ್ಯರಾದ ನಾಗೇಶ್, ವೈ.ಸಿ.ಸತೀಶ್ ಕುಮಾರ್, ಬಿಬಿಎಂಪಿ ಘಟಕ ಅಧ್ಯಕ್ಷ ಚಂದ್ರಮೌಳಿ, ಬೆಂಗಳೂರು ಉತ್ತರ ಘಟಕ ಅಧ್ಯಕ್ಷ ತಿಂಡ್ಲು ಬಸವರಾಜ್, ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದ ಮೂರ್ತಿ, ವೀರಶೈವ ಸಮಾಜದ ಉಪಾಧ್ಯಕ್ಷ ನಾಗಭೂಷಣ್, ಕೆ.ಸದಾಶಿವಯ್ಯ, ಮಹಿಳಾ ಘಟಕ ಅಧ್ಯಕ್ಷೆ ಉಷಾ ಮತ್ತಿತರರಿದ್ದರು.