Advertisement
ಉಸಿರಾಟದ ತೊಂದರೆ ಇರುವವರಿಗೆ ಕೊರೊನಾ ಹೆಚ್ಚಿನ ತೊಂದರೆ ನೀಡುತ್ತಿದ್ದು, ಅವರಿಗೆ ವೆಂಟಿಲೇಟರ್ ಅನಿವಾರ್ಯವಾಗುತ್ತದೆ. ಈ ಹಿಂದೆ ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ಮಂಗಳೂರು ವೆನಾÉಕ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದ್ದು, ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸೌಲಭ್ಯ ಸಿಕ್ಕಂತಾಗುತ್ತದೆ. ಆದರೆ ವೆಂಟಿಲೇಟರ್‌ಗೆ ಪೂರಕವಾಗಿ ಸೌಲಭ್ಯಗಳು ಸಿಗದೇ ಇರುವುದರಿಂದ ರೋಗಿಗಳನ್ನು ದಾಖಲಿಸಲು ಹಿಂದೇಟು ಹಾಕಬೇಕಾದ ಸ್ಥಿತಿ ಇದೆ.
ಕೋವಿಡ್ ರೋಗಿಗಳಿಗೆ ಹೆಚ್ಚಿನ ಸೇವೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೆಚ್ಚುವರಿ ವೆಂಟಿಲೇಟರ್ ಸೌಲಭ್ಯ ನೀಡಲಾಗಿದ್ದು, ಪ್ರಸ್ತುತ ಇತರ ರೋಗಿಗಳಿಗೆ ಅದನ್ನು ನೀಡಲಾಗುತ್ತಿಲ್ಲ. ಅಂದರೆ ಒಂದೇ ಐಸಿಯು ಇದ್ದು, ಅದನ್ನು ಕೋವಿಡ್‌ಗಾಗಿ ಮೀಸಲಿಟ್ಟಿರುವುದರಿಂದ ಅಲ್ಲಿ ಇತರ ರೋಗಿಗಳಿಗೆ ಸೇವೆ ಸಿಗದೇ ಇರುವುದರಿಂದ ಅವರಿಗೆ ವೆಂಟಿಲೇಟರ್ ಸೌಲಭ್ಯ ಇಲ್ಲ. ಜತೆಗೆ ಕೋವಿಡ್ ರೋಗಿಗಳಿಗೆ ಹೆಚ್ಚಿನ ಸೇವೆಗಾಗಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಇಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇತರ ಸೌಕರ್ಯವೂ ಅತ್ಯಗತ್ಯ
ಸಾಮಾನ್ಯವಾಗಿ ವೆಂಟಿಲೇಟರ್ ನೀಡಿದ ತತ್‌ಕ್ಷಣ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಸಿಗುವುದು ಕಷ್ಟ. ಅಂದರೆ ಅದಕ್ಕೆ ಬೇಕಾದ ಸಿಬಂದಿ, ಸಲಕರಣೆಗಳು, ಜತೆಗೆ ಆಕ್ಸಿಜನ್ ವ್ಯವಸ್ಥೆ ಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲಿ ಅಂತಹ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ಗಳಿದ್ದರೂ, ಐಸಿಯು ಬೆಡ್‌ಗಳು ಮೂರು ಮಾತ್ರ ಇದೆ.
Related Articles
Advertisement
ಪೂರ್ಣ ಪ್ರಮಾಣದ ಸೌಲಭ್ಯ ಅಗತ್ಯಪ್ರಸ್ತುತ ಹೆಚ್ಚುವರಿಯಾಗಿ 4 ವೆಂಟಿಲೇಟರ್ ಸಿಕ್ಕಿದ್ದು, ಅದನ್ನು ಬಳಕೆ ಮಾಡುತ್ತಿದ್ದೇವೆ. ಆದರೆ ಪೂರ್ಣ ಪ್ರಮಾಣದ ಸೌಲಭ್ಯಗಳು ಸಿಗದೇ ಇರುವುದರಿಂದ ಶೇ. 80-85ರಷ್ಟು ಆಕ್ಸಿಜನ್ ಅಗತ್ಯವಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಕಷ್ಟವಾಗುತ್ತಿದೆ. 24 ಗಂಟೆಯೂ ಲ್ಯಾಬ್ ಸೌಲಭ್ಯವೂ ಅಗತ್ಯವಾಗಿದ್ದು, ಅದಕ್ಕೆ ಖಾಸಗಿಯವರಿಗೆ ಒಪ್ಪಂದ ಮಾಡಿ ಜನತೆಗೆ ಸೇವೆ ನೀಡುತ್ತೇವೆ.
-ಡಾ| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿ, ತಾ|ಆಸ್ಪತ್ರೆ ಬಂಟ್ವಾಳ 4 ಹೆಚ್ಚುವರಿ ವೆಂಟಿಲೇಟರ್
ಈ ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಒಂದು ವೆಂಟಿಲೇಟರ್ ಇದ್ದು, ಪ್ರಸ್ತುತ 4 ಹೆಚ್ಚುವರಿ ವೆಂಟಿಲೇಟರ್ ಒದಗಿಸಲಾಗಿದೆ. ಒಟ್ಟು 23 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸೂಕ್ತ ವ್ಯವಸ್ಥೆ ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿದೆ.
-ಡಾ| ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ