Advertisement
ಪೈನಾಪಲ್ ನೋಡಲು ಮುಳ್ಳು ಮುಳ್ಳಾಗಿದ್ದರೂ, ತಿನ್ನಲು ಬಲು ರುಚಿಯಾದ ಹಣ್ಣು. ತಿನ್ನಲಷ್ಟೇ ಅಲ್ಲ, ಸಿಹಿತಿಂಡಿಗಳ ತಯಾರಿಕೆಯಲ್ಲೂ ಪೈನಾಪಲ್ ಅನ್ನು ಬಳಸುತ್ತಾರೆ. ಉದಾಃ ಜ್ಯೂಸ್, ಸಲಾಡ್, ಕೇಸರಿ ಬಾತ್, ಐಸ್‌ಕ್ರೀಮ್ ಹೀಗೆ ನಾನಾ ರುಚಿಯ ತಿಂಡಿ ತಿನಿಸುಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಹಾಗೂ ದೇಹಕ್ಕೆ ಅಗತ್ಯವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದೆ .
Related Articles
ಪೈನಾಪಲ್-1,ದಾಲ್ಚಿನ್ನಿ ಪುಡಿ-1ಟೀಸ್ಪೂನ್, ಜೀರಿಗೆ ಪುಡಿ-ಅರ್ಧ ಚಮಚ,ಮೆಣಸಿನ ಪುಡಿ-2ಚಮಚ,ಪೇಪ್ಪರ್ ಪುಡಿ-1ಚಮಚ,ಚಾಟ್ ಮಸಾಲ-2ಚಮಚ, ಲಿಂಬೆ ರಸ-1ಚಮಚ, ಜೇನು ತುಪ್ಪ-1ಚಮಚ, ಸಕ್ಕರೆ-1ಚಮಚ,ರುಚಿಗೆ ತಕ್ಕಷ್ಟು ಉಪ್ಪು.
Advertisement
ತಯಾರಿಸುವ ವಿಧಾನಮೊದಲಿಗೆ ಒಂದು ಪೈನಾಪನ್ ಹಣ್ಣನ್ನು ಚೆನ್ನಾಗಿ ತೊಳೆದು ಬಳಿಕ ಸಿಪ್ಪೆ ಸುಲಿದು ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ನಂತರ ಒಂದು ಬೌಲ್ ಗೆ ಮೆಣಸಿನ ಪುಡಿ,ಜೀರಿಗೆ, ,ದಾಲ್ಚಿನ್ನಿ,ಪೇಪ್ಪರ್, ಚಾಟ್ ಮಸಾಲ, ಜೇನು ತುಪ್ಪ, ಸಕ್ಕರೆ, ಲಿಂಬೆರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಕಟ್ ಮಾಡಿಟ್ಟ ಪೈನಾಪಲ್ ಹಣ್ಣನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬಾರ್ಬೆಕ್ಯೂ ಮಾಡುವ ಕಡ್ಡಿಯಲ್ಲಿ ಜೋಡಿಸಿಕೊಂಡು ಲೋ ಫ್ಲೇಮಿ(ಮಂದ ಬೆಂಕಿ)ನಲ್ಲಿ ತವದಲ್ಲಿ ಬೇಯಿಸಿದರೆ ಪೈನಾಪಲ್ ಬಾರ್ಬೆಕ್ಯೂ ಟೊಮೆಟೋ ಸಾಸ್ ಜೊತೆಯಲ್ಲಿ ತಿನ್ನಲು ಬಹಳ ರುಚಿ. -ಶ್ರೀರಾಮ್ ಜಿ .ನಾಯಕ್