Advertisement

ಬಸವ ಧರ್ಮ ಜಗತ್ತಿನ ಏಕೈಕ ವೈಜ್ಞಾನಿಕ ಧರ್ಮ: ರಂಜಾನ್‌ದರ್ಗಾ

02:30 PM May 04, 2022 | Team Udayavani |

ಭಾಲ್ಕಿ: ಬಸವ ಧರ್ಮ ಜಗತ್ತಿನ ಏಕೈಕ ವೈಜ್ಞಾನಿಕ ಧರ್ಮವಾಗಿದ್ದು, ಇದು ಶರೀರ ಮತ್ತು ಮನಸ್ಸಿಗೆ ಅವಶ್ಯವಾಗಿದೆ ಎಂದು ಸಾಹಿತಿ ರಂಜಾನ್‌ದರ್ಗಾ ಹೇಳಿದರು.

Advertisement

ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ, ಬಸವಣ್ಣನರ ವಚನಗಳು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಧರ್ಮ ಮಾನವರನ್ನು ಶಿವ ಸ್ವರೂಪಿಗಳಾಗಿ ಕಾಣಲು ಸೂಚಿಸುತ್ತದೆ. ಈ ಧರ್ಮದಲ್ಲಿ ಎಲ್ಲವೂ ವೈಜ್ಞಾನಿಕತೆಯಿಂದ ಕೂಡಿದೆ ಎಂದರು.

ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ವಚನಗಳು ಬದುಕಿನ ಅನುಭವದ ಅಮೃತ ವಾಣಿಗಳಾಗಿವೆ ಎಂದರು.

ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜಧನ್ನೂರ್‌ ಮಾತನಾಡಿದರು. ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮಧುಕರಗಾಂವ್ಕರ್‌ ನಿರೂಪಿಸಿದರು.

Advertisement

ಬಸವ ಜಯಂತಿ ಪ್ರಯುಕ್ತ ಬಾಲ ಬಸವಣ್ಣನ ವೇಷ ಧರಿಸಿದ್ದ ಪುಟಾಣಿ ಮಕ್ಕಳು ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿ ಗಮನ ಸೆಳೆದರು. ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ರಚಿಸಿದ ಬಸವಣ್ಣನವರ ವಚನಗಳು ಎಂಬ ಮೌಲಿಕ ಕೃತಿಯನ್ನು ಸಾಹಿತಿ ರಂಜಾನ್‌ ದರ್ಗಾ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next