Advertisement

ಬಸವಾನಂದ ಶ್ರೀಗೆ ಅನುಭವ ಮಂಟಪ ಪ್ರಶಸ್ತಿ

10:59 PM Nov 23, 2019 | Lakshmi GovindaRaj |

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಆಶಯದಂತೆ ಅನುಭವ ಮಂಟಪದಲ್ಲಿ ನಡೆಯುವ ಪ್ರತಿಯೊಂದು ಸಮಾರಂಭಗಳನ್ನು ಸಣ್ಣ ದೋಷವೂ ಇಲ್ಲದಂತೆ ರೂಪಿಸಬೇಕು. ಆಗ ಮಾತ್ರ ನಾವು ಶರಣರ ತತ್ವ ಪಾಲಿಸಿದಂತಾಗುತ್ತದೆ ಎಂದು ಮನಗುಂಡಿ ಶ್ರೀ ಗುರುಬಸವ ಮಹಾ ಮನೆ ಶ್ರೀ ಬಸವಾನಂದ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ಅನುಭವ ಮಂಟಪ ಪರಿಸರದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್‌, ಅನುಭವ ಮಂಟಪ ಆಯೋಜಿಸಿದ್ದ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು ಮತ್ತು ಬಸವಾದಿ ಶರಣರು ಕಟ್ಟ ಬಯಿಸಿದ್ದ ಅನುಭವ ಮಂಟಪದ ಸಂಭ್ರಮವನ್ನು ಮತ್ತೂಮ್ಮೆ ನಾವು ನೋಡುವಂತಾಗಲಿ ಎಂದು ಹಾರೈಸಿದರು.

ಪ್ರಶಸ್ತಿಯು 50 ಸಾವಿರ ರೂ. ನಗದು, ಪ್ರಶಸ್ತಿ ಮತ್ತು ಫಲಕ ಒಳಗೊಂಡಿದೆ. ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಈ ಪ್ರಶಸ್ತಿ ದಾಸೋಹಿಯಾಗಿದ್ದಾರೆ. ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಸಚಿವ ಪ್ರಭು ಚವ್ಹಾಣ, ಸಂಸದರಾದ ಭಗವಂತ ಖೂಬಾ, ಡಾ.ಉಮೇಶ ಜಾಧವ ಹಾಗೂ ಅನುಭವ ಮಂಟಪ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಬಿ.ನಾರಾಯಣರಾವ್‌, ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next