Advertisement
ಟ್ವಿಟರ್, ಫೇಸ್ ಬುಕ್ ಪೇಜ್ ನಲ್ಲಿ ಟಾಂಗ್ ನೀಡಿರುವ ಅವರು, ತಮ್ಮ ಬೆಂಬಲಿಗ ರಾಘವ ಅಣ್ಣಿಗೇರಿ ಫೇಸಬುಕ್ ನಲ್ಲಿ ಮಾಡಿರುವ ಪೋಸ್ಟ್ ಹೇಗಿತ್ತೆಂದರೆ “ಅಪ್ಪನ ಹೆಸರಿಂದ ರಾಜ್ಯಭಾರ ಮಾಡುತ್ತಿರುವವರೇ ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ ಎಚ್ಚರ” ಎಂಬ ಪೋಸ್ಟನ್ನು ಫೇಸಬುಕ್ ನಲ್ಲಿ ಶೇರ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
“ವಿಜಯೇಂದ್ರ ಒಬ್ಬನೇ ಎಲ್ಲ ಚುನಾವಣೆಗಳನ್ನು ಗೆಲ್ಲಿಸುವುದಾದರೆ, ವಿಜಯೇಂದ್ರ ನೇತೃತ್ವದಲ್ಲಿ ಎರಡೂ ಕ್ಷೇತ್ರ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿರುವ ಪತ್ರಿಕಾ ವರದಿಗೆ ಕಿಡಿಕಾರಿ, ನರೇಂದ್ರ ಮೋದಿ ಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೀ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ, ರಾಜ್ಯ ಪದಾಧಿಕಾರಿಗಳ ಪಾತ್ರವೇನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ: ಏಕ್ ನಾಥ್ ಬಿಜೆಪಿಗೆ ಗುಡ್ ಬೈ, NCPಗೆ ಸೇರ್ಪಡೆ
Related Articles
Advertisement
ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸುವಿರಾ? ಎಂದು ಮರು ಪ್ರಶ್ನೆಯನ್ನೂ ಮಾಡಿದ್ದಾರೆ.
ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತರ ಗತಿಯೇನು?
ಪುತ್ರ ವ್ಯಾಮೋಹದ ಹೇಳಿಕೆಗಳನ್ನು ಕೊಡುವುದು ಬಿಟ್ಟು, ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ ಎಂದು ತಮ್ಮ ಬೆಂಬಲಿಗ ರಾಘು ಅಣ್ಣಿಗೇರಿ ಫೇಸಬುಕ್ ನಲ್ಲಿ ಬರೆದ ಪೋಸ್ಟ್ ನ್ನು ಯತ್ನಾಳ ಹಂಚಿಕೊಂಡು, ಬೆಂಬಲಿಗನ ಬರಹ ಅನುಮೋದಿಸಿದ್ದಾರೆ.