ವಾಷಿಂಗ್ಟನ್: ಅಮೆರಿಕದ ಚುನಾವಣ ಕಣ ಬುಧವಾರದಂದು ಹಾಲಿ ಮತ್ತು ಮಾಜಿ ಅಮೆರಿಕಾಧ್ಯಕ್ಷರ ಜಟಾಪಟಿಗೆ ಕಾರಣವಾಗಿದೆ. ಡೆಮಾಕ್ರಟಿಕ್ ಪಕ್ಷ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಒಡನೆಯೇ ಟ್ವಿಟರ್‌ನಲ್ಲಿ ಪ್ರತಿಟೀಕೆ ಮಾಡಿರುವ ಟ್ರಂಪ್, ಬರಾಕ್ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಇದೇ ಸಮ್ಮೇಳನದಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.
ಅಧ್ಯಕ್ಷರಿಗೆ ಅನುಮಾನ: ಸಮ್ಮೇಳನದಲ್ಲಿ ಮಾತ ನಾಡಿದ ಒಬಾಮ, ಅಮೆರಿಕದಲ್ಲಿ ಯಾರೇನೇ ಮಾಡಿದರೂ ಅದು ಹಾಲಿ ಅಧ್ಯಕ್ಷರಿಗೆ ಅನು ಮಾನಾ ಸ್ಪದವಾಗಿಯೇ ಕಾಣುತ್ತದೆ. ಸಿಕ್ಖರು, ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿಯನ್ನೂ ಅನುಮಾನಿಸಲಾಗಿದೆ. ಐರ್ಲೆಂಡಿಗರು, ಇಟಾಲಿಯನ್ನರು ಹಾಗೂ ಏಷ್ಯನ್ನರನ್ನು ಅವರವರ ದೇಶಗಳಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ. ಕಪ್ಪು ಜನಾಂಗ ದವರನ್ನು ಸರಪಳಿಗಳಿಂದ ಬಂಧಿಸಿ ಎಳೆದೊಯ್ದು ಅವರನ್ನು ನೇಣು ಹಾಕಲಾಗಿದೆ. ಕಪ್ಪು ವರ್ಣೀ ಯರು ಕೂರುವ ಸ್ಥಳಗಳಲ್ಲಿ ಉಗುಳಿ ಅವರು ಅಲ್ಲಿ ಕೂರದಂತೆ ಮಾಡಿದ ಅಸಹ್ಯ ಘಟನೆಗಳೂ ನಡೆದಿವೆ. ಜನರಲ್ಲಿ ಹೀಗೆ ದ್ವೇಷದ ಬೆಂಕಿಯನ್ನು ಹಚ್ಚುತ್ತಲೇ ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹಾಗೂ ಗೆಲ್ಲುತ್ತಿದ್ದಾರೆ ಎಂದರು.
ಟ್ರಂಪ್ ಕಿಡಿ: ಒಬಾಮಾ ಅವರ ಹೇಳಿಕೆ ಹೊರಬಿದ್ದ ಕೂಡಲೇ ಕೆಂಡಾಮಂಡಲವಾಗಿರುವ ಟ್ರಂಪ್, ಟ್ವಿಟರ್‌ನಲ್ಲಿ ಒಬಾಮಾ ಅವರ ವಿರುದ್ಧ ಪ್ರಹಾರ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಯಕರಾದ ಬರಾಕ್ ಹಾಗೂ ಹಿಲರಿ ಕ್ಲಿಂಟನ್ ಅವರನ್ನು ಇಬ್ಬಗೆಯ ನೀತಿಯುಳ್ಳವರು ಎಂದಿ ರುವ ಅವರು, ನಾನು ಡೆಮಾಕ್ರಟಿಕ್ ಪಕ್ಷದ ಚುನಾ ವಣ ತಯಾರಿ, ಅಭಿಯಾನದ ಮೇಲೆ ಗೂಢ ಚರ್ಯೆ ನಡೆಸುತ್ತಿರು ವುದಾಗಿ ಆರೋಪಿಸಿರುವ ಒಬಾಮ ಅವರೇ, 2016ರ ಚುನಾವಣೆಯಲ್ಲಿ ನನ್ನ ಚುನಾವಣ ತಂತ್ರಗಾರಿಕೆಗಳ ಬಗ್ಗೆ ಗೂಢ ಚರ್ಯೆ ನಡೆಸಿ, ಸಿಕ್ಕಿಹಾಕಿಕೊಂಡಿ ದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಸ್ಪರ್ಧಿಸಲು ಟಿಕೆಟ್ ಗಳಿಸಿರುವ ಕಮಲಾ ಹ್ಯಾರಿಸ್ ಅವರನ್ನೂ ಟೀಕಿಸಿರುವ ಟ್ರಂಪ್, “”ಕಮಲಾ ಅವರು ಹಿಂದೆ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದಾಗ ಜೋ ಬಿಡೆನ್‌ರನ್ನು ಜನಾಂಗೀಯ ದ್ವೇಷಿ ಎಂದು ಟೀಕಿಸಿದ್ದರು. ಸ್ಪರ್ಧಿಸಲು ಬಿಡೆನ್‌ಯೋಗ್ಯವಲ್ಲ ಎಂದು ಜರಿದಿದ್ದರು. ಈಗ ಮರೆತು ಹೋಯಿತೇ” ಎಂದು ಹೇಳಿದ್ದಾರೆ.
ಎಎಪಿಐ ಸಮುದಾಯ ಮಹತ್ವವಾದದ್ದು: ಕಮಲಾ
ಚುನಾವಣೆಯಲ್ಲಿ ಏಷ್ಯ ನ್ನರು, ಅಮೆರಿಕನ್ನರು ಹಾಗೂ ಪೆಸಿಫಿಕ್ ಐಲ್ಯಾಂಡ್‌ನವರು (ಎಎಪಿಐ ಸಮುದಾಯ) ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ತಿಳಿಸಿದ್ದಾರೆ. ತಮ್ಮ ಪಕ್ಷದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತ ನಾಡಿದ ಅವರು, ಎಎಪಿಐ ಸಮುದಾ ಯವು ವೇಗವಾಗಿ ಬೆಳೆಯುತ್ತಿ ರುವ ಸಮುದಾಯವಾಗಿದೆ. ಇವರ ಜನಸಂಖ್ಯೆ 1.1 ಕೋಟಿಯಷ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಸಮುದಾಯ ಯಾರ ಕೈ ಹಿಡಿಯಲಿದ್ದಾರೆಯೋ ಅವರಿಗೆ ಸಣ್ಣ ಅಂತರದ ಜಯ ಸಿಗುತ್ತದೆ ಎಂದಿದ್ದಾರೆ.