ಉಡುಪಿ: ಹೆದ್ದಾರಿ ಬದಿಯ ಎಲ್ಲ ಬಾರ್‌ಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಮೊದಲು ನೀಡಿದ್ದ ತೀರ್ಪನ್ನು ಸಡಿಲಗೊಳಿಸಿ ಕೆಲ ದಿನಗಳ ಹಿಂದೆಯಷ್ಟೇ ನಗರ ಪ್ರದೇಶಗಳಿಗೆ ವಿನಾಯಿತಿ ನೀಡಿ ಪರಿಷ್ಕೃತ ಆದೇಶವನ್ನು ನೀಡಿದ್ದು, ಬಾರ್ ಮಾಲಕರು ಸಂತಸಗೊಂಡಿದ್ದಾರೆ.
ಸುಪ್ರೀಂ ಕೋರ್ಟಿನ ಹೊಸ ತೀರ್ಪಿನಂತೆ ಉಡುಪಿ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯನ್ನು ಹೊರತುಪಡಿಸಿ ಕಾರ್ಕಳ, ಕುಂದಾಪುರ, ಕಾಪು ಪುರಸಭೆ, ಸಾಲಿಗ್ರಾಮ ಪ.ಪಂ., ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ಒಟ್ಟು 60 ಬಾರ್‌ಗಳು ಪುನರ್ ಆರಂಭಗೊಳ್ಳಲಿವೆ.
ಸುಪ್ರೀಂ ಮರು ತೀರ್ಪಿನಿಂದ ಸಂತಸವಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರುತಿಸಿರುವ ಮರು ಪ್ರಾರಂಭವಾಗುವ 60 ಮದ್ಯ ಮಾರಾಟ ಅಂಗಡಿಗಳ ಪೈಕಿ ಗುರುವಾರದವರೆಗೆ 41 ತೆರೆದಿವೆ. ಮಿಕ್ಕುಳಿದವು ಹಂತ-ಹಂತವಾಗಿ ತೆರೆದುಕೊಳ್ಳಲಿದೆ ಎಂದು ಬಾರ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಿ. ಗೋವಿಂದರಾಜ ಹೆಗ್ಡೆ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ದ.ಕ. : 74 ಮದ್ಯದಂಗಡಿಗಳು ಪುನರಾರಂಭಕ್ಕೆ ಸಿದ್ದತೆ
ಸುಪ್ರೀಂ ಕೋರ್ಟ್ ನೀಡಿದ ಮರು ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 39, ಬಂಟ್ವಾಳ 7, ಬೆಳ್ತಂಗಡಿ 4, ಸುಳ್ಯ 12 ಹಾಗೂ ಪುತ್ತೂರಿನಲ್ಲಿ 2 ಸಹಿತ 74 ಮದ್ಯದಂಗಡಿಗಳು ಪುನ ರಾರಂಭಗೊಳ್ಳಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 463 ಮದ್ಯದ ಅಂಗಡಿ ಗಳ ಪೈಕಿ 209 ಮದ್ಯದ ಅಂಗಡಿಗಳು ಬಂದ್ ಆಗಿದ್ದವು ಇವುಗಳಲ್ಲಿ 12 ಮದ್ಯದಂಗಡಿಗಳು ಸœಳಾಂತರಗೊಂಡಿದ್ದವು.
ಪ್ರಸ್ತುತ ನಗರ ಪ್ರದೇಶ ಗಳಲ್ಲಿ ಮುಚ್ಚಿರುವ ಮದ್ಯದ ಅಂಗಡಿಗಳನ್ನು ಪುನಾರಂಭಿಸುವ ಕುರಿತು ಅಬಕಾರಿ ಇಲಾಖೆಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.