Advertisement

ಬಾರಾಡಿ ಬೀಡು ಸೂರ್ಯ-ಚಂದ್ರ ಜೋಡುಕರೆ ಕಂಬಳದ ಫಲಿತಾಂಶ

01:28 PM Dec 11, 2022 | Team Udayavani |

ಕಾರ್ಕಳ: 36ನೇ ವರ್ಷದ ಬಾರಾಡಿ ಬೀಡು ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ ಕೂಟವು 176 ಜತೆ ಕೋಣಗಳ ಭಾಗವಹಿಸುವಿಕೆಯಲ್ಲಿ ಯಶಸ್ವಿಯಾಗಿ ನಡೆಯಿತು.

Advertisement

ಬಾರಾಡಿ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 4 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 31 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 24 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 96 ಜೊತೆ ಕೋಣಗಳು ಭಾಗವಹಿಸಿದ್ದವು.

ಅಡ್ಡಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಅವರ ಕೋಣಗಳು ಸತತ ಮೂರು ಕಂಬಳದಲ್ಲಿ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಅಲ್ಲದೆ ಹಗ್ಗ ಹಿರಿಯ ವಿಭಾಗದಲ್ಲಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ಅವರು ಎ-ಬಿ ಕೋಣಗಳು ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪಡೆದವು.

ಬಾರಾಡಿ ಕಂಬಳ ಕೂಟದ ಫಲಿತಾಂಶ

ಕನೆಹಲಗೆ

Advertisement

ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ

ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ

ಪ್ರಥಮ: ನಾರಾವಿ ಯುವರಾಜ್ ಜೈನ್

ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ವಾಲ್ಪಾಡಿ ಹಾಲಾಜೆ ಲೂಯಿಸ್ ಲಾರೆನ್ಸ್ ಸಲ್ದಾನ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯ

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಬಿ”

ಓಡಿಸಿದವರು: ಬಂಬ್ರಾನ ಬೈಲ್ ವಂದಿತ್ ಶೆಟ್ಟಿ

ದ್ವಿತೀಯ: ಸಿದ್ಧಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ಹಗ್ಗ ಕಿರಿಯ

ಪ್ರಥಮ: ಅಲ್ಲಿಪಾದೆ ದೇವಸ್ಯ ವಿಜಯ್ ಕೋಟ್ಯಾನ್

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ದ್ವಿತೀಯ: ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ

ಓಡಿಸಿದವರು: ಕಡಂದಲೆ ಅಥಿತ್ ಶೆಟ್ಟಿ

ನೇಗಿಲು ಹಿರಿಯ

ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಎ”

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ದ್ವಿತೀಯ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ “ಬಿ”

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನೇಗಿಲು ಕಿರಿಯ

ಪ್ರಥಮ: ರೆಂಜಾಳ ಸಾನದ ಬಾಕ್ಯಾರು ನಿಮಿಷ್ ಮಹೇಶ್ ಪೂಜಾರಿ

ಓಡಿಸಿದವರು: ಭಟ್ಕಳ ಶಂಕರ್

ದ್ವಿತೀಯ: ನಿಟ್ಟೆ ಪರಪ್ಪಾಡಿ ನಿಹಾಲ್ ಕೋಟ್ಯಾನ್

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

Advertisement

Udayavani is now on Telegram. Click here to join our channel and stay updated with the latest news.

Next