Advertisement

ಹೆಚ್ಚುವರಿ ಚೆಕ್‌ಪೋಸ್ಟ್‌ ಕಾರ್ಯನಿರ್ವಹಣೆ ಸ್ಥಗಿತ

03:02 PM Apr 18, 2020 | Naveen |

ಭರಮಸಾಗರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭರಮಸಾಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯ ಗಡಿ ಗ್ರಾಮ ಬಹದ್ದೂರ್‌ಘಟ್ಟದ ಬಳಿ ತೆರೆಯಲಾಗಿದ್ದ ಹೆಚ್ಚುವರಿ ಚೆಕ್‌ ಪೋಸ್ಟ್‌ ಕಳೆದ ನಾಲ್ಕಾರು ದಿನಗಳಿಂದ ಸ್ಥಗಿತಗೊಂಡಿದೆ.

Advertisement

ಈ ಮಾರ್ಗದ ಮೂಲಕವೇ ದಾವಣಗೆರೆ ಜಿಲ್ಲೆಯ ಜನರು ಮತ್ತು ವಾಹನಗಳು ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸುತ್ತವೆ. ತಮಿಳುನಾಡು, ಆಂಧ್ರ ಸೇರಿದಂತೆ ನೆರೆ ರಾಜ್ಯಗಳ ನೂರಾರು ಲಾರಿಗಳು ಈ ಮಾರ್ಗದ ಮೂಲಕ ನೆರೆಯ ದಾವಣಗೆರೆ, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳಿಗೂ ಸಾಗುತ್ತವೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 4ರ ಬಿಗಿ ಚೆಕ್‌ಪೋಸ್ಟ್‌ಗಳ ಕಣ್ತಪ್ಪಿಸಿ ಕೆಲ ಗೂಡ್ಸ್‌ ಮತ್ತು ಪ್ರಯಾಣಿಕ ವಾಹನಗಳು ಪಾಸ್‌ ಇತರೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಮಾರ್ಗದ ಮೂಲಕ ಸಂಚರಿಸುತ್ತವೆ ಎನ್ನಲಾಗುತ್ತದೆ. ಲಾಕ್‌ ಡೌನ್‌ ಜಾರಿಗೊಂಡ ದಿನದಿಂದ ಇಲ್ಲಿ ಕಾರ್ಯ ನಿರ್ವಹಿಸಿದ ಚೆಕ್‌ಪೋಸ್ಟ್‌ನಿಂದ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳಿಗೆ ಕಡಿವಾಣ ಬಿದ್ದಿತ್ತು. ಬೈಕ್‌ ಸೇರಿದಂತೆ ಎಲ್ಲ ಬಗೆಯ ವಾಹನಗಳು ಇಲ್ಲಿನ ಚೆಕ್‌ ಪೋಸ್ಟ್‌ ಭಯದಿಂದ ಇತ್ತ ತಲೆ ಹಾಕುತ್ತಿರಲಿಲ್ಲ.

ತಪಾಸಣೆ ಇಲ್ಲದೆ ವಾಹನಗಳನ್ನು ಬಿಡದೇ ಇದ್ದಿದ್ದರಿಂದ ಲಾಕ್‌ಡೌನ್‌ ನಿಯಮಗಳ ಪಾಲನೆ ಆಗುತ್ತಿತ್ತು. ಆದರೆ ಇದೀಗ ಪೊಲೀಸ್‌ ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಿಸದೇ ಇರುವುದು ವಿಪರ್ಯಾಸ.

ಎಮ್ಮೆಹಟ್ಟಿ ಬಳಿ ಇರುವುದು ಒಂದೇ ಚೆಕ್‌ಪೋಸ್ಟ್‌ ಆಗಿದ್ದು, ಬಹದ್ದೂರ್‌ಘಟ್ಟದಲ್ಲಿ ಚೆಕ್‌ ಪೋಸ್ಟ್‌ ಇರಲಿಲ್ಲ. ಇದನ್ನು ನಾವು ಅಡಿಷನಲ್‌ ಆಗಿ ಹಾಕಿಕೊಂಡಿದ್ದೆವು. ರಾಷ್ಟ್ರೀಯ ಹೆದ್ದಾರಿ 4ರ ಎಮ್ಮೆಹಟ್ಟಿ ಚೆಕ್‌ಪೋಸ್ಟ್‌ ಬಗ್ಗೆ ಗಮನವನ್ನು ಕೇಂದ್ರೀಕರಿಸಿದ್ದೇವೆ. ಇಲ್ಲಿ ಮೆಡಿಕಲ್‌ ಟೀಮ್‌ ಕೂಡ ಇದೆ. ಹೀಗಾಗಿ ಅಲ್ಲಿನ ಮ್ಯಾನ್‌ ಪವರ್‌ ಅನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ರಾಜು,
ಭರಮಸಾಗರ ಠಾಣೆ ಪಿಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next