Advertisement

ಭರವಸೆ ಟ್ರಸ್ಟ್ ನಿಂದ ಬುಡಕಟ್ಟು ಜನರ ಆರೋಗ್ಯ ತಪಾಸಣಾ ಶಿಬಿರ

08:15 PM Jan 23, 2023 | Team Udayavani |

ಚಾಮರಾಜನಗರ: ಬೆಂಗಳೂರಿನ ಭರವಸೆ ಟ್ರಸ್ಟ್ ವತಿಯಿಂದ ಸೂರ್ಯ ಫೌಂಡೇಶನ್ ಸಹಯೋಗದಲ್ಲಿ ತಾಲೂಕಿನ ಕೆ.ಗುಡಿಯಲ್ಲಿ ಸೋಲಿಗ ಬುಡಕಟ್ಟು ಜನರಿಗೆ ಖ್ಯಾತ ವೈದ್ಯ ಡಾ. ಆಂಜನಪ್ಪ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಎಚ್‌ಐವಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಇದಲ್ಲದೇ ಬುಡಕಟ್ಟು ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿ, ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಮತ್ತು ಮೆನ್‌ಸ್ಟ್ರುಯಲ್ ಕಪ್‌ಗಳನ್ನು ವಿತರಿಸಲಾಯಿತು.

ಭರವಸೆ ಟ್ರಸ್ಟ್ ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸೋಲಿಗರ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ. ಆಂಜನಪ್ಪ ನೇತೃತ್ವದಲ್ಲಿ ಐವರು ವೈದ್ಯರ ತಂಡವು 250ಕ್ಕೂ ಹೆಚ್ಚು ಸೋಲಿಗರ ಇಸಿಜಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ನಡೆಸಿತು. ಉಚಿತವಾಗಿ ಔಷಧಿ ವಿತರಿಸಲಾಯಿತು. ಸೋಲಿಗರು ತಮ್ಮ ಪೋಡುಗಳಿಂದ ಬರಲು ವಾಹನ ವ್ಯವಸ್ಥೆ ಸಹ ಮಾಡಲಾಗಿತ್ತು.

ಉದ್ಘಾ ಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಆಂಜನಪ್ಪ , ಭರವಸೆ ಟ್ರಸ್ಟ್‌ ಮೂಲಕ ಉತ್ಸಾಹಿ ಯುವಕ ಯುವತಿಯರ ತಂಡ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ನಿಮ್ಮ ಈ ಕಾರ್ಯಗಳಿಂದ ಅನೇಕ ಬಡ ಜನರಿಗೆ ಅನುಕೂಲವಾಗುತ್ತಿದೆ ಎಂದರು.

ಆರೋಗ್ಯವೇ ಭಾಗ್ಯ. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು. ದುಶ್ಚಟಗಳನ್ನು ಬೆಳೆಸಿಕೊಳ್ಳಬಾರದು. ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು. ಸೋಲಿಗ ಬುಡಕಟ್ಟು ಜನರಿಗೆ ತಾವು ಉಚಿತವಾಗಿ ಪೈಲ್‌ಸ್, ಹರ್ನಿಯಾ, ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆ ಮಾಡಿಕೊಡುವುದಾಗಿ, ಬೆಂಗಳೂರಿನ ಕಿಮ್‌ಸ್ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಭರವಸೆ ತಂಡದ 25ಕ್ಕೂ ಹೆಚ್ಚು ಸ್ವಯಂ ಸೇವಕರು ಕನ್ನೇರಿ ಕಾಲೋನಿ, ಬೂತಾಣಿ ಪೋಡು ಮತ್ತಿತರ ಪೋಡುಗಳಿಗೆ ತೆರಳಿ ಆರೋಗ್ಯ ಜಾಗೃತಿ ಮೂಡಿಸಿದರು. ತಂಡದ ಸದಸ್ಯರಾದ ಪವಿತ್ರಾ ಕೃಷ್ಣ ಹಾಗೂ ಪವಿತ್ರಾ ರಮೇಶ್ ಅವರು, ಸೋಲಿಗ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಹಾಗೂ ಪರಿಸರ ಸ್ನೇಹಿಯಾದ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಫೀಜಿ ನ್ಯಾಪ್ಕಿನ್ ಹಾಗೂ ಕಪ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ಡಾ. ಅವಿಶೇಷ್ ಝಾ, ಡಾ. ವರುಣ್, ಡಾ. ಧೀರಜ್, ವೈದ್ಯಕೀಯ ಸಿಬ್ಬಂದಿಗಳಾದ ರೋಹನ್, ಸಬೀನಾ, ಭರವಸೆ ಟ್ರಸ್‌ಟ್ನ ಮೋಹನ್‌ಗೌಡ, ತಿಮ್ಮೇಗೌಡ, ರೂಪೇಶ್, ಪವನ್ ಧರೆಗುಂಡಿ, ಐಶ್ವರ್ಯಾ ರಾಜ್, ಸಹನಾ, ಸಿದ್ದುಗೌಡ, ಕವಿತಾ, ಹರೀಶ್ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next