Advertisement

‘ಕಾಜಲ್‌’ಈಗ ‘ಬರ್ಕ್ಲಿ’ : ಸಂತೋಷ್ ನಾಯಕನಾಗಿರುವ ಹೊಸ ಚಿತ್ರ

03:58 PM Apr 03, 2021 | Team Udayavani |

ಸಂತೋಷ್‌ ನಾಯಕರಾಗಿರುವ “ಬರ್ಕ್ಲಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ. “ಕಾಜಲ್‌’ ಎಂಬ ಟೈಟಲ್‌ ನೊಂದಿಗೆ ಈ ಚಿತ್ರ ಶುರುವಾಗಿತ್ತು.

Advertisement

ಆ್ಯಕ್ಷನ್‌ ಹೀರೋ ಸಂತೋಷ್‌ಗೆ “ಕಾಜಲ್‌’ ಟೈಟಲ್‌ ಸರಿ ಹೊಂದುತ್ತಾ ಎಂಬ ಪ್ರಶ್ನೆ 2018ರಲ್ಲಿ ಚಿತ್ರ ತಂಡ ಮಾಡಿದ ಪತ್ರಿಕಾಗೋಷ್ಠಿಯಲ್ಲೇ ಎದುರಾಗಿತ್ತು. ಆದರೆ, ಈಗ ಚಿತ್ರದ ಟೈಟಲ್‌ ಬದಲಾಗಿದ್ದು, ಚಿತ್ರ ತಂಡ ” ಬರ್ಕ್ಲಿ’ ಎಂದಿಟ್ಟಿದೆ.

ಇದನ್ನೂ ಓದಿ:ಆ್ಯಕ್ಷನ್‌ ಪ್ಯಾಕ್‌ನಲ್ಲಿ ‘ಅರ್ಜುನ್‌ ಗೌಡ’: ಏ. 10ರಂದು ಚಿತ್ರದ ಟ್ರೇಲರ್‌ ಬಿಡುಗಡೆ

ನಿರ್ದೇಶಕ ಸುಮಂತ್‌ ಹೇಳುವಂತೆ, ಚಿತ್ರದಕಥೆಯಲ್ಲೂ ಒಂದಷ್ಟು ಬದಲಾವಣೆಯಾಗಿದೆಯಂತೆ. “ಕಾಜಲ್‌’ ಎಂಬುದು ವರ್ಕಿಂಗ್‌ ಟೈಟಲ್‌ ಆಗಿತ್ತು. ಈಗ ಟೈಟಲ್ ಬದಲಾಗಿದ್ದು, “ಬರ್ಕ್ಲಿ’ ಎಂದಿಟ್ಟಿದ್ದೇವೆ’ ಎನ್ನುತ್ತಾರೆ ಸುಮಂತ್‌.

ಸಂತೋಷ್‌ ಎಂಟರ್‌ಪ್ರೈಸಸ್‌ ಲಾಂಛನದಲ್ಲಿ ಆನೇಕಲ್‌ ಬಾಲರಾಜ್‌ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ. ಗಣಪ, ಕರಿಯ 2 ಚಿತ್ರಗಳಲ್ಲಿ ನಟಿಸಿರುವ ಸಂತೋಷ್‌ ಬಾಲರಾಜ್‌ ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ.

Advertisement

ಇದನ್ನೂ ಓದಿ: ‘ಕಬ್ಜ’ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ರಾಡ್‍ ಏಟು  

Advertisement

Udayavani is now on Telegram. Click here to join our channel and stay updated with the latest news.

Next