Advertisement
ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಹರೀಶ್ ಕುಮಾರ್ ಆವರ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬೆ ನೀರಾ ಘಟಕ ಪುನಃಶ್ಚೇತನಗೊಳಿಸಲು ಕೇರಳದ ಪಾಲಾಕ್ಕಾಡ್ ತೆಂಗು ಉತ್ಪಾದಕ ಕಂಪೆನಿ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಉತ್ಪನ್ನ ಮಾರಾಟದಲ್ಲಿ ತೊಂದರೆಯಾಗಿ ನೀರಾ ಉತ್ಪಾದನೆ ನಿಂತಿದೆ. ಇದೀತ ರೈತ ಉತ್ಪಾದಕ ಕೇಂದ್ರಗಳಿಗೆ ಇದನ್ನು ವಹಿಸಿಕೊಡಲು ಚಿಂತಿಸಲಾಗಿದೆ. ಇದಕ್ಕೆ ಡಿಪಿಆರ್ ಸಿದ್ದಪಡಿಸುತ್ತಿದ್ದು, ಬರುವ ಮಂಗಳವಾರ ಈ ಕುರಿತು ಸಭೆ ನಡೆಸಿ ಇದನ್ನು ಮತ್ತೆ ಪುನರಾಂಭಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ: ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ವಿಳಂಬವಿಲ್ಲದೆ ಸೌಲಭ್ಯ ನೀಡಲಾಗುತ್ತಿದೆ. ಬಂಟ್ವಾಳದಲ್ಲಿ 561 ಫಲಾನುಭವಿಗಳಿಗೆ ಸಿಗದೇ ಇರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು. ಬಿಜೆಪಿಯ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾಗ್ಯಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿಗೆ ವಿಳಂಬ ಇಲ್ಲದೆ ಸೌಲಭ್ಯ ಸಿಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. 2020-21, 2021-22ನೇ ಸಾಲಿನಿಂದ 561 ಮಂದಿಗೆ ಸೌಲಭ್ಯ ಸಿಗದೆ ಇರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
Related Articles
ಬೆಳಗಾವಿ: ಸುರತ್ಕಲ್ ಮಾರುಕಟ್ಟೆಯ ಕಾಮಗಾರಿಗೆ 82 ಕೋ.ರೂ. ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಬಿಜೆಪಿಯ ಡಾ| ಭರತ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 6 ಮಹಡಿಯ ಸಂಕೀರ್ಣ ಇದಾಗಿದ್ದು, 3.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. ಜಾಗದ ಅಲಭ್ಯತೆ ಹಾಗೂ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ನಡೆಸಲಾಗುವುದು ಎಂದರು. 2018ರಲ್ಲಿ ಕಾರ್ಯಾದೇಶವಾಗಿದ್ದರೂ, ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಶುರುವಾಗಿಲ್ಲ. ಯಾವಾಗ ಕಾಮಗಾರಿ ಶುರುವಾಗಲಿದೆ ಎಂದು ಡಾ| ಭರತ್ ಶೆಟ್ಟಿ ಪ್ರಶ್ನಿಸಿದ್ದರು.
Advertisement