Advertisement

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

07:18 PM Oct 14, 2024 | Shreeram Nayak |

ವಿಜಯಪುರ:ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸರ್ಕಾರಿ ನಿವೇಶನಗಳನ್ನು ವಾಪಸ್‌ ಕೊಡುವ ಮೂಲಕ ತಪ್ಪು ಮಾಡಿದಂತಲ್ಲವೇ? ಈ ಮೊದಲ ಸಾಲಿನ (ಫಸ್ಟ್‌ ಲೈನ್‌) ನಾಯಕರ ಎಲ್ಲ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ನಿವೇಶನಗಳನ್ನು ವಾಪಸ್‌ ಕೊಟ್ಟಿದ್ದರು. ಈಗ ಖರ್ಗೆ ಅವರೂ ನಿವೇಶನಗಳನ್ನು ವಾಪಸ್‌ ಕೊಟ್ಟಿದ್ದಾರೆ. ತಪ್ಪೇ ಮಾಡಿಲ್ಲ ಎಂದರೆ ವಾಪಸ್‌ ಕೊಟ್ಟಿದ್ದು ಏಕೆ? ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಕೂಡ ಖರ್ಗೆ ತಪ್ಪೇ ಮಾಡಿಲ್ಲ ಮತ್ತು ಅವರು ನ್ಯಾಯಯುತವಾಗಿ ಪಡೆದಿದ್ದಾರೆ ಎಂದು ಹೇಳುತ್ತಿದ್ದರು. ಏಕೆ ಭೂಮಿ ವಾಪಸ್‌ ಕೊಟ್ಟರು. ಎಲ್ಲ ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಮಾಡಬೇಕು. ಒಬ್ಬರಲ್ಲ, ಬಹಳ ಜನರು ಸರ್ಕಾರಿ ಭೂಮಿ ಗುಳುಂ ಮಾಡಿದ್ದಾರೆ. ಅಲ್ಲದೇ, ವಕ್ಫ್ ಆಸ್ತಿಯನ್ನೂ ಗುಳುಂ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ ಜಿಹಾದಿ ಪಕ್ಷ: ಯತ್ನಾಳ
ವಿಜಯಪುರ: ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ. ಆದರೆ, ದಿನದಿಂದ ದಿನಕ್ಕೆ ಅವರು ಹಾದಿ ತಪ್ಪಿ ಮಾತನಾಡುತ್ತಿದ್ದಾರೆ. ಬಿಜೆಪಿ ಎಂದರೆ ಭಯೋತ್ಪಾದಕರ ಪಕ್ಷ ಎಂದಿದ್ದಾರೆ. ನಾನು ಕಾಂಗ್ರೆಸ್‌ ಜಿಹಾದಿಗಳ ಪಕ್ಷ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ವಕ್ಫ್  ಎಂಬ ಕರಾಳ ಶಾಸನ ಇದೆ. ಈ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್‌ಗೂ ಅ ಧಿಕಾರವಿಲ್ಲ. ಇದು ಪೂರ್ತಿ ರದ್ದಾಗಬೇಕು. ಈ ಕಾಯ್ದೆಗೆ ಮುಂದಿನ ಅಧಿ ವೇಶನದಲ್ಲಿ ನರೇಂದ್ರ ಮೋದಿ ತಿದ್ದುಪಡಿ ತರಲಿದ್ದಾರೆ ಎಂದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next