Advertisement

ಪ್ರತಿ ಗ್ರಾಮದಲ್ಲೂ ಬಸವ ದಳ ಶಾಖೆ

02:45 PM Mar 29, 2022 | Team Udayavani |

ಬೀದರ: ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಿಗೂ ರಾಷ್ಟ್ರೀಯ ಬಸವ ದಳ ಸಂಘಟನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

Advertisement

ಹುಮನಾಬಾದ ತಾಲೂಕಿನ ಅಮೀರಾಬಾದ್‌ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಸವ ದಳವು ದೇಶದ ಅತಿದೊಡ್ಡ ಬಸವ ಪರ ಸಂಘಟನೆಯಾಗಿದೆ. ಐದು ರಾಜ್ಯಗಳಲ್ಲಿ 1,200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬಸವಾದಿ ಶರಣರ ತತ್ವಗಳ ಪ್ರಸಾರದ ಜತೆಗೆ ಯುವಕರಲ್ಲಿ ಶರಣ ಸಂಸ್ಕೃತಿ ಬೆಳೆಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಬೇಕು. ಜಾಗತಿಕ ಧರ್ಮಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಲಿಂ. ಲಿಂಗಾನಂದ ಸ್ವಾಮೀಜಿ ಹಾಗೂ ಲಿಂ| ಮಾತೆ ಮಹಾದೇವಿ ಅವರ ಕನಸಾಗಿತ್ತು. ಅದನ್ನು ನನಸಾಗಿಸುವವರೆಗೂ ರಾಷ್ಟ್ರೀಯ ಬಸವ ದಳ ವಿರಮಿಸದು ಎಂದು ತಿಳಿಸಿದರು.

ಅನಿಲಕುಮಾರ ಕುಡತಿ ಗುರುಬಸವ ಪೂಜೆ ನೆರವೇರಿಸಿದರು. ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ರವಿ ಪಾಪಡೆ, ನಾಗಶೆಟ್ಟಿ ಶೆಟಕಾರ್‌, ಸಿದ್ರಾಮ ಶೆಟಕಾರ್‌, ಸಂಜುಕುಮಾರ ಪಾಟೀಲ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಸುರೇಶ ಮರೂರಕರ್‌ ಸ್ವಾಗತಿಸಿ ವಿಜಯಕುಮಾರ ಬೋತಗಿ ವಂದಿಸಿದರು.

ಅಪ್ಪಾರಾವ್‌ ಮರೂರಕರ್‌, ಸುಭಾಷ ಗೌರಿ, ನಿಜಲಿಂಗಪ್ಪ ಬಿ. ಮರೂರಕರ್‌, ವೈಜಿನಾಥ, ಸಂತೋಷ ಮರೂರಕರ್‌, ಧೂಳಪ್ಪ ಬೋತಗಿ, ರಮೇಶ ಮರೂರಕರ್‌, ಈಶ್ವರ ಬೋತಗಿ, ಬಬಿತಾ ಉಮೇಶ ಮರೂರಕರ್‌ ಇದ್ದರು.

Advertisement

ಗ್ರಾಮ ಘಟಕದ ಪದಾಧಿಕಾರಿಗಳು

ಅಪ್ಪಾರಾವ್‌ ಮರೂರಕರ್‌ (ಗೌರವಾಧ್ಯಕ್ಷ), ಸಂತೋಷ ಮರೂರಕರ್‌ (ಅಧ್ಯಕ್ಷ), ರಾಜಕುಮಾರ ಬೋತಗಿ, ರಾಜಕುಮಾರ ಹೇಮಶೆಟ್ಟಿ (ಉಪಾಧ್ಯಕ್ಷರು), ಸಾಯಿನಾಥ ಮರೂರಕರ್‌ (ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಬೋತಗಿ (ಸಹ ಕಾರ್ಯದರ್ಶಿ), ನಾಗರಾಜ ಉಡಬಾಳ, ಶಿವಶರಣಪ್ಪ ಗೌರಿ(ಸಂಘಟನಾ ಕಾರ್ಯದಶಿ), ಮಂಜುನಾಥ ಮರೂರಕರ್‌ (ಕೋಶಾಧ್ಯಕ್ಷ), ಸುಭಾಷ ಗೌರಿ, ಅನಿಲ್‌ ಕುಡತಿ, ಧೂಳಪ್ಪ ಬೋತಗಿ, ನಿಜಲಿಂಗ ಬರೂರಕರ್‌, ವೈಜಿನಾಥ, ಕಾಶೀನಾಥ (ಗೌರವ ಸಲಹೆಗಾರರು).

Advertisement

Udayavani is now on Telegram. Click here to join our channel and stay updated with the latest news.

Next