Advertisement

ಬಪ್ಪನಾಡು: ಯೋಗಾಸನ ಸಹಿತ ದುರ್ಗಾನಮಸ್ಕಾರ

12:19 PM Oct 15, 2018 | Team Udayavani |

ಮೂಲ್ಕಿ: ಎಸ್‌.ಪಿ.ವೈ.ಎಸ್‌.ಎಸ್‌. ವತಿಯಿಂದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸುಮಾರು 1,500ಕ್ಕೂ ಹೆಚ್ಚು ಸದಸ್ಯರು ಯೋಗಾಸನ ಸಹಿತ ದುರ್ಗಾನಮಸ್ಕಾರವನ್ನು ರವಿವಾರ ಬೆಳಗ್ಗೆ ನಡೆಸಿಕೊಟ್ಟರು. ಪುಷ್ಪಾರ್ಚನೆಯೊಂದಿಗೆ ಮಹಾ ಲಕ್ಷ್ಮೀ ಅಷ್ಟೋತ್ತರ ಸ್ತೋತ್ರ ಪಠನ ಈ ಸಂದರ್ಭದಲ್ಲಿ ಕ್ಷೇತ್ರದ ಸುತ್ತಲೂ ನೆರೆದ ಯೋಗ ಪಟುಗಳಿಂದ ನಡೆಯಿತು.

Advertisement

ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಸಮಿತಿಯ ಪ್ರಾಂತ್ಯ ಸಂಚಾಲಕ ರವೀಶ್‌ ಕುಮಾರ್‌, ಶಿವಾನಂದ ರೈ, ನೇತ್ರಾವತಿ ವಲಯ ಸಂಚಾಲಕರಾದ ಹರೀಶ್‌ ಕೋಟ್ಯಾನ್‌, ವ್ಯವಸ್ಥಾಪನ ಪ್ರಮುಖರಾದ ಲಕ್ಷ್ಮೀ ನಾರಾಯಣ, ಜಿಲ್ಲಾ ಪ್ರಮುಖರಾದ ಪ್ರಭಾ, ಲಲಿತಾ, ಪ್ರಸೀತಾ ಪ್ರದೀಪ್‌, ಧರಣೇಶ್‌, ಚಂದ್ರಶೇಖರ್‌, ರಾಮಕೃಷ್ಣ, ಬಾಲಚಂದ್ರ, ಭರತ್‌ ಜೈನ್‌, ಅಶೋಕ್‌ ಜೈನ್‌, ಪ್ರತಾಪ, ವಲಯ ಸಂಚಾಲಕರಾದ ನಾರಾಯಣ, ಸಹ ಸಂಚಾಲಕ ಜಗನ್ನಾಥ ಮುಂತಾದವರಿದ್ದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಚಾಲಕ ಗೋಕುಲ್‌ನಾಥ ಶೆಣೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next