Advertisement

ಸೈದಾಪುರದಲ್ಲಿ ಬಸವಕಲ್ಯಾಣ-ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ

05:05 PM Apr 10, 2022 | Team Udayavani |

ಸೈದಾಪುರ: ವಿಶ್ವ ಮಾನವೀಯತೆ, ಸಮಾನತೆಯ ಕಲ್ಪನೆಯೊಂದಿಗೆ ಬಸವಣ್ಣ ಕಟ್ಟಿದ್ದ ವಿಶ್ವದ ಮೊಟ್ಟ ಮೊದಲನೆಯ ಸಂಸತ್ತಾದ ಬಸವಕಲ್ಯಾಣದ ಅನುಭವ ಮಂಟಪ ನಮ್ಮ ಭಾಗದ ಹೆಮ್ಮೆಯ ಪ್ರತೀಕ ಎಂದು ವಿಕಾಸ ಅಕಾಡೆಮಿ ಸಂಚಾಲಕ ಪ್ರಕಾಶಗೌಡ ಸೈದಾಪುರ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ವಿಶ್ವನಾಥ ಮಂದಿರದಲ್ಲಿ ಬಸವಕಲ್ಯಾಣ-ಕಲ್ಯಾಣ ಕರ್ನಾಟಕ ಯಾತ್ರಾ ಪರ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸಮಾಜದಲ್ಲಿರುವ ಜಾತಿ, ಮತ, ಪಂಥಗಳನ್ನು ತೊಡೆದುಹಾಕಲು ಬಸವಣ್ಣನವರು ಅಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ರೂಪಿಸಿದ್ದರು. ಆದರೆ ಇಂದು ಅದಕ್ಕೆ ನಿಜವಾದ ಅರ್ಥ ನೀಡಲು ಬಸವಕಲ್ಯಾಣವನ್ನು ಸಾಂಸ್ಕೃತಿಕ ನಗರವಾಗಿ ಮತ್ತು ವಿಶ್ವ ಪ್ರಸಿದ್ಧ ಯಾತ್ರಾ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಬಸವರಾಜ ಪಾಟೀಲ್‌ ಸೇಡಂ ಅವರು ಕಲ್ಯಾಣ ಕರ್ನಾಟಕವನ್ನು ತಮ್ಮ ಅಗಾಧ ಮತ್ತು ನಿಸ್ವರ್ಥಾ ನಿರಂತರ ಸೇವೆಯ ಮೂಲಕ ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಆಶಯದಂತೆ ಯುವ ಜನತೆ ಕೈಜೋಡಿಸಿ ಕರ್ನಾಟಕಕ್ಕೆ ಕಲ್ಯಾಣ ತಂದುಕೊಡೋಣ. ಈ ದಿಸೆಯಲ್ಲಿ ಬಸವಕಲ್ಯಾಣದಲ್ಲಿ ಬಹುಮುಖ ಕಾರ್ಯಕ್ರಮ ಅನಾವರಣ ಮಾಡಿ ಮೇಲು-ಕೀಳು, ಬಡವ-ಶ್ರೀಮಂತ ಎನ್ನದೇ ಸಕಲ ಜೀವಾತ್ಮಕ್ಕೆ ಒಳಿತನ್ನೇ ಬಯಸುವಂತಹ ಜೀವನ ನಮ್ಮದಾಗಲಿ ಎಂದು ಹೇಳಿದರು.

ವಿಕಾಸ ಅಕಾಡೆಮಿ ಪ್ರಮುಖರಾದ ಶ್ರೀಧರ ಘಂಟಿ, ಬಸವರಾಜಪ್ಪಗೌಡ ಬಾಲಛೇಡ್‌, ಗ್ರಾಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಉಪಾಧ್ಯಕ್ಷೆ ನೇತ್ರಾವತಿ ದೊರೆ, ಸದಸ್ಯರಾದ ಸಿದ್ದಲಿಂಗರೆಡ್ಡಿ ದೇಶಮುಖ್‌, ಶಿಲ್ಪಾ ಕಲಾಲ್‌, ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಭೀಮಣ್ಣ ಬಿ. ವಡವಟ್‌, ಅಂಜನೇಯ ಕಾವಲಿ, ತಿಮ್ಮಣ್ಣ ವಿಶ್ವಕರ್ಮ, ಮಹೇಶ ಹುಣಸೆಮರ, ಸಾಬಣ್ಣ ಗೂಗಲ್‌, ಬಸಪ್ಪ ಚಿಗರಿ, ಕಾಶಿನಾಥ ಶೆಟ್ಟಿಹಳ್ಳಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next