Advertisement

ಸದನದಲ್ಲಿ ಶಾಸಕ ಯತ್ನಾಳರಿಂದ ವೈದ್ಯರ ವಿರುದ್ಧ ಆಧಾರ ರಹಿತ‌ ಆರೋಪ : ಡಾ.ಬಿದರಿ

03:47 PM Sep 29, 2020 | sudhir |

ವಿಜಯಪುರ: ಖಾಸಗಿ ಆಸ್ಪತ್ರೆಗಳು ರೋಗಿಗಳ ಪಾಲಿಗೆ ಸುಲಿಗೆ ಕೇಂದ್ರಗಳಾಗುತ್ತಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಡಿಸಿಎಂ ಲಕ್ಷ್ಮಣ ಸವದಿ ಇವರು ಸದನದಲ್ಲಿ ಆಧಾರ ರಹಿತ ಆರೋಪಿಸಿ ಮಾತನಾಡಿದ್ದಾರೆ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಪ್ರಮುಖ, ನಗರದ ‌ಮಕ್ಕಳ ತಜ್ಞ ವೈದ್ಯ ಡಾ.ಎಲ್.ಎಚ್.ಬಿದರಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ನಿತಿನ್ ಅಗರವಾಲ್ ಹರಿಹಾಯ್ದರು.

Advertisement

ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳಾಗಿ ಸದನದಲ್ಲಿ ಆಧಾರ ಇಲ್ಲದೇ ಮಾತನಾಡಿದ್ದು ಸರಿಯಲ್ಲ. ಕೂಡಲೇ ಅವರನ್ನು ಭೇಟಿ ಮಾಡಿ ಖಾಸಗಿ ಅಸ್ಪತ್ರೆಗಳು ಸರ್ಕಾರಿ ನಿಯಮದಂತೆ ಬಿಲ್ ಪಡೆಯುತ್ತಿರುವ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲೇ ಮೊಟ್ಟ ಮೊದಲು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಂದುದೇ ವಿಜಯಪುರ ಖಾಸಗಿ ಅಸ್ಪತ್ರೆ ಹಾಗೂ ವೈದ್ಯರು. ನಮ್ಮಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂಬ ಕಾರಣಕ್ಕೆ ನೆರೆಯ ಕಲಬುರ್ಗಿ, ಬಾಗಲಕೋಟೆ, ಬೆಳಗಸವಿ ಮಾತ್ರವಲ್ಲ ಮಹಾರಾಷ್ಡ್ರ ರಾಜ್ಯದ ರೋಗಿಗಳು ಜಿಲ್ಲೆ ಬರುತ್ತಿದ್ದಾರೆ. ಹಾಗಂತ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿದ ದರಕ್ಕಿಂತ ರೋಗಿಗಳಿಂದ ಹೆಚ್ಚಿಗೆ ಹಣ ವಸೂಲಿ ಮಾಡಿದ ದಾಖಲೆ ಇಲ್ಲ ಎಂದರು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಕೋವಿಡ್ ಭೀಕರ ಸಾಂಕ್ರಾಮಿಕ ರೋಗದ ಭೀತಿಯ ಮಧ್ಯೆ ವೈದ್ಯರು, ಸಿಬ್ಬಂದಿ ಜೀವದ ಹಂಗು ತೊರೆದು ರೋಗದ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಹೀಗಿದ್ದರೂ ಆದಾರ ರಹಿತವಾಗಿ ಖಾಸಗಿ ಅಸ್ಪತ್ರೆ ವಿರುದ್ಧ ಮಾತನಾಡಿದ್ದು ಸರಿಯಲ್ಲ ಎಂದರು.

Advertisement

ನಗರದಲ್ಲಿ ಈಚೆಗೆ ಕೋಟಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟ. ಸರ್ಕಾರದ ನಿಯಮದಂತೆ 17 ದಿನ ಖಾಸಗಿ ಆಸ್ಪತ್ರೆ 4.13 ಬಿಲ್ ಮಾಡಿದ್ದು, ರೋಗಿ ಕಡೆಯವರು 1.82 ಲಕ್ಷ ರೂ ಮಾತ್ರ ಪಾವತಿಸಿದ್ದಾರೆ. ಆಸ್ಪತ್ರೆಯ ಬಾಕಿ ಹಣ 2.31 ಹಾಗೂ ಔಷಧೀಯ ಖರ್ಚು 25 ಸಾವಿರ ರೂ. ಕೂಡ ಕೊಟ್ಟಿಲ್ಲ. ನಿಯಮದಂತೆ ಕುಡುಂಬ ಸದಸ್ಯರಿಗೆ ತಿಳಿಸಿ, ಪಾಲಿಕೆ ಸಿಬ್ಬಂದಿ ಮೂಲಕ ಸಂಸ್ಕಾರಕ್ಕೆ ಶವ ಸಾಗಿಸಲು ಆಂಬ್ಯುಲೆನ್ಸ್ ಕರೆಸಲಾಗಿತ್ತು. ಆದರೆ ಮೃತನ ಕುಟುಂಬವರು ಶವವನ್ನು ಸಾಗಿಸಲು ಹೊರಗಿನಿಂದ ಕರೆಸಿದ್ದ ಆಂಬ್ಯುಲೆನ್ಸ್ ಗೆ ಹಣ ಕೊಡಲು ನಿರಾಕರಿಸಿ, ಶವವನ್ನು ಮರಳಿ ಆಸ್ಪತ್ರೆಗೆ ಸಾಗಿಸಿ ಹಾಸಿಗೆ ಮೇಲೆ ಹಾಕಿಸಿದ್ದಾರೆ. ಈ ಕುರಿತು ನಮ್ಮ‌ ಖಾಸಗಿ ಆಸ್ಪತ್ರೆಯಲ್ಲಿ ಸಿಸಿ ಕೆಮೆರಾ ಫುಟೇಸಸ್ ಇವೆ. ಇಷ್ಟಿದ್ದರೂ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ಎದುರು ಭಿಕ್ಷಾಟನೆ ನಡೆಸಿ, ಕಾನೂನು ಬಾಹೀರವಾಗಿ ದಾಳಿ ಮಾಡಿ, ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅರ್ಮೇನಿಯಾ, ಅಝರ್ ಬೈಜಾನ್ ಯುದ್ಧ ತೀವ್ರ: 58 ಸೈನಿಕರು, 9 ನಾಗರಿಕರು ಸಾವು

ಇದಲ್ಲದೇ ಸಮಾಜ ಘಾತುಕ ಕೆಲ ಶಕ್ತಿಗಳು, ರಾಜಕೀಯ ದಾಳ ಮಾಡಿಕೊಳ್ಳುವ ದುರಾಸೆಯಿಂದ ಆಸ್ಪತ್ರೆಗಳ ಮೇಲೆ ದಾಳಿ ನಡೆಸುವ ವ್ಯವಸ್ಥಿತ ಜಾಲವೂ ಜಿಲ್ಲೆಯಲ್ಲಿ ಬೇರೂರಿದೆ. ಒಂದೊಮ್ಮೆ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ, ನಿಗದಿಗಿಂತ ಹೆಚ್ಚಿಗೆ ಹಣ ಸುಲಿಗೆ ಮಾಡಿದ್ದರೆ ಜಿಲ್ಲಾಧಿಕಾರಿ ಕೆಪಿಎಂಪಿ ಕಾಯ್ದೆಯಂತೆ ದೂರು ನೀಡಲಿ, ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಿ, ಇಲ್ಲವೇ ಗ್ರಾಹಕರ ನ್ಯಾಯಾಲಯಕ್ಕು ದೂರು ಕೊಂಡೊಯ್ಯಲಿ. ಅದನ್ನು ಬಿಟ್ಡು ಖಾಸಗಿ ಆಸ್ಪತ್ರೆಗಳು, ವೈದ್ಯರ ಮೇಲೆ ದಾಳಿ ನಡೆಸಿದರೆ ಖಾಸಗಿ ಆಸ್ಪತ್ರೆಗಳಿಂದ ಜೀವ ಭಯದ ಸ್ಥಿತಿಯಲ್ಲಿ ಸೇವೆ ನೀಡುವುದು ಕಷ್ಡವಾಗುತ್ತದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಸಂಘದ ಡಾ.ರವೀಂದ್ರ ಮದರಕಿ, ಡಾ.ಪರೀಕ್ಷಿತ ಕೋಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next