Advertisement

ನಿರ್ಲಕ್ಷಕ್ಕೊಳಗಾದ ಐತಿಹಾಸಿಕ ಕೋಟೆ

11:54 AM Dec 02, 2019 | |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ದಕ್ಷಿಣ ಭಾರತದ ಅತ್ಯಂತ ಹಳೆಯ ಮತ್ತು ಭವ್ಯವಾದ ಕೋಟೆಗಳಲ್ಲಿ ಒಂದಾಗಿರುವ ನಗರದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ಕೋಟೆ ಪ್ರಾಚ್ಯವಸ್ತು ಇಲಾಖೆ ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಇದ್ದರೂ ಅನಾಥವಾಗಿ, ವರ್ಷ ಕಳೆದಂತೆ ಅವಸಾನದತ್ತ ಸಾಗಿದೆ. ಇದು ಪ್ರವಾಸಿಗರು ಮತ್ತು ಇತಿಹಾಸ ತಜ್ಞರಿಗೆ ಬೇಸರ ಮೂಡಿಸಿದೆ. 11ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆ ಭವಿಷ್ಯದ ಪೀಳಿಗೆ ಮತ್ತು ಪ್ರವಾಸಿಗರಿಗೆ ಆಕರ್ಷಣೀಯವಾಗಬೇಕಾದ ಸ್ಥಳ, ಇಂದು ನಿರ್ಲಕ್ಷ್ಯಕ್ಕೊಳಗಾಗಿ ಹಾಳು ಕೊಂಪೆಯಾಗಿದೆ.

Advertisement

ಅಭಿವೃದ್ಧಿ ಕಾಣದ ಇಂತಹ ಕೋಟೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರಿಂದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ಇಲಾಖೆ 4 ರೂ. ಮತ್ತು ಮಕ್ಕಳಿಂದ 2 ರೂ. ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ. ಆದರೆ ಒಳಗೆ ಹೋದ ಪ್ರವಾಸಿಗರು ಮತ್ತು ಶಾಲೆಯ ವಿದ್ಯಾರ್ಥಿಗಲು ಗೋಡೆ ಮೇಲೆ ಬೆಳೆದ ಮುಳ್ಳಿನ ಗಿಡಗಳು, ಹಾಳು ಬಿದ್ದು ಗೋಡೆಗಳನ್ನು ನೋಡಿ ನಿರಾಶೆಯಿಂದ ಹೊರಗಡೆ ಬರುವಂತಾಗಿದೆ. 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣ ಹಾಗೂ ಶರಣ ಭೂಮಿ ಅಂತಾರಾಷ್ಟ್ರೀಯ ಪ್ರವಾಸಿಗರ ತಾಣವಾಗಬೇಕು ಹಾಗೂ ಜಿಲ್ಲಾ ಕೇಂದ್ರವಾಗಬೇಕು ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ವೇದಿಕೆ ಮೇಲೆ ಭಾಷಣ ಹೊಡೆದು ಹೋಗುತ್ತಾರೆ. ಆದರೆ ಕೋಟೆ ಅಭಿವೃದ್ಧಿ ಕಡೆ ಇಂದಿಗೂ ಗಮನ ಹರಿಸದಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಬೀದರ ಕೋಟೆಗೆ ನಿತ್ಯ ನೂರಾರು ಪ್ರವಾಸಿಗಳು ಭೇಟಿ ನೀಡುವಂತೆ ಆಕರ್ಷಣಿಯವಾಗಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಬಸವಕಲ್ಯಾಣದ ಶರಣರ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಆರಂಭಿಸಲಾದ ಅಭಿವೃದ್ಧಿ ಮಂಡಳಿಯು ಕೋಟೆ ಅಭಿವೃದ್ಧಿಗೆ ಹಿಂಜರಿಯುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಕೋಟೆ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಅಧಿಕಾರಿಗನ್ನು ಕೇಳಿದರೆ, ಸಂಬಂಧ ಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವಾಗಿ ಅಭಿವೃದ್ಧಿ ಆರಂಭಿಸಲಾಗುವುದು ಎಂಬ ಹೇಳಿಕೆಗಳು ಬರುತ್ತಿವೆ. ಆದರೆ ಇಂದಿಗೂ ಕೋಟೆ ಅಭಿವೃದ್ಧಿಯಿಂದ ದೂರ ಉಳಿದಿರುವುದು ಮಾತ್ರ ಪವಾಸಿಗರಿಗೆ ಬೇಸರ ಉಂಟುಮಾಡಿದೆ. ದೇಶದ ಹಳೆಯ ಕೋಟೆಯಲ್ಲಿ ಒಂದಾದ ಈ ಭವ್ಯ ಕೋಟೆ ಮುಂದಿನ ಪೀಳಿಗೆಗಾಗಿ ಮತ್ತು ಪವಾಸಿಗರಿಗಾಗಿ ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಕೆಲವು ವರ್ಷಗಳಲ್ಲಿ ಕೋಟೆ ಸಂಪೂರ್ಣವಾಗಿ ಹಾಳು ಕೊಂಪೆ ಆಗುವುದರಲ್ಲಿ ಅನುಮಾನವಿಲ್ಲ.

ಕಲ್ಯಾಣ ಚಾಲುಕ್ಯರ ಅರಸ ಒಂದನೇ ಸೋಮೇಶ್ವರನಿಂದ ನಿರ್ಮಾಣಗೊಂಡ ಈ ಕೋಟೆಯಲ್ಲಿ ವಿಶ್ವಗುರು ಬಸವಣ್ಣನವರು ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಈ ಕೋಟೆಯನ್ನು ಬಿಕೆಡಿಬಿ ಹಾಗೂ ಪುರಾತತ್ವ ಇಲಾಖೆ ಸಂಹಯೋದಲ್ಲಿ ಅಭಿವೃದ್ಧಿ ಪಡಿಸಿದಾಗ ಮಾತ್ರ ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿತಾಣವಾಗಲು ಸಾಧ್ಯ.
.ಪ್ರೊ| ರುದ್ರೇಶ್ವರ ಸ್ವಾಮಿ
ಗೋರ್ಟಾ, ಇತಿಹಾಸ ಸಂಶೋಧಕ

Advertisement
Advertisement

Udayavani is now on Telegram. Click here to join our channel and stay updated with the latest news.

Next