Advertisement

Bantwal; ನೇಲ್ಯಪಲ್ಕೆಯಲ್ಲಿ ಬಿರುಗಾಳಿಗೆ ಹಾರಿದ ಅಂಗಡಿಗಳ ಮೇಲ್ಛಾವಣಿ ಶೀಟುಗಳು

01:49 PM Jul 06, 2024 | Team Udayavani |

ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಭಾಗದಲ್ಲಿ ಶನಿವಾರ ಬೆಳಗ್ಗಿನ ಹೊತ್ತು ಬೀಸಿದ ಬಿರುಗಾಳಿಯ ಪರಿಣಾಮ ಅಂಗಡಿ ಮುಂಗಟ್ಟುಗಳ ಮೇಲ್ಛಾವಣಿಯ ಶೀಟ್ ಗಳು ಹಾರಿ ಹೋದ ಘಟನೆ ನಡೆದಿದೆ.

Advertisement

ಬೆಳಗ್ಗೆ ಸುಮಾರು 9.30 ರ ಹೊತ್ತಿಗೆ ಜೋರಾದ ಗಾಳಿ ಬೀಸಿದ್ದು, ಖಾದರ್ ಇಕ್ರಾ ಅವರಿಗೆ ಸೇರಿದ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಅಳವಡಿಸಿರುವ ಶೀಟ್ ಗಳು ಹಾರಿ ಹೋಗಿದ್ದು, ಅದರ ವಿಡಿಯೋ ದೃಶ್ಯಗಳು ಸೆರೆಯಾಗಿವೆ. ಘಟನೆಯಲ್ಲಿ ಯಾವುದೇ ರೀತಿಯ ಜೀವ ಹಾನಿ ಉಂಟಾಗಿಲ್ಲ.

ಕಾರು ಜಖಂ
ಬಂಟ್ವಾಳದ ಕೊಡಾಜೆ-ಅನಂತಾಡಿ ರಸ್ತೆಯ ಗೋಳಿಕಟ್ಟೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next