ವಿಜಯಪುರ : ಸಚಿವ ಸ್ಥಾನದಿಂದ ಸಿ.ಪಿ.ಯೋಗೇಶ್ವರ ಅವರನ್ನು ವಜಾ ಮಾಡುವುದು ಅಸಾಧ್ಯ. ವಿಶಿಷ್ಟ ಕೋಟಾದಲ್ಲಿ ಮಂತ್ರಿಯಾಗಿರುವ ಅವರಿಗೆ ವಜಾ ಬದಲಾಗಿ ಅವರ ನಿರೀಕ್ಷೆಯ ಇಂಧನ ಖಾತೆ ಸಹಿತ ಉಪ ಮುಖ್ಯಮಂತ್ರಿ ಹುದ್ದೇ ನೀಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಯ ವಿಡಿಯೋ ಹಾಕಿರುವ ಯತ್ನಾಳ, ಸಿ.ಪಿ.ಯೋಗೇಶ್ವರ ಅವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲ್ಲ. ಒಂದೊಮ್ಮೆ ಕ್ರಮ ಕೈಗೊಂಡ ಒಂದು ಗಂಟೆಯಲ್ಲಿ ಯಡಿಯೂರಪ್ಪ ಸ್ಥಿತಿ ರಮೇಶ ಜಾರಕಿಹೊಳಿ ಪ್ರಕರಣದಂತೆ ಆಗಲಿದೆ. ಅಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲದೇ ಯೋಗೇಶ್ವರ ಸಹಿತ ಮುರುಗೇಶ ನಿರಾಣಿ, ಎನ್.ಆರ್.ಸಂತೋಷ ಇವರೆಲ್ಲ ಒಂದೇ ಕೋಟಾದಲ್ಲಿ ಸಚಿವರಾದವರು. ಹೀಗಾಗಿ ಇವರ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳುವ ಶಕ್ತಿ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಕುಟುಕಿದರು.
ಜಿಂದಾಲ್ ಕಂಪನಿಗೆ 3666 ಎಕರೆ ಜಮೀನನ್ನು ಕೇವಲ ಎಕರೆಗೆ 1.25 ಲಕ್ಷ ರೂ.ಗೆ ನೀಡಿದ್ದನ್ನು ನಾನು ಪ್ರಶ್ನಿಸಿದೆ, ಹೈಕಮಾಂಡ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಜಿಂದಾಲ್‍ಗೆ ನೀಡಿದ್ದ ಭೂಮಿಯನ್ನು ರದ್ದು ಪಡಿಸಲಾಯಗಿದೆ.
ಇದನ್ನೂ ಓದಿ:ಮಾವಾ ತಯಾರಿಕೆ ಅಡ್ಡೆ ಮೇಲೆ ದಾಳಿ : ಮೂವರ ಬಂಧನ, 2.50 ಲಕ್ಷ ರೂ. ಮೌಲ್ಯದ ಸೊತ್ತು ವಶ
ಕೋವಿಡ್ ನಿರ್ವಹಣೆ ಸೇರಿದಂತೆ ರಾಜ್ಯ ಸರ್ಕಾರದ ಕೆಲಸಕ್ಕೆ ದೆಹಲಿಗೆ ಮುಖ್ಯಮಂತ್ರಿ ಹೋಗಬೇಕು. ಆದರೆ ಮೇಲಿಂದ ಮೇಲೆ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ವಿಜಯೇಂದ ದೆಹಲಿಗ್ರೆ ಹೋಗುತ್ತಾರೆ. ಇಂದೂ ಕೂಡ ಬೊಮ್ಮಾಯಿ ಅವರ ಜೊತೆ ವಿಜಯೇಂದ್ರ ದೆಹಲಿಗೆ ಹೋಗಿದ್ದಾರೆ. ಇದು ರಾಜ್ಯದಲ್ಲಿ ಯಡಿಯೂಪ್ಪ ನೇತೃತ್ವ ಬಿಜೆಪಿ ಸರ್ಕಾರ ಅಧಿಕಾರದಲ್ಲಿಲ್ಲ, ವಿಜಯೇಂದ್ರ ಅವರ ಸರ್ಕಾರವಿದೆ. ಇದನ್ನೇ ನಾವು ವಿರೋಧಿಸುತ್ತಿರುವುದು ಎಂದು ಯಡಿಯೂರಪ್ಪ ಅವರ ವಿರುದ್ಧ ಮತ್ತೊಮ್ಮೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.