ಅಣ್ಣಿಗೇರಿ: ವಚನ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಕಟಿಸಿ ಬೆಳಕಿಗೆ ತಂದವರು ಹಳಕಟ್ಟಿ ಫಕ್ಕೀರಪ್ಪನವರು. ಹಳಕಟ್ಟಿಯವರಿಗೆ ಸಹಾಯ ಮಾಡಿದವರು ಹಾನಗಲ್ ಕುಮಾರ ಶಿವಯೋಗಿಗಳು. ಆ ಮಹಾಗುರುವಿನ ಗುರು ಲಿಂ| ಯಳಂದೂರು ಬಸವಲಿಂಗ ಶಿವಯೋಗಿಗಳು. ಅವರ ಜಾಗೃತ ಗದ್ದುಗೆ ಅಣ್ಣಿಗೇರಿಯ ತೋಂಟದಾರ್ಯ ಮಠದಲ್ಲಿರುವುದು ನಮ್ಮೆಲ್ಲರ ಭಾಗ್ಯ ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ತೋಂಟದಾರ್ಯ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಯಳಂದೂರಿನಿಂದ ಬಂದ ಬಸವಲಿಂಗ ಶಿವಯೋಗಿಗಳು ಬರೀ ವೇದಾಂತದ ಜ್ಞಾನವೊಂದೇ ಮುಖ್ಯವಲ್ಲ, ಆ ಜ್ಞಾನ ಕ್ರಿಯೆಯಾಗಬೇಕೆಂದು ಚರ್ಚಿಸಿ ತಿಳಿಸಿದ್ದರು ಎಂದು ಹೇಳಿದರು.
ಭೈರನಟ್ಟಿ ಶಾಂತಲಿಂಗ ಸ್ವಾಮಿಗಳು, ದಾಸೋಹ ಮಠದ ಶಿವಕುಮಾರ ಸ್ವಾಮಿಗಳು, ನೀಲಗುಂದ ಪ್ರಭು ಸ್ವಾಮಿಗಳು ಭಾಗವಹಿಸಿ ಯಳಂದೂರು ಬಸವಲಿಂಗ ಶ್ರೀಗಳ ಕುರಿತು ಮಾತನಾಡಿದರು. ಬಸವಲಿಂಗ ಸ್ವಾಮಿಗಳ ಕ್ರಿಯಾ ಸಮಾಧಿ ನವೀಕರಣ ಹಾಗೂ ಅವರ ಪಂಚಲೋಹದ ಮೂರ್ತಿ ಮಾಡಿಸಿದ ಶ್ರೀಕಂಠ ಚೌಕಿಮಠ ಹಾಗೂ ಮಂಗಲಾದೇವಿ ದಂಪತಿ, ಸಮಾಧಿ ನವೀಕರಣ ಹಾಗೂ ಶ್ರೀಮಠದ ಇತರ ಕಾರ್ಯಕ್ಕೆ ಗ್ರೆನೈಟ್ ಸೇವೆ ಮಾಡಿದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಣಿ ದಂಪತಿ, ದಾಸೋಹ ಕಾರ್ಯಕ್ಕೆ 25,000 ರೂ. ನೀಡಿದ ಪ್ರಕಾಶ ಲಿಂಬಯ್ಯಸ್ವಾಮಿಮಠ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ:ಎತ್ತಿಗೆ ಭಾರ ಕಡಿಮೆ ಮಾಡಲು ಹೊಸ ತಾಂತ್ರಿಕತೆ
ಬೆಳಗ್ಗೆ ಪ್ರೊ| ಜಿ.ಬಿ. ಹಳ್ಯಾಳ ಅವರು ಸಹಜ ಶಿವಯೋಗ ಕಾರ್ಯ ಕ್ರಮ ನಡೆಸಿಕೊಟ್ಟರು. ಬಿಜೆಪಿ ಧುರೀಣ ಷಣ್ಮುಖ ಗುರಿಕಾರ, ಮಾತೋಶ್ರೀ ಪಾರ್ವತಿತಾಯಿ, ರೇವಣಸಿದ್ದಯ್ಯ ಮರಿದೇವರಮಠ, ಮಲ್ಲಿಕಾರ್ಜುನ ಸುರಕೋಡ, ಮುತ್ತಣ್ಣ ನವಲಗುಂದ, ಶಿವಯೋಗಿ ಹುಬ್ಬಳ್ಳಿ,ಹಾಲಪ್ಪ ತುರಕಾಣಿ, ಮುತ್ತಣ್ಣ ಹಾಳದೋಟರ, ಈರಣ್ಣ ಹುಣಸಿಮರದ, ಸುರೇಶ ಬಿಳೇಬಾಳ, ಡಾ| ಎನ್.ಎಚ್.ಬಿಳೇಬಾಳ, ಡಾ| ಶಶಿಧರ ಹರ್ಲಾಪುರ ಭಾಗವಹಿಸಿದ್ದರು. ಭಾವನಾ ಹಡಪದ ಪ್ರಾರ್ಥಿಸಿದರು. ಪ್ರೊ| ಎಸ್.ಎಸ್. ಹರ್ಲಾಪುರ ಸ್ವಾಗತಿಸಿದರು. ಬಸವರಾಜ ನಲವಡಿ ನಿರೂಪಿಸಿದರು.