Advertisement

ಗುರುವಾರ ಮುಂಜಾನೆ 4.45ರ ವರೆಗೆ ನಡೆದ ಬಂಟ್ವಾಳ ತಾಲೂಕಿನ ಮತ ಎಣಿಕೆ! ತಡರಾತ್ರಿಯ ಫಲಿತಾಂಶಗಳು

09:41 AM Dec 31, 2020 | Team Udayavani |

ಬಂಟ್ವಾಳ: ಅತಿ ಹೆಚ್ಚಿನ 57 ಗ್ರಾ.ಪಂ.ಗಳನ್ನು ಒಳಗೊಂಡಿದ್ದ ಬಂಟ್ವಾಳ ತಾಲೂಕಿನ ಮತ ಎಣಿಕೆ ಪ್ರಕ್ರಿಯೆಯು ಮುಂಜಾನೆವರೆಗೂ ಸಾಗಿದ್ದು, ಗುರುವಾರ 4.45ರ ವೇಳೆಗೆ ಮುಕ್ತಾಯಗೊಂಡಿತ್ತು.

Advertisement

ಚುನಾವಣೆಯು ಬ್ಯಾಲೆಟ್ ಪೇಪರ್ ಮೂಲಕ ನಡೆದಿದ್ದು, ಒಂದೊಂದು ಗ್ರಾ.ಪಂ.ಗಳ ಚುನಾವಣೆಯು ಐದಾರು ಗಂಟೆಗಳ ಕಾಲ ನಡೆದಿತ್ತು. ಹೆಚ್ಚಿನ ಗ್ರಾ.ಪಂ.ಗಳಲ್ಲಿ 20ಕ್ಕೂ ಅಧಿಕ ಸ್ಥಾನಗಳಿದ್ದು, ಇಂತಹ ಕಡೆಗಳ ಎಣಿಕೆಯಲ್ಲಿ ಇನ್ನೂ ಹೆಚ್ಚಿನ ವಿಳಂಬವಾಗಿತ್ತು. ಹೀಗಾಗಿ ಎಣಿಕೆ ಮುಂಜಾನೆವರೆಗೆ ಮುಂದುವರಿದಿತ್ತು.

ಅಧಿಕಾರಿಗಳು, ಪೊಲೀಸರು ಮುಂಜಾನೆವರೆಗೂ ಸ್ಥಳದಲ್ಲಿದ್ದು, ಎಣಿಕೆ ಕಾರ್ಯವನ್ನು ಸುಗಮಗೊಳಿಸಿದರು.

ತಡರಾತ್ರಿಯ ಫಲಿತಾಂಶಗಳು:

ಅಳಿಕೆ ಗ್ರಾಮ ಪಂಚಾಯತ್: ಒಟ್ಟು 15 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಈ ಪೈಕಿ 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು  ಹಾಗೂ5 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು  ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಪೂಜಾರಿ ಸಣ್ಣಗುತ್ತ, ಸದಾಶಿವ ಶೆಟ್ಟಿ ಅಳಿಕೆ, ಸೀತಾರಾಮ ಶೆಟ್ಟಿ ಮುಳಿಯ, ರವೀಶ್ ಕೆ., ಜಗದೀಶ್ ಶೆಟ್ಟಿ ಮುಳಿಯ ಗುತ್ತು, ಸರಸ್ವತಿ ಚೆಂಡುಕ್ಕಳ,  ಬಬಿತಾ ನಾರಾಯಣ‌ ಜೆಡ್ಡು, ಸೆಲ್ವಿನ್ ಡಿಸೋಜಾ ನೆಕ್ಕಿತ ಪುಣಿ, ಸರೋಜಿನಿ ಕೇಕನಾಜೆ. ಶಾಂಬವಿ ಸುಧಾಕರ ಮಡಿಯಾಳ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಕಾನ ಈಶ್ವರ ಭಟ್, ಶಶಿಕಲ ಆನೆಪದವು, ಸುಕುಮಾರ ಮುಳಿಯ, ಗಿರಿಜ ಬಿಟ್ಟಿಮೂಲೆ, ಭಾಗಿರತಿ ಆಯ್ಕೆಯಾಗಿದ್ದಾರೆ.

Advertisement

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ನಿರ್ಬಂಧ: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.144 ನಿಷೇಧಾಜ್ಞೆ ಜಾರಿ

ವೀರಕಂಭ ಗ್ರಾಮ ಪಂಚಾಯತ್ : ಒಟ್ಟು 14 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ, ದಿನೇಶ್ ಪೂಜಾರಿ, ಮೀನಾಕ್ಷಿ, ಜಯಂತಿ ಪೂಜಾರಿ, ಲಕ್ಮೀ, ಉಮಾವತಿ ದಾಮೋದರ ಸಪಲ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಘು ಪೂಜಾರಿ, ನಿಶಾಂತ್ ರೈ, ಜನಾರ್ದನ ಬಾಯಿಲ, ಗೀತಾ, ಅಬ್ದುಲ್ ರಹಮಾನ್ ಎಸ್, ಲಲಿತ ವಿಜಯ ಹಾಗೂ ಶೀಲಾನಿರ್ಮಲ ವೇಗಸ್ ಸಾಧಿಸಿದ್ದಾರೆ

ಸಜೀಪನಡು ಗ್ರಾ.ಪಂ.:  ಮಹಮ್ಮದ್ ನಾಸೀರ್, ಮಮ್ತಾಝ್, ಸಬಿತಾ ಡಿಸೋಜಾ, ಅಬೂಬಕ್ಕರ್, ಅಬ್ದುಲ್ ರಹ್ಮಾನ್, ಫಾಝೀಯ ಬಾನು, ಭೀಪಾತುಮ್ಮ, ಸುಶೀಲ, ಸಲಿಕ ಬಾನು, ಹೇಮಂತ್ ಕುಮಾರ್, ಶೋಭಾ, ರಫೀಕ್, ಲತೀಫ್, ಇಸ್ಮಾಯಿಲ್ ಗೋಳಿಪಡ್ಪು, ಜಯಂತಿ ಜಯ ಸಾಧಿಸಿದ್ದಾರೆ.

ಬಡಗ ಕಜೆಕಾರು ಗ್ರಾ.ಪಂ:  ಸುಗಂಧಿ, ಸತೀಶ್ ಬಂಗೇರ, ಮೋಹಿನಿ ಮಹಮ್ಮದ್ ಅತಾವುಲ್ಲ, ಶಮೀರ, ಜೋನ್ ಸೇರಾ, ರಾಜೀವಿ, ಬಿ‌.ದಿವಾಕರ, ಉಷಾ, ದೇವದಾಸ್ ಅಬುರಾ, ಅಸ್ಮಾ, ಕೆ.ಡೀಕಯ್ಯ ಬಂಗೇರ ಗೆಲುವು

ಅಣ್ಣ- ತಂಗಿಗೆ ಗೆಲುವು:  ಇರ್ವತ್ತೂರು ಗ್ರಾ.ಪಂ.ನಲ್ಲಿ ಸ್ಪರ್ಧಿಸಿದ್ದ ಅಣ್ಣ ತಂಗಿ ಗೆಲುವು ಸಾಧಿಸಿದ್ದಾರೆ. ಮೂಡುಪಡುಕೋಡಿ 1ನೇ ವಾರ್ಡ್ ನಿಂದ ಸುಧೀಂದ್ರ ಶೆಟ್ಟಿ, 2ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ನ್ಯಾಯವಾದಿ ಸುಚಿತ್ರ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಇಬ್ಬರು ಕೂಡ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದರು.

ಒಂದು ಮತ ಅಂತರದ ಗೆಲುವು: ಚೆನ್ನೈತ್ತೋಡಿ ಗ್ರಾ.ಪಂ.ನ ಅಜ್ಜಿಬೆಟ್ಟು ವಾರ್ಡಿನ ಸ್ಪರ್ಧಿಗಳಾದ ರವಿರಾಮ 524 ಹಾಗೂ ಚಂದ್ರಶೇಖರ ರೈ 523 ಮತಗಳನ್ನು ಪಡೆದಿದ್ದು, ಒಂದು ಮತಗಳಿಂದ ರವಿರಾಮ ಗೆಲುವು ಸಾಧಿಸಿದ್ದಾರೆ.

ಕುಕ್ಕಿಪಾಡಿ ಗ್ರಾಮ ಪಂಚಾಯತ್ ಬಿಜೆಪಿ ಪಕ್ಷ ಮೇಲುಗೈ:  ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನ ಗಳು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದರೆ 1. ಸ್ಥಾನ ಕಾಂಗ್ರೆಸ್ ಬೆಂಬಲಿತ ಸ್ಥಾನ ಪಡೆದಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗೀತಾ, ಶೋಭಾ, ಶೇಖರ್ ಶೆಟ್ಟಿ, ಪ್ರತಿಭಾ ಶೆಟ್ಟಿ, ಪುಷ್ಪ, ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ಸುಜಾತ, ಬೇಬಿ, ಚಂದ್ರಪೂಜಾರಿ, ಪೂರ್ಣಿಮಾ ಹಾಗೂ ಕಾಂಗ್ರೆಸ್ ಬೆಂಬಲಿತ ದಿನೇಶ್ ಶಾಂತಿ ಗೆಲುವು ಸಾಧಿಸಿದರು.

ಪೆರುವಾಯಿ ಗ್ರಾ.ಪಂ.:  ರಾಜೇಂದ್ರ ರೈ, ಬಾಲಕೃಷ್ಣ ಪೂಜಾರಿ, ನಬಿಸ, ಮಾಲತಿ, ರಶ್ಮಿ, ವರುಣ್ ರೈ, ನಾರಾಯಣ ನಾಯ್ಕ್, ಲಲಿತಾ ಗೆಲುವು

ಕನ್ಯಾನ ಗ್ರಾಮ ಪಂಚಾಯತ್: ಅಬ್ದುಲ್ ರಹಿಮಾನ್, ರೇಖಾ ರಮೇಶ್, ಮಜೀದ್, ಗಣೇಶ್ ಭಟ್ ನೀರ್ಪಾಜೆ, ವೀಣಾ ನಝರೀನ್ ಡಿ ಸೋಜ, ನಳಿನಿ ದಯಾನಂದ, ಪಿಬಿ ಮೊಯಿದ್ದೀನ್, ಅನೀತಾ ಮೊಂತೆರೊ, ದೇವಕಿ, ಗ್ರೇಸಿ ಕ್ರಾಸ್ತ, ಮೊಹಿದ್ದೀನ್, ಕೃಷ್ಣ ನಾಯ್ಕ, ಬುಶ್ರಾ, ಸೆಲೆಸ್ಟಿನ್ ಡಿ ಸೋಜ, ಧರ್ನಮ್ಮ, ಮನೋಜ್, ರಘರಾಮ ಶೆಟ್ಟಿ, ನಾರಾಯಣ ಕುಸುಮಾ, ವನಿತಾ ಗೆಲುವು

ವಿಟ್ಲಪಡ್ನೂರು ಗ್ರಾ.ಪಂ: ರವೀಶ್ ಶೆಟ್ಟಿ ಕರ್ಕಳ, ರೇಶ್ಮಾ ಶಂಕರಿ ಬಲಿಪಗುಳಿ, ನಾಗೇಶ್ ಶೆಟ್ಟಿ, ಪ್ರೇಮಲತಾ, ರೇಖಾ, ಅಮಿತಾ, ಹರಿಕಿಶೋರ್, ಜಯಲಕ್ಷ್ಮೀ,  ಹರ್ಷದ್ ಕುಕ್ಕಿಲ, ಸಂದೇಶ್ ಶೆಟ್ಟಿ ಬಿಕ್ನಾಜೆ, ಶರೀಪ್ ಕೊಡಂಗೆ, ಲಕ್ಷ್ಮೀ, ಕೆ.ಎಚ್ ನೆಬಿಸ, ಮೊಹಮ್ಮದ್ ಕಡಂಬು, ಆಯಿಷಾ ಖಾದರ್ ಗೆಲುವು. ಜಯಂತ, ಜಯಭಾರತಿ ಅವಿರೋಧವಾಗಿ ಆಯ್ಕೆ.

ನೆಟ್ಲಮುಡ್ನೂರು ಗ್ರಾಮಪಂಚಾಯತ್: ಶ್ರೀಧರ್ ರೈ, ಅಬ್ದುಲ್ ಲತೀಫ್, ಪ್ರೇಮ, ಲಕ್ಷ್ಮೀ ಕೂಸಪ್ಪ, ಶಮಿತ, ಧನಂಜಯ, ಅಶೋಕ್ ರೈ, ಜಯಂತಿ, ಶಾಲಿನಿ ಕೆ, ಶಕೀಲಾ ಹಾಗೂ ಸತೀಶ್ ಆಯ್ಕೆ.

ಅರಳ ಗ್ರಾ.ಪಂ:  ಲಕ್ಷ್ಮೀಧರ ಶೆಟ್ಟಿ, ತುಂಗಮ್ಮ, ಪ್ರಸನ್ನಕುಮಾರ್, ಚಂದ್ರಹಾಸ ಪೂಜಾರಿ, ದೇವಕಿ, ಎಂ.ಬಿ.ಆಶ್ರಫ್, ಹಮೀದಬಾನು, ಪ್ರೇಮಾ, ದೇಜಪ್ಪ ಪೂಜಾರಿ, ನಳಿನಿ ನಾಯ್ಕ ಆಯ್ಕೆ.

ಕಡೇಶ್ವಾಲ್ಯ ಗ್ರಾ ಪಂ: ಒಟ್ಟು 13 ಸ್ಥಾನಗಳ ಪೈಕಿ 8 ಬಿಜೆಪಿ, 4.  ಕಾಂಗ್ರೆಸ್ ಹಾಗೂ 1 ಸ್ವತಂತ್ರ ಅಭ್ಯರ್ಥಿ ಗೆಲುವು.  ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಬನಾರಿ, ಭಾರತಿ, ನಾಗೇಶ್, ವಶಿತಾ, ಪ್ರಮೀಳಾ, ಪ್ರಸಾದ್, ಜಯ ನೇಜಿನಡ್ಕ, ಭಾಸ್ಕರ, ‌ಹಾಗೂ ಕಾಂಗ್ರೆಸ್ ಬೆಂಬಲಿತರಾದ ಶೀಲಾ ನಾಯ್ಕ, ಗೀತಾಸುಂದರ್ ನೆಲ್ಲಿಗುಡ್ಡೆ, ಹರಿಣಾಕ್ಷಿ ಕಾಡಬೆಟ್ಟು, ನಳಿನಿ ರತ್ನಾಕರ್ ನಾಯಕ್ ಮತ್ತು ಸ್ವತಂತ್ರ ಅಭ್ಯರ್ಥಿ ಸನತ್ ಆಳ್ವ ಆಯ್ಕೆ.

ಅಮ್ಟಾಡಿ ಗ್ರಾ. ಪಂ: ಒಟ್ಟು 20 ಸ್ಥಾನಗಳ ಪೈಕಿ 14 ಬಿಜೆಪಿ ಬೆಂಬಲಿತರಿಗೆ ಹಾಗೂ 3 ಸಿ.ಪಿ.ಐ ಬೆಂಬಲಿತರಿಗೆ ಉಳಿದಂತೆ  3 ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಿಗೆ ಸಿಕ್ಕಿದೆ. ಬಿಜೆಪಿ ಬೆಂಬಲಿತರಾದ ಸುನಿಲ್ ಕಾಯರ್ ಮಾರ್, ಯಶವಂತ ಶೆಟ್ಟಿ, ವಿಜಯ್ ಕುಮಾರ್, ವಿಶ್ವನಾಥ ಕಲಾಯಿ, ಭಾರತಿ ಚೌಟ, ಮೋಹಿನಿ, ಹರೀಶ್ ಶೆಟ್ಟಿ ಪಡು, ರೂಪೇಶ್ ಪೂಜಾರಿ, ಸುಹಾಸಿನಿ, ಯಶೋಧ, ಶ್ರೀದೇವಿ, ಅಶ್ವಿನಿ ಶೆಟ್ಟಿ, ನಳಿನಿ, ಫೆಲಿಕ್ಸ್ ಡಿ.ಸೋಜ ಆಯ್ಕೆ. ಕಾಂಗ್ರೆಸ್ ಬೆಂಬಲಿತರಾದ ಕಿರಣ್ ನೆಲ್ಸನ್ ಪಿಂಟೋ, ಸೌಮ್ಯ , ಹಾಗೂ ಪೂರ್ಣಿಮಾ ಅವಿರೋಧ ಆಯ್ಕೆ, ಸಿ.ಪಿ.ಐ ಬೆಂಬಲಿತರಾದ  ಚಂದ್ರಾವತಿ ಪ್ರಕಾಶ್ , ಬಾಬು ಭಂಡಾರಿ ವಿಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next