Advertisement
ಬೇಕಾಗುವ ಸಾಮಗ್ರಿಬಸಳೆ ಸೊಪ್ಪು-10 ಎಲೆ
ಮೊಸರು ಅಥವಾ ಮಜ್ಜಿಗೆ- 1/2 ಕಪ್
ತೆಂಗಿನ ತುರಿ-1/2 ಕಪ್
ಹಸಿ ಮೆಣಸಿನಕಾಯಿ-3
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಒಗ್ಗರಣೆಗೆ- ಸಾಸಿವೆ ಕರಿಬೇವು
ಜೀರಿಗೆ- ಅರ್ಧ ಚಮಚ
ಶುಂಠಿ- ಚೂರು
ಬಸಳೆ ಸೊಪ್ಪನ್ನು ತೊಳೆದು ಅನಂತರ ಕತ್ತರಿಸಿಕೊಂಡು, 1 ಚಮಚ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ಅನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಈ ಒಗ್ಗರಣೆಗೆ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕÕ… ಮಾಡಿ . ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ. ಬಸಳೆ ಬೋಂಡ
ಬೇಕಾಗುವ ಸಾಮಗ್ರಿ
ಬಸಳೆ ಸೊಪ್ಪಿನ ಎಲೆ-25
ಕಡಲೆ ಹಿಟ್ಟು-ಕಾಲು ಕೆ.ಜಿ.
ಒಣ ಮೆಣಸಿನ ಪುಡಿ-2 ಚಮಚ
ಅಡುಗೆ ಸೋಡಾ ಪುಡಿ-ಅರ್ಧ ಚಮಚ
ಅರಿಶಿನ ಪುಡಿ-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು.
Related Articles
ಮೊದಲಿಗೆ ಬಸಳೆ ಎಲೆಗಳನ್ನು ತೊಳೆದು ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅನಂತರ ಬೋಂಡ ಮಸಾಲೆ ಮಾಡಿಕೊಳ್ಳಬೇಕು. ಕಡಲೆ ಹಿಟ್ಟಿಗೆ ಒಣ ಮೆಣಸಿನ ಪುಡಿ, ಅಡುಗೆ ಸೋಡಾ, ಉಪ್ಪು, ಅರಶಿನ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಹತ್ತು ನಿಮಿಷ ಹಾಗೆಯೇ ಇಡಿ. ಅನಂತರ ಒಂದೊಂದು ಬಸಳೆ ಎಲೆಗಳನ್ನು ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಸಳೆ ಬೋಂಡ ಸವಿಯಲು ಸಿದ್ಧ.
Advertisement