ಬಂಟ್ವಾಳ: ತಾಲೂಕು ಮಟ್ಟದ ಸಭೆಗಳಲ್ಲಿ ಎಲ್ಲ ಅಧಿಕಾರಿಗಳ ಭಾಗವಹಿಸುವಿಕೆ ಕಡ್ಡಾಯ. ಈ ಬಗ್ಗೆ ಸೂಚನೆಗಳನ್ನು ಹಿಂದೆಯೇ ನೀಡಲಾಗಿದೆ. ಆದರೂ ಹಿರಿಯ ಅಧಿಕಾರಿಗಳು ಗೈರಾಗುವ ಮೂಲಕ ನಿಜವಾದ ಅಭಿವೃದ್ಧಿಯ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ತಿಳಿಸಿದರು.
ಅವರು ನ. 7ರಂದು ಎಸ್. ಜಿ.ಅರ್. ಎಸ್. ವೈ. ಸಭಾಂಗಣದಲ್ಲಿ ನಡೆದ ತಾ| ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳು ಮುಂದಿನ ಡಿಸೆಂಬರ್ ಒಳಗೆ ಎಲ್ಲ ಕಾಮಗಾರಿಗಳನ್ನು ಸಂಪೂರ್ಣ ಮಾಡಿ, ಅನುದಾನದ ಖರ್ಚುವೆಚ್ಚಗಳನ್ನು ಸ್ಪಷ್ಟವಾಗಿ ಕಚೇರಿಗೆ ಒಪ್ಪಿಸಬೇಕು. ಇದರಿಂದ ಒಂದು ನಿರ್ದಿಷ್ಟ ಕೆಲಸವನ್ನು ಸೂಚಿತ ಅವಧಿಯ ಒಳಗೆ ಮುಗಿಸಲು ಸಾಧ್ಯವಾಗುವುದು ಎಂದರು.
ಸರಕಾರದ ನೀತಿಯಂತೆ ಕೆಲವು ಗುತ್ತಿಗೆಯನ್ನು ಎಸ್‌ಸಿಎಟಿ ಅವರಿಗೆ ನೀಡಬೇಕೆಂಬ ಆದೇಶ ಇರುವುದರಿಂದ ಅರ್ಹ ಗುತ್ತಿಗೆಯವರೇ ಕಾಮಗಾರಿ ನಿರ್ವಹಿಸಬೇಕು ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು. ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಅಧಿಕಾರಿಗಳು ವಿವರ ನೀಡಿದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಟಾಸ್ ಅಲಿ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ. ಬಂಗೇರ. ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಸಿಪ್ರಿಯಾನ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.