ಮುದ್ದೇಬಿಹಾಳ: ಏರುತ್ತಿರುವ ಬೆಲೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿವೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಜನಸಾಮಾನ್ಯರ ಜೀವನದ ಮೇಲೆ ಬರೆ ಹಾಕಿದ್ದಾರೆ. ಬಿಜೆಪಿಯದ್ದು ಆರ್ಥಿಕ ಶಿಸ್ತು ಇಲ್ಲದ ಬೇಜವಾಬ್ದಾರಿ, ಬೂಟಾಟಿಕೆಯ ಸರ್ಕಾರ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಸಿ.ಎಸ್. ನಾಡಗೌಡ ವಾಗಾœಳಿ ನಡೆಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ, ಲಾಕ್‌ಡೌನ್ ನಿಯಮಗಳಿಗೆ ಬದ್ಧರಾಗಿ ಸಾಂಕೇತಿಕ ಪ್ರತಿಭಟನೆ ನಡೆಸ್ತಿದ್ದೇವೆ. ಕೊರೊನಾ ಇಳಿಮುಖಗೊಂಡು ಗುಣಮುಖರ ಸಂಖ್ಯೆ ಹೆಚ್ಚಾಗಿ ಭಯ ಕಡಿಮೆಯಾದಾಗ ರಾಹುಲ್ ಗಾಂಧಿ , ಸೋನಿಯಾ ಗಾಂಧಿ , ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಜನಾಂದೋಲನ ನಡೆಸಿ ಹೊಸ ಆಡಳಿತ ನಿರ್ಮಾಣಕ್ಕೆ ಮುಂದಾಗುತ್ತದೆ. ಎಲ್ಲ ಹಗರಣಗಳನ್ನು ಜನರೆದುರು ತರುತ್ತೇವೆ.
ಜನರ ಹೊಟ್ಟೆ, ಉದ್ಯೋಗ, ಜೀವನದ ಮೇಲೆ ಬರೆ ಹಾಕುತ್ತಿರುವವರ ಮುಖವಾಡ ಕಳಚುತ್ತೇವೆ ಎಂದರು. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದ ದುರಾಡಳಿತ ಮಿತಿ ಮೀರಿದೆ. ತಾಳ್ಮೆಯ ಪರೀಕ್ಷೆಯಾಗ್ತಿದೆ. ಕೃತಕವಾಗಿ ಬೆಲೆ ಏರಿಸಿದ್ದಾರೆ. ಹಣ ಡಿ-ವ್ಯಾಲ್ಯೂ ಆಗಿದೆ. ಡಾಲರ್ ರೇಟ್ ಕಾಂಗ್ರೆಸ್ ಸರ್ಕಾರದಲ್ಲಿ 60 ರೂ. ಇದ್ದದ್ದು ಈಗ 80 ರೂ.ಗೆ ಹೆಚ್ಚಾಗಿದೆ. ಬಿಜೆಪಿಯವರು ಕ್ರೆಡಿಟ್ ಫೆಸಿಲಿಟಿಯಡಿ ಮೈನಸ್ ಎಕಾನಮಿಯಲ್ಲಿ ನಂಬಿಕೆ ಇಟ್ಟಿರುವವರು.
ಸಾಲ ಮಾಡಿ ದೇಶ ನಡೆಸಿ ಅ ಧಿಕಾರ ದುರ್ಬಳಕೆ ಮಾಡುವವರು. ಚುನಾವಣೆಯಲ್ಲಿ ಕಪ್ಪು ಹಣ ಬಳಸಿ ಅ ಧಿಕಾರಕ್ಕೆ ಬರುವಂಥವರು. ಇವರು ಬೇರೇನನ್ನೂ ಮಾಡುವುದಿಲ್ಲ. ಜನ ಇವರಿಗೆ ಪಾಠ ಕಲಿಸಲು ತಯಾರಾಗಿದ್ದಾರೆ ಎಂದರು. 2013-14ನೇ ಸಾಲಿನಿಂದ ಮೋದಿ ಸರ್ಕಾರ ಅ ಧಿಕಾರಕ್ಕೆ ಬಂದ ನಂತರ ದಿನನಿತ್ಯ ಬೆಲೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಆಡಳಿತವಿದ್ದಾಗ ಪೆಟ್ರೋಲ್, ಡೀಸೆಲ್, ಈರುಳ್ಳಿ, ಆಲೂಗಡ್ಡಿ ಬೆಲೆ ಬಗ್ಗೆ ವ್ಯಂಗ್ಯವಾಡಿ ಜನರ ಸಹಾನುಭೂತಿ ಗಳಿಸಲು ಯತ್ನಿಸಿದ್ದ ಬಿಜೆಪಿಯವರು ಈಗ ಮಾಡುತ್ತಿರುವುದೇನು ಎಂದರು. ಬಿಜೆಪಿಯವರು ಕಪ್ಪು ಹಣ ಮರಳಿ ತರಲಿಲ್ಲ. ಅಂದು ರಫೇಲ್ ಬಗ್ಗೆ ಟೀಕಿಸಿ ಇಂದು ಆಗಿನ ಕಾಂಗ್ರೆಸ್ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಬೆಲೆಗೆ ರಫೇಲ್ ಖರೀದಿಸಿ ಕೋಟಿಗಟ್ಟಲೇ ಹಣ ದುರ್ಬಳಕೆ ಮಾಡಿದರು. ಬಿಜೆಪಿಯವರಿಗೆ ಆರ್ಥಿಕ ನೀತಿ ಅರ್ಥವಾಗಿಲ್ಲ. ಆರ್ಥಿಕ ನೀತಿಯನ್ನು ಯಾವ ರೀತಿ ಮುಂದುವರಿಸಬೇಕು, ಜನರಿಗೆ ಹೇಗೆ ಅನುಕೂಲ ಮಾಡಿಕೊಡಬೇಕು ಅನ್ನೋ ದೃಷ್ಟಿಕೋನ ಇವರಲ್ಲಿಲ್ಲ. ಬೊಗಳೆ ಮಾತು ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದಾಗ ಬಿಜೆಪಿಯವರು ನಿದ್ದೆ ಮಾಡಿದರು. ಜಾತ್ರೆ, ಕುಂಭಮೇಳ, ಚುನಾವಣೆಗೆ ಅವಕಾಶ ಕೊಟ್ಟರು. ಇದರಿಂದ ದೇಶಾದ್ಯಂತ ಕೊರೊನಾ ಹರಡಿ ಲಕ್ಷಾಂತರ ಜನ ಸತ್ತರು. ಎಷ್ಟೋ ಕುಟುಂಬಗಳು ದೀಪ ಹಚ್ಚಲೂ ಆಗದ ಪರಿಸ್ಥಿತಿಯಲ್ಲಿರಬೇಕಾಯ್ತು. ಇದಕ್ಕೆಲ್ಲ ಯಾರು ಹೊಣೆ ಎಂದರು. ಸರ್ಕಾರಕ್ಕೆ ಆಕ್ಸಿಜನ್ ಕೊಡುವುದು ಆಗಲಿಲ್ಲ. ಆಕ್ಸಿಜನ್ ಬಳಸುವ ಕಾರ್ಖಾನೆಗಳನ್ನು ಮುಚ್ಚಿ ಅದನ್ನೇ ಶುದ್ಧಗೊಳಿಸಿ ಜನರಿಗೆ ಕೊಟ್ಟಿದ್ದರೆ ಜನ ಸಾಯುವುದು ತಪ್ಪುತ್ತಿತ್ತು ಎಂದರು. ಮುಖಂಡರಾದ ಗುರಣ್ಣ ತಾರನಾಳ, ಮಲ್ಲಿಕಾರ್ಜುನ ನಾಡಗೌಡ, ಸದ್ದಾಂ ಕುಂಟೋಜಿ, ಮಹ್ಮದàಕ್ ಶಿರೋಳ, ಪ್ರಶಾಂತ ತಾರನಾಳ, ಯುಸೂಫ್ , ಲಕ್ಷ್ಮಣ ಲಮಾಣಿ, ಮುತ್ತು ಬಿಳೇಭಾವಿ ಇದ್ದರು.