ಬಸವಕಲ್ಯಾಣ: ಕಾರಹುಣ್ಣೆಮೆ ಕಳೆದರೂ ಮುಂಗಾರು ಮಳೆ ಬಾರದಿರುವುದರಿಂದ ರೈತರು ಆಕಾಶದ ಕಡೆ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಮಳೆ ಸುರಿದಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
ರಾತ್ರಿ ಸುರಿದ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದೆ ಹಾಗೂ ಬಂಡೆಯಂದಿದ್ದ ಮಣ್ಣಿನ ಹೆಂಟೆಗಳು ಕರಗಿ ಭೂಮಿ ಬಿತ್ತಗೆ ಹದವಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ಕಂಡುಬಂತು.
Related Articles
Advertisement
ರೈತರು ಬಿತ್ತನೆ ಮಾಡುವಷ್ಟು ಮಳೆ ಆಗಿದೆ. ಆದರೆ ಇನ್ನೊಂದು ಸಲ ಮಳೆ ಬಂದಾಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ.• ವೀರಶೆಟ್ಟಿ ರಾಠೊಡ,
ಕೃಷಿ ಸಹಾಯಕ ನಿರ್ದೇಶಕ, ಬಸವಕಲ್ಯಾಣ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಾ ಇದ್ದೆವು. ಈ ಮಳೆಯಿಂದ ಸ್ವಲ್ಪ ಬಿತ್ತನೆಯ ಆಶೆ ಮೂಡಿದೆ. ಇನ್ನೂ ಹೆಚ್ಚು ಮಳೆ ಬಂದಾಗ ಮಾತ್ರ ತಾಲೂಕಿನಾದ್ಯಂತ ಬಿತ್ತನೆ ಕಾರ್ಯವನ್ನು ರೈತರು ಚುರುಕಗೊಳಿಸಬಹುದು.
• ಸನ್ಮೂಖಪ್ಪಾ ಜಯಪ್ಪಾ, ರೈತ