Advertisement

ಸಾಧನೆಗೆ ಮಾದರಿ ಸಾವಿತ್ರಾ

06:13 PM Dec 27, 2019 | Naveen |

ಬಸವಕಲ್ಯಾಣ: ನಗರದ ಸೀತಾ ಕಾಲೋನಿಯ ನಿವಾಸಿ ಹಾಗೂ ರಾಜೇಶ್ವರ ಬಿಆರ್‌ಪಿ ಅ ಧಿಕಾರಿ ಸಾವಿತ್ರಾ ಕರಬಸಪ್ಪಾ ಬಿರಾದಾರ್‌ ಅವರು ಸತತ ಶ್ರಮದಿಂದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ 371 (ಜೆ) ಅಡಿ 4ನೇ ರ್‍ಯಾಂಕ್‌ ಪಡೆದು ಸಹಾಯಕ ಆಯುಕ್ತರಾಗಿ ನೇಮಕಗೊಳ್ಳುವ ಮೂಲಕ ಬಾಲ್ಯದ ಕನಸು ನನಸಾಗಿಸಿಕೊಂಡಿದ್ದಾರೆ. ಅಲ್ಲದೇ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯ ಪುತ್ರಿಯಾಗಿ ಹೊರಹೊಮ್ಮಿದ್ದಾರೆ.

Advertisement

ಕರ್ನಾಟಕ ಲೋಕಸೇವಾ ಆಯೋಗವು 2015ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ಎ ಮತ್ತು ಬಿ ಹುದ್ದೆಗೆ ಆಹ್ವಾನಿಸಿತ್ತು. ಅದರಂತೆ 2017ರಲ್ಲಿ ಪ್ರಥಮ ಹಂತದ ಪರೀಕ್ಷೆ, 2018ರಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ 371 (ಜೆ) ಅಡಿ ಸಹಾಯಕ ಆಯುಕ್ತರಾಗಿ ಆಯ್ಕೆಗೊಂಡಿದ್ದಾರೆ.

ಸಾವಿತ್ರಾ 5ನೇ ತರಗತಿಯಲ್ಲಿದ್ದಾಗ ನವೋದಯ ಪರೀಕ್ಷೆ ಬರೆಯಲು ತಂದೆ ದಿ.ಬಸವರಾಜ ಇಲ್ಲಾಮಲ್ಲೆ ಜೊತೆಗೆ ನಗರಕ್ಕೆ ಬಂದಾಗ ಆಗಿನ ಜಿಲ್ಲಾಧಿಕಾರಿ ರತ್ನ ಪ್ರಭಾ ಅವರನ್ನು ಕಂಡು ವರು ಯಾರು ಎಂದು ಪ್ರಶ್ನೆ ಮಾಡಿದ್ದರು. ಆಗ, ಅವರು ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವವರು ಅಂದಾಗ, ಅದೇ ಮದಲ್ಲಿ ಉಳಿದು ಸತತ ಕಠಿಣ ಪರಿಶ್ರಮದ ಈ ಸಾಧನೆಗೆ ಸ್ಫೂರ್ತಿಯಾಗಿದೆ.

ಹುಲಸೂರಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಶ್ರೀ ಜಗದ್ಗುರು ಬಸವೇಶ್ವರ ಪ್ರೌಢ ಶಿಕ್ಷಣ ಮುಗಿಸಿದ್ದಾರೆ. ಎಸ್‌ಎಸ್‌ಕೆಬಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ನಂತರ ಟಿಸಿಎಚ್‌ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಾಥಮಿಕ ಶಾಲೆ ಶಿಕ್ಷಕ್ಷಿಯಾಗಿ ಸೇವೆಗೆ ಸೇರಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ, ಇಷ್ಟಕ್ಕೆ ತೃಪ್ತಿಗೊಳ್ಳದ ಇವರು, ಏನಾದರೂ ಮಾಡಿ ಕನಸು ಈಡೇರಿಸಕೊಳ್ಳಬೇಕು ಎಂದು ಛಲದಿಂದ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ, ಎಂಎ, ಇಂಗ್ಲಿಷ್‌ ಮತ್ತು ಬಿಇಡಿ ಮುಗಿಸಿಕೊಂಡು ಗುರಿ ಮುಟ್ಟುವವರೆಗೂ ಶ್ರಮಿಸಿದ್ದಾರೆ.

ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆ ವರೆಗೆ ಓದುವುದು, ಜೊತೆಗೆ ಮನೆಯ ಗೃಹಿಣಿಯಾಗಿ ಮಾಡಬೇಕಾದ ಜವಬ್ದಾರಿಯನ್ನು ನಿಭಾಯಿಸುವುದೇ ಇವರ ಜೀವನದ ಗುರಿಯಾಗಿತ್ತು. ಹೀಗಾಗಿಯೇ ಇಂದು ಪ್ರತಿಯೊಬ್ಬರು ಮೆಚ್ಚಿಕೊಳ್ಳುವಂತಹ ಹುದ್ದೆಗೆ ಏರಲು ಸಾಧ್ಯವಾಗಿದೆ. ಈ ಮೊದಲು ಮೂರು ಸಲ ಎಫ್‌ ಡಿಎ ಮತ್ತು ಎರಡು ಸಲ ಪಿಡಿಒ ಹುದ್ದೆ ಹುಡುಕಿಕೊಂಡು ಬಂದರೂ ಸೇವೆಗೆ ಹಾಜರಾಗಲಿಲ್ಲ. ಕಾರಣ ಕಲ್ಯಾಣ ಕರ್ನಾಟಕ ಬಿಟ್ಟು ಹೋಗಬೇಕಾದರೆ ಒಂದು ದೊಡ್ಡ ಹುದ್ದೆಯನ್ನು ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಆಶೆಯಾಗಿತ್ತು. ಅದರಂತೆ ನಾನು ಸಹಾಯಕ ಆಯುಕ್ತರಾಗಿ ನೇಮಕ ಗೊಂಡಿರುವುದು ಖುಷಿ ತಂದಿದೆ ಎಂದು ಸಾವಿತ್ರಾ ಹೇಳುತ್ತಾರೆ.

Advertisement

ಯಾವುದೇ ಕೋಚಿಂಗ್‌ ತರಗತಿಗಳಿಗೆ ಹೋಗಿಲ್ಲ. ಬಾಲ್ಯದಲ್ಲಿ ನನ್ನ ತಂದೆ ನನಗೆ ತೆಗೆದುಕೊಟ್ಟಿರುವ ಪುಸ್ತಕ ಹಾಗೂ ಅವರು ಪತ್ರಿಕೆ ವಿತರಕರಾಗಿದ್ದರಿಂದ ಪತ್ರಿಕೆಗಳೇ ನನಗೆ ಕೋಚಿಂಗ್‌ ಕ್ಲಾಸ್‌ ಆದವು. ಈ ಸಾಧನೆಗೆ ನನ್ನ ತಂದೆಯ ಪ್ರೋತ್ಸಾಹವೇ ಸ್ಫೂರ್ತಿ ಎನ್ನುತ್ತಾರೆ.ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕು ಎಂಬ ಈ ಸ್ಪರ್ಧಾತ್ಮಕ ಯುಗದಲ್ಲಿ ಕುಟುಂಬ ನಿರ್ವಹಣೆ ಜೊತೆಗೆ, ಛಲ ಬಿಡದೆ ಗುರಿ ಸಾಧಿಸಿರುವುದು ಇತರರಿಗೆ ಮಾದರಿಯಾಗಿದ್ದಾರೆ.

ಪಂಚದಲ್ಲಿ ಬಿಲ್‌ ಗೇಟ್ಸ್‌ನಿಂದ ಹಿಡಿದು ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಗಳು ಇರುತ್ತವೆ. ಅಂತಹ ಸಮಸ್ಯೆಗಳನ್ನು ನಾವು ಧನಾತ್ಮಕವಾಗಿ ತೆಗೆದುಕೊಂಡು ಧೈರ್ಯದಿಂದ ಸಾಧನೆ ಮಾಡಿಯೇ ತೋರಿಸುತ್ತೇನೆ. ನಾನು ಸಮರ್ಥಗಳು ಎಂದು ತಿಳಿದುಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ.
ಸಾವಿತ್ರಾ ಕರಬಸಪ್ಪಾ ಬಿರಾದಾರ್‌

 

ವೀರಾರೆಡ್ಡಿ ಆರ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next