ಬಂಟ್ವಾಳ: ನೇತ್ರಾವತಿ ನದಿಗೆ ಬಟ್ಟೆ ತೊಳೆಯಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬರಿಮಾರು ಗ್ರಾಮದ ಬುರ್ದುನಲ್ಲಿ ನಡೆದಿದೆ.
Advertisement
ಬುರ್ದು ನಿವಾಸಿ ರಾಮಕ್ಕು(60) ಮೃತಪಟ್ಟ ಮಹಿಳೆ. ಅವರು ಬುಧವಾರ ಸಂಜೆ ಬಟ್ಟೆ ತೊಳೆಯುವುದಕ್ಕಾಗಿ ನದಿಗೆ ತೆರಳಿದ್ದು, ಆ ವೇಳೆ ಆಳವಾದ ಪ್ರದೇಶದಲ್ಲಿ ನೀರಿಗೆ ಬಿದ್ದಿದ್ದಾರೆ. ಮಹಿಳೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Election: ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ… ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರ ಸಲಹೆ