Advertisement
“ಭಯ ಮತ್ತು ಟೆನ್ಸ್ ನ್ ಎರಡೂ ಇದೆ….’-ಹೀಗೆ ಹೇಳಿ ಹಾಗೊಂದು ಜೋರು ನಗೆ ಬೀರಿದರು ಶ್ರೀಮುರಳಿ. ಅವರು ಹೇಳಿದ್ದು, ಈ ವಾರ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷೆಯ “ಭರಾಟೆ’ ಬಗ್ಗೆ. ಅವರು ಹಾಗೆ ಹೇಳಿ ನಗುತ್ತಲೇ, “ಅದರಲ್ಲೂ ಟೆನ್ಸ್ ನ್ ಮತ್ತು ಭಯ ಪಾಸಿಟಿವ್ ಆಗಿದೆ ಅನ್ನೋದೇ ಖುಷಿಯ ವಿಷಯ’ ಅಂತ ಮಾತಿಗಿಳಿದ ಶ್ರೀಮುರಳಿ “ಭರಾಟೆ’ಯೊಳಗಿನ ವಿಶೇಷ, ವಿನೋದ ಕುರಿತು ಹೇಳುತ್ತಾ ಹೋದರು.
Related Articles
“ಭರಾಟೆ’ ಹಲವು ಕಾರಣಗಳಿಗೆ ವಿಶೇಷ ಎಂಬುದು ಶ್ರೀಮುರಳಿ ಅವರ ಮಾತು. “ಇದುವರೆಗೂ ಹೇಳದೇ ಇರುವ ಒಂದು ವಿಷಯವಿದೆ. ಅದನ್ನು ಎಲ್ಲೂ ಹಂಚಿಕೊಂಡಿಲ್ಲ. ಆ ವಿಚಾರ ನನಗೆ ಈ ಸಿನಿಮಾದಲ್ಲಿ ಒಲವು ಮೂಡಿಸಿತು. ಅದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮಾಡಲು ಮುಂದಾದೆ. ಎಲ್ಲಾ ನಟರಿಗೂ ಒಂದೊಂದು ಕನಸು ಇರುತ್ತೆ ಅಂತೀವಲ್ಲ. ಏನಾದರೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಬಹುದಲ್ವಾ ಅಂದುಕೊಂಡು ನಮಗೆ ನಾವೇ ಚಾಲೆಂಜ್ ಮಾಡ್ಕೊàತ್ತೀವಲ್ಲ. ಹಾಗೆ ಮಾಡೋಕೆ ಸಿಕ್ಕ ವೇದಿಕೆ ಇದು. ನಾನು ಕಥೆ ಮತ್ತು ಪಾತ್ರವನ್ನು ತುಂಬಾ ಇಷ್ಟಪಡ್ತೀನಿ. ಇಲ್ಲಿ ನಿರ್ವಹಿಸಿರುವ ಪಾತ್ರವನ್ನು ಮಾಡಿಲ್ಲ. ಅದೊಂದು ಜವಾಬ್ದಾರಿ ಇರುವಂತಹ, ಫನ್ ಎಲಿಮೆಂಟ್ಸ್ ತುಂಬಿರುವಂತಹ, ಅಮ್ಮನ ಜೊತೆ ಅಪ್ಪನ ಜೊತೆ ಮಾತಾಡುವ ರೀತಿ ಎಲ್ಲವೂ ವಿಶೇಷವಾಗಿದೆ. ಆ ವಿಷಯದಲ್ಲಿ ನಾನು ಲಕ್ಕಿ. ನಿರ್ದೇಶಕ ಚೇತನ್‌ಕುಮಾರ್ ಬಗ್ಗೆ ಹೇಳಲೇಬೇಕು. ಅವರಲ್ಲಿ ಗ್ರಿಪ್ ವರ್ಕ್ ಇದೆ. ಪ್ರೀತಿಯಿಂದ ಕೆಲಸ ಮಾಡುತ್ತಾರೆ. ಅಷ್ಟೇ ಬದ್ಧತೆಯಿಂದ ಪ್ರಾಮಾಣಿಕವಾಗಿ ವಹಿಸಿಕೊಂಡಿದ್ದನ್ನು ಮಾಡುತ್ತಾರೆ. ಈಗೋ ಇಲ್ಲ, ಎಲ್ಲವನ್ನೂ ನೀಟ್ ಆಗಿ ನಿರ್ವಹಿಸುವ ತಾಕತ್ತು ಇದೆ. ಕ್ಲಾರಿಟಿ ಇರುವಂತಹ ವ್ಯಕ್ತಿ, ಚರ್ಚೆಗೆ ಓಪನ್ ಇರುತ್ತಾರೆ. ಒಟ್ಟಾರೆ ಕಂಫರ್ಟ್ ಜೋನ್ ಕಲ್ಪಿಸಿಕೊಡುತ್ತಾರೆ. ಎಲ್ಲಾ ನಿರ್ದೇಶಕರಿಗೂ ಇವೆಲ್ಲಾ ಗುಣಗಳಿದ್ದರೆ, ಈ ರೀತಿಯ ಸಿನಿಮಾ ಕಟ್ಟಿಕೊಡಲು ಸಾಧ್ಯ. ಹಾಗೆಯೇ, ಇಂತಹ ಅದ್ಧೂರಿ ಸಿನಿಮಾ ಮಾಡಲು ನಿರ್ಮಾಪಕರಿಗೆ ಧೈರ್ಯ ಬೇಕು. ನಾನು ಇದುವರೆಗೆ ಮಾಡಿರುವ ಬೆಸ್ಟ್ ಪ್ರೊಡಕ್ಷನ್ ಸಾಲಿಗೆ ಸುಪ್ರಿತ್ ಕೂಡ ಸೇರುತ್ತಾರೆ. ಅವರೊಳಗಿನ ಆತ್ಮವಿಶ್ವಾಸ, ನಂಬಿಕೆ ಈ ಮಟ್ಟಕ್ಕೆ ಸಿನಿಮಾ ಮಾಡಲು ಸಾಧ್ಯ’ ಎನ್ನುತ್ತಾರೆ.
Advertisement
ಚಿತ್ರದಲ್ಲಿ ಹೀರೋ ರಾಜಸ್ಥಾನದ ಕನ್ನಡಿಗ. ಹಾಗಂತ ಇಲ್ಲಿ ಭಾಷಾ ಸಂಘರ್ಷವಿಲ್ಲ. ಕನ್ನಡಕ್ಕೆ ಧಕ್ಕೆ ಬಂದಾಗ, ಭಾಷೆ ಬಗ್ಗೆ ಯಾರಾದರೂ ಅಗೌರವ ತೋರಿಸಿದಾಗ ಕನ್ನಡಿಗನಿಗೆ ಬರುವಂತಹ ಕೋಪ ಹೀರೋಗು ಬರುತ್ತೆ. ಇಲ್ಲಿ ಬೇರೆ ಭಾಷಿಗರಿಗೆ ಬೇಜಾರು ಮಾಡುವ ಉದ್ದೇಶವಂತೂ ಇಲ್ಲ ಎನ್ನುವ ಮುರುಳಿ, ರಾಜಸ್ಥಾನದಲ್ಲಿ ಇರುವ ಕನ್ನಡಿಗ ಎಂಬುದು ಒನ್‌ಲೈನ್ ಅಷ್ಟೇ. ಉಳಿದ ಶೇ.99 ರಷ್ಟು ಕಥೆ ಬೇರೇನೆ ಇದೆ ಎಂದು ವಿವರ ಕೊಡುತ್ತಾರೆ. ಇನ್ನು ಚಿತ್ರದಲ್ಲಿ ತಾವು ಹಾಡಿದ “ಭರ ಭರ ಭರ ರಾಟೆ…’ ಹಾಡಿನ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. “ಹಾಡು ಕೇಳಿದಾಗಲೇ ಅವರಿಗೆ ನಾನೇ ಹಾಡಬೇಕು ಎನಿಸಿತಂತೆ. ನಿರ್ದೇಶಕ, ನಿರ್ಮಾಪಕರು ಹಾಡೋಕೆ ಅವಕಾಶ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳುವ ಶ್ರೀಮುರಳಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೆನ್ನಾಗಿ ಹಾಡಿಸಿದರು. ಹಾಗಾಗಿ ಚಂದದ ಹಾಡು ಹೊರಬಂತು. ಇನ್ನು, ಇಲ್ಲೂ ಭರ್ಜರಿ ಸ್ಟಂಟ್ಸ್ ಇದೆ. ಎಲ್ಲಾ ಹೀರೋಗಳು ಸ್ಟಂಟ್ ಮಾಡುವಾಗ ಪೆಟ್ಟು ತಿಂದಂತೆ ನಾನೂ ಪೆಟ್ಟು ತಿಂದಿದ್ದೇನೆ. ಮೊದಲು ಕಷ್ಟಪಟ್ಟರೆ ತಾನೇ ಆಮೇಲೆ ಫಲ ಪಡೆಯೋದು. ಇವೆಲ್ಲಾ ಆದಾಗ ಮಾತ್ರ “ಭರಾಟೆ’ಯಂತಹ ಸಿನಿಮಾ ರೂಪಗೊಳ್ಳುತ್ತೆ’ ಎಂದು ಮಾತು ಮುಗಿಸುತ್ತಾರೆ.
ಭರಾಟೆ ಹೈಲೈಟ್ಸ್ ರಾಜಸ್ಥಾನದಲ್ಲಿ ಹಾರಿದ ಕನ್ನಡ ಬಾವುಟ
ಸಂಬಂಧಗಳ ಮೌಲ್ಯ ಹೆಚ್ಚಿಸುವ ಭರಾಟೆ
ಭರವಸೆ ಹುಟ್ಟಿಸಿದ ಕಾಂಬಿನೇಷನ್
ಮೊದಲ ಸಲ ಸಾಯಿಕುಮಾರ್ ಬ್ರದರ್ಸ್ ನಟನೆ
ಹಾಡು- ಸಂಭಾಷಣೆಗೆ ಭರ್ಜರಿ ರೆಸ್ಪಾನ್ಸ್ ವಿಜಯ್ ಭರಮಸಾಗರ