Advertisement

ವಿದ್ಯೆ, ಸಂಸ್ಕೃತಿ ಕಲಿಸಿ: ವಿಶ್ವಸಂತೋಷ್‌ ಗುರೂಜಿ

01:00 AM Feb 20, 2019 | Team Udayavani |

ಬ್ರಹ್ಮಾವರ: ಮಕ್ಕಳಿಗೆ ವಿದ್ಯೆ, ಉತ್ತಮ ಸಂಸ್ಕೃತಿ ಸಂಸ್ಕಾರ ಕಲಿಸಿ ಎಂದು ಬಾರಕೂರು ಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಸ್ವಾಮೀಜಿ ಹೇಳಿದರು. ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಥಮ ವರ್ಧಂತ್ಯುತ್ಸವ ಪ್ರಯುಕ್ತ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬಾರಕೂರು ಎಲ್ಲ ಸಮುದಾಯದವರ ಆರಾಧ್ಯ ಕೇಂದ್ರ. ಮುಂದೆ ಪ್ರವಾಸಿ ತಾಣವಾಗಲಿ  ಎಂದರು.

Advertisement

ತಕ್ಕ ಪಾಠ ಕಲಿಸಬೇಕು
ಪ್ರಧಾನಿ ಮೋದಿ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಬೇಕು. ಪಾಕಿಸ್ಥಾನದ ಕುಕೃತ್ಯಕ್ಕೆ ಸಾಕಷ್ಟು ಸೈನಿಕರನ್ನು ಕಳೆದುಕೊಂಡಿ ದ್ದೇವೆ. ಶಿವರಾತ್ರಿ ಎನ್ನುವುದು ಭಾರತಕ್ಕೆ ಶುಭವಾದರೆ ಪಾಕಿಸ್ಥಾನಕ್ಕೆ ಕರಾಳ ರಾತ್ರಿಯಾಗಬೇಕು ಎಂದು ಸಂತೋಷ್‌ ಗುರೂಜಿ ಹೇಳಿದರು.

ದೇವಾಡಿಗ-ನಾದ
ದೇವರ ಪೂಜೆಗೆ ನಾದದ ಆವಶ್ಯಕತೆ ಇದೆ. ವೇದದಿಂದ ನಾದ ಹುಟ್ಟಿದೆ. ಈ ನಾದವನ್ನು ಒಲಿಸಿಕೊಳ್ಳಲು ತಪಸ್ಸು ಮಾಡಬೇಕು. ಅದು ದೇವಾಡಿಗ ಸಮುದಾಯದವರಿಗೆ ಒಲಿದಿದೆ ಎಂದರು. ಸೂರಾಲು ಚಿನ್ಮಯ ಮಿಷನ್‌ನ ದಾಮೋದರ ಚೈತನ್ಯ ಶುಭಾಶಂಸನೆ ಗೈದರು. ಆಡಳಿತ ಮಂಡಳಿ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌ ಅಧ್ಯಕ್ಷತೆ ವಹಿಸಿದ್ದರು. 

ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ, ಪ್ರಸಿದ್ಧ ನ್ಯೂರೋ ಸರ್ಜನ್‌ ಡಾ| ಕೆ.ವಿ. ದೇವಾಡಿಗ, ಹೊಟೇಲ್‌ ಉದ್ಯಮಿ ಪಿ. ರಾಮಣ್ಣ ಶೇರಿಗಾರ್‌, ಉದ್ಯಮಿಗಳಾದ ಸುರೇಶ್‌ ಡಿ. ಪಡುಕೋಣೆ, ದಿನೇಶ್‌ ಸಿ. ದೇವಾಡಿಗ ದುಬಾೖ,  ರವಿ ದೇವಾಡಿಗ, ಆಲೂರು ರಘುರಾಮ ದೇವಾಡಿಗ, ಎಸ್‌.ಎಂ. ಚಂದ್ರ, ಹರೀಶ್‌ ಶೇರಿಗಾರ್‌ ದುಬಾೖ, ನಾರಾಯಣ ದೇವಾಡಿಗ ದುಬಾೖ, ನಾಗರಾಜ್‌ ಪಡುಕೋಣೆ,  ಜನಾರ್ದನ ಎಸ್‌. ದೇವಾಡಿಗ, ರಘುರಾಮ್‌ ದೇವಾಡಿಗ ಶಿವಮೊಗ್ಗ, ನರಸಿಂಹ ದೇವಾಡಿಗ ಉಡುಪಿ, ಹಿರಿಯಡ್ಕ ಮೋಹನದಾಸ್‌ ಮುಂಬಯಿ ಉಪಸ್ಥಿತರಿದ್ದರು. 

ನರಸಿಂಹ ದೇವಾಡಿಗ ಸ್ವಾಗತಿಸಿ, ಜನಾರ್ದನ ಬಿ. ದೇವಾಡಿಗ ಬಾರಕೂರು ಪ್ರಸ್ತಾವನೆಗೈದರು. ಯಾದವ ದೇವಾಡಿಗ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next