Advertisement

Bantwala: ನಿವೃತ್ತ ಸೈನಿಕರ 1.30 ಲಕ್ಷ ರೂ. ನಗದಿದ್ದ ಬ್ಯಾಗ್‌ ಕಳವು

12:18 AM Sep 14, 2024 | Team Udayavani |

ಬಂಟ್ವಾಳ: ರಾಷ್ಟ್ರೀಕೃತ ಬ್ಯಾಂಕೊಂದರ ಬಿ.ಸಿ. ರೋಡು ಶಾಖೆ ಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್‌ ಕಳವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಅಡ್ಯಾರ್‌ ರೈಮಂಡ್‌ ಲೋಬೋ ನಗರ ನಿವಾಸಿ ಅಂಬ್ರೋಸ್‌ ಡಿ’ಸೋಜಾ ಹಣ ಕಳೆದುಕೊಂಡ ವರು. ಅವರು ಸೆ. 4ರಂದು ಬ್ಯಾಂಕ್‌ ಶಾಖೆಗೆ ಆಗಮಿಸಿ ತಮ್ಮ ಖಾತೆಯಿಂದ ಪೆನ್ಶನ್‌ನ 80 ಸಾ.ರೂ. ಡ್ರಾ ಮಾಡಿದ್ದಾರೆ. ಬರುವಾಗ ಅವರಲ್ಲಿ 50 ಸಾವಿರ ರೂ. ಇತ್ತು. ಹೀಗೆ ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗ್‌ ಅನ್ನು ಬ್ಯಾಂಕಿನ ಟೇಬಲ್‌ ಮೇಲಿಟ್ಟು ಪಾಸ್‌ಬುಕ್‌ ಎಂಟ್ರಿ ಮಾಡಿಸಿ ಬಂದು ನೋಡಿದಾಗ ಬ್ಯಾಗ್‌ ಅಲ್ಲಿರಲಿಲ್ಲ.

ಘಟನೆಯ ಕುರಿತು ಅವರು ಶುಕ್ರವಾರ ದೂರು ನೀಡಿದ್ದಾರೆ. ಅವರ ಬ್ಯಾಗ್‌ ಹಾಗೂ ಪಾಸ್‌ಪುಸ್ತಕ ಬಿ.ಸಿ. ರೋಡಿನ ಕೈಕುಂಜೆಯಲ್ಲಿ ಪತ್ತೆಯಾಗಿದ್ದು, ಆದರೆ ಅದರಲ್ಲಿ ಹಣವಿರಲಿಲ್ಲ. ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next