Advertisement

ಹೈಕಮಾಂಡ್‍ಗೂ ಬಿಎಸ್‍ವೈ ಸಾಕಾಗಿದ್ದಾರೆ, ಸಿಎಂ ಪಟ್ಟ ಬಹಳ ದಿನ ಇರಲ್ಲ : ಯತ್ನಾಳ ಗುಡುಗು

12:18 PM Oct 20, 2020 | sudhir |

ವಿಜಯಪುರ : ಯಡಿಯೂರಪ್ಪ ಅವರು ಮ್ಯಾಗಿನವರಿಗೂ (ಹೈಕಮಾಂಡ್) ಸಾಕಾಗಿದ್ದಾರೆ. ಇನ್ನೇನು ಬಹಳ ದಿನ ಅವರು ಮುಖ್ಯಮಂತ್ರಿ ಆಗಿರುವುದಿಲ್ಲ. ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಸಿ.ಎಂ. ವಿರುದ್ಧ ಗುಡುಗಿದ್ದಾರೆ.

Advertisement

ನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹಿರಂಗ ಸಭೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಯತ್ನಾಳ, ಎಲ್ಲ ಅನುದಾನವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ.

ವಿಜಯಪುರ ನಗರದ ಅಭಿವೃದ್ಧಿಗೆ ಬಂದಿದ್ದ 125 ಕೋಟಿ ರೂ. ಅನುದಾನ ಕಡಿತ ಮಾಡಿದ್ದಕ್ಕೆ ಅವರಿಗೂ, ನನಗೂ ಜಗಳವಾಗಿದೆ. ಬಿಜೆಪಿ ಬೆಂಬಲಿಸಿದ ಉತ್ತರ ಕರ್ನಾಟಕದವರಿಂದಲೇ ಮುಖ್ಯಮಂತ್ರಿ ಆಗುತ್ತಿದ್ದರೂ, ಅದನ್ನು ಮರೆತಿದ್ದಾರೆ. ಹೀಗಾಗಿ ಬಿಜೆಪಿ ಮುಂದಿನ ಮುಖ್ಯಮಂತ್ರಿ ಉತ್ತರಾಧಿಕಾರಿ ಉತ್ತರ ಕರ್ನಾಟಕದವರಿಗೇ ಆದ್ಯತೆ ಎಂದು ಪ್ರಧಾನಿ ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಬಹಳ ದಿನ ಇರುವುದಿಲ್ಲ ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿಗೂ ನಿವೇಶನ, ಸೂರಿನ ಕೊರತೆಯಾಗಬಾರದು : ಬಿಎಸ್ ವೈ

ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಬಿಜೆಪಿ ಪ್ರಬಲವಾಗಿದ್ದು, ನೂರಕ್ಕೂ ಹೆಚ್ಚು ಶಾಸಕರು ಇಲ್ಲಿಂದ ಆಯ್ಕೆಯಾದರೂ, 10-15 ಶಾಸಕರು ಆಯ್ಕೆಯಾಗುವ ದಕ್ಷಿಣ ಕರ್ನಾಟಕದವರು ಮುಖ್ಯಮಂತ್ರಿ ಆಗುತ್ತಾರೆ. ಮಂಡ್ಯ, ಚಾಮರಾಜನಗರ, ಕೋಲಾರ ಭಾಗದಲ್ಲ್ಲಿ ಬಿಜೆಪಿ ಪಕ್ಷದವರಿಗೆ ಯಾರು ಮತ ಹಾಕುತ್ತಾರೆ. ಹೀಗಾಗಿ ಹೈಕಮಾಂಡಗೂ ಇದು ಗೊತ್ತಾಗಿದೆ. ಬಿಜೆಪಿ ಪಕ್ಷವನ್ನು ಬೆಂಬಲಿಸುವ ಉತ್ತರ ಕರ್ನಾಟಕ ಜನರ ಆಶಯ ಈಡೇರಿಸಸಲು ಮುಖ್ಯಮಂತ್ರಿ ಸ್ಥಾನ ನೀಡುವ ಭರವಸ ನೀಡಿದ್ದಾರೆ ಎಂದರು.

Advertisement

ನನ್ನ ಕ್ಷೇತ್ರಕ್ಕೆ ನೀಡಿದ ಅನುದಾನ ಹಿಂಪಡೆದ ಕಾರಣ ನಗರದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ. ಸದ್ಯ ಉತ್ತರ ಕರ್ನಾಟಕವರು ದಕ್ಷಿಣ ಕರ್ನಾಟಕದವರ ಮನೆ ಬಾಗಿಲು ಕಾಯುವ ಸ್ಥಿತಿ ಇದೆ. ಆದರೆ ನಾನೇನು ಅಂಜುವುದಿಲ್ಲ, ಬೆಂಗಳೂರಿನವರೇ ನನ್ನ ಮನೆ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡುತ್ತೇನೆ. ಅನುದಾನ ತಂದೇ ತರುತ್ತೇನೆ, ನಗರವನ್ನು ಅಭಿವೃದ್ಧಿ ಮಾಡಿಯೇ ತೀರುತ್ತೇನೆ, ಕಾದು ನೋಡಿ ಎಂದು ಸವಾಲು ಎಸೆದರು.

Advertisement

Udayavani is now on Telegram. Click here to join our channel and stay updated with the latest news.

Next