Advertisement

ನಾಡು-ನುಡಿಗಾಗಿ ಒಗ್ಗೂಡಿ ಹೋರಾಡೋಣ

03:20 PM Apr 08, 2019 | |

ಬಸವಕಲ್ಯಾಣ: ನಾಡು-ನುಡಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಡಬೇಕು. ಆಗ ಮಾತ್ರ ಕನ್ನಡ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಲಬುರಗಿಯ ಸಾಹಿತಿ ಡಾ| ಸುಜಾತಾ ಜಂಗಮಶೆಟ್ಟಿ ಹೇಳಿದರು.

Advertisement

ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಹಾವಗಿಲಿಂಗೇಶ್ವರ ಮಠದ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಯುವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.

ಬೀದರ್‌ ಜಿಲ್ಲೆಯ ಭಾಲ್ಕಿ ಹಿರೇಮಠದಲ್ಲಿ ಹೊರಗಡೆ ಉರ್ದು ಬೋರ್ಡ್‌ ಹಾಕಿ ಒಳಗೆ ಕನ್ನಡ ಕಲಿಸಿದ ಕಿರ್ತಿ ಮಠಕ್ಕೆ ಸಲ್ಲುತ್ತದೆ. ಅಲ್ಲದೆ ಹುಲಸೂರು ಮಠದಲ್ಲಿ ಡಾ|ಶಿವಾನಂದ ಮಹಾಸ್ವಾಮಿಗಳು ಶಿವಶರಣರ ವಚನಗಳೊಂದಿಗೆ ಕನ್ನಡ ಸಾಹಿತ್ಯವನ್ನು ಕೂಡ ಪಾದಯಾತ್ರೆ ಮೂಲಕ ಪ್ರಚಾರ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಗಡಿಭಾಗದಲ್ಲಿ ಇಂತಹ ಸಮ್ಮೇಳನ ನಡೆಸುವ ಮೂಲಕ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯವನ್ನು ಕಸಾಪ ಜಿಲ್ಲಾಧ್ಯಕ್ಷ ಸುರೇಶ
ಚನ್ನಶೆಟ್ಟಿ ಹಾಗೂ ಎಲ್ಲ ಸಾಹಿತಿಗಳ ಸಹಕಾರದಿಂದ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಗಡಿಗೌಡಗಾಂವ ಗ್ರಾಮದ ಶ್ರೀ ಹಾವಲಿಂಗೇಶ್ವರ ಮಠದ ಶ್ರೀ ಶಾಂತವೀರ ಶಿವಾಚಾರ್ಯ ಮಾತನಾಡಿ, ಪ್ರತಿ ಸಲ ಬೇರೆ ಬೇರೆ ಮಠಗಳಲ್ಲಿ ಸಮ್ಮೇಳನಗಳನ್ನು ನಡೆಸಲಾಗುತಿತ್ತು. ಆದರೆ ಈ ಬಾರಿ ಗಡಿಗೌಡಗಾಂವ ಮಠದಲ್ಲಿ 25
ವರ್ಷಗಳ ನಂತರ ಪ್ರಥಮ ಬಾರಿಗೆ ಕನ್ನಡ ಹಬ್ಬ ನಡೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ನುಡಿದರು.

Advertisement

ಹುಲಸೂರಿನ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಡಾ| ರುದ್ರಮಣಿ ಮಠಪತಿ ಪ್ರಾಸ್ತಾವಿಕ
ಮಾತನಾಡಿದರು. ಗ್ರಾಪಂ ಅಧ್ಯಕ್ಷ ದತ್ತಾತ್ರಿ ರಾಘು, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಅನೀಲ ತಾಂಬಳೆ, ಬಾಬುರಾವ್‌ ಪಾಟೀಲ, ಸಂಗಪ್ಪ ತಾಂಬಳೆ, ರೆವಣಸಿದ್ದ ಚಿಲ್ಲಾಬಟ್ಟೆ,
ರಾಜಕುಮಾರ ಪಾಲಾಪುರೆ, ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮಿ, ಉಪಾಧ್ಯಕ್ಷ ರಮೇಶ ಉಮ್ಮಾಪುರೆ, ಸಾಲಿವಾನ ಕಾಕನಾಳೆ,
ಕಲ್ಯಾಣರಾವ್‌ ಮದರಗಾಂವಕರ್‌, ಧನರಾಜ ರಾಜೋಳೆ, ಡಾ| ಭೀಮಾಶಂಕರ ಬಿರಾದಾರ, ದೇವಿಂದ್ರ ಬರಗಾಲೆ, ಕೆಜಿ ಶರಣಪ್ಪಾ, ಶಂಕರ ಕುಕ್ಕಾಪಾಟೀಲ ಇದ್ದರು. ಕಸಾಪ ಉಪಾಧ್ಯಕ್ಷ ರಮೇಶ ಉಮ್ಮಾಪುರೆ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next