Advertisement

ಬಂಟ್ವಾಳ: ಕ್ವಾರಂಟೈನ್‌ ಕೇಂದ್ರಗಳ ಪರಿಶೀಲನೆ, ಸಭೆ

12:28 AM May 14, 2020 | Sriram |

ಬಂಟ್ವಾಳ: ಹೊರ ರಾಜ್ಯಗಳಿಂದ ಆಗಮಿಸುತ್ತಿರುವ ಬಂಟ್ವಾಳದ ನಾಗರಿಕರಿಗೆ ತಾಲೂಕಿನ ವಿವಿಧೆಡೆ ಕ್ವಾರಂಟೈನ್‌ಗಾಗಿ ಸಿದ್ಧಪಡಿಸಲಾದ ಕೇಂದ್ರ ಗಳನ್ನು ಬುಧವಾರ ಪರಿಶೀಲನೆ ನಡೆಸಿದ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಬಳಿಕ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

Advertisement

ಕ್ವಾರಂಟೈನ್‌ನ ವ್ಯವಸ್ಥೆಗಳ ಕುರಿತು ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭ ಶಾಸಕರು ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಅವರ ಜತೆಯೂ ಮಾತುಕತೆ ನಡೆಸಿದರು.

ಬುಡಾ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿ’ಸೋಜಾ, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ, ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಶಿವಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ದಿನೇಶ್‌ ಮೊದಲಾದವರಿದ್ದರು.

ಪುತ್ತೂರು: 3,094 ಮಂದಿಗೆ ವ್ಯವಸ್ಥೆ
ಪುತ್ತೂರು: ಹೊರ ದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ಜನತೆಗೆ ಪುತ್ತೂರು ತಾಲೂಕಿನಲ್ಲಿ ಖಾಸಗಿ ವಸತಿಗೃಹ, ಹಾಸ್ಟೆಲ್‌, ಶಾಲೆಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ನಗರವ್ಯಾಪ್ತಿಯಲ್ಲಿ 12 ಖಾಸಗಿ ವಸತಿಗೃಹಗಳನ್ನು ಸಜ್ಜುಗೊಳಿಸಲಾಗಿದೆ. ಹಾಸ್ಟೆಲ್‌ ಮತ್ತು ಶಾಲೆಗಳಲ್ಲಿ 3,094 ಮಂದಿಯ ಕ್ವಾರಂಟೈನ್‌ಗೆ ತಯಾರಿ ನಡೆಸಲಾಗಿದೆ ಎಂದು ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ತಿಳಿಸಿದರು. ಕ್ವಾರಂಟೈನ್‌ನಲ್ಲಿರುವವರಿಗೆ ಊಟ ಮತ್ತಿತರ ಸೌಲಭ್ಯ ಒದಗಿಸಲಾಗಿದೆ. ಮನೆಯಿಂದ ಊಟ ತರುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಕಡ್ಡಾಯ ಎಂದರು.

ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರುವ ಪುತ್ತೂರಿನ 400 ಮಂದಿಯನ್ನು 12 ಖಾಸಗಿ ವಸತಿಗೃಹಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. ಅತೀ ಅಪಾಯ ವಲಯದ ರಾಜ್ಯ ಗಳಿಂದ, ವಿದೇಶದಿಂದ ಬರುವ ಮಂದಿಯನ್ನು ಜಿಲ್ಲಾಡಳಿತ 2 ವಿಭಾಗಗಳಾಗಿ ವಿಂಗಡಿಸಿದ್ದು, ಶೀತ, ನೆಗಡಿ, ಜ್ವರ, ಕೆಮ್ಮು ಮತ್ತಿತರ ರೋಗ ಲಕ್ಷಣಗಳಿರುವ ಮಂದಿಯನ್ನು ಎ ವಿಭಾಗ ಎಂದೂ ಇಂಥವರಿಗೆ ಜಿಲ್ಲಾಡಳಿತವೇ ಕ್ವಾರಂಟೈನ್‌ ವ್ಯವಸ್ಥೆ ಮಾಡಲಿದೆ. ರೋಗ ಲಕ್ಷಣಗಳಿಲ್ಲದ ಬಿ ವಿಭಾಗದ ಮಂದಿಯನ್ನು ತಾಲೂಕು ಆಡಳಿತದ ಮೂಲಕ ಕ್ವಾರಂಟೈನ್‌ ಮಾಡಲಾಗುತ್ತದೆ. 14 ದಿನಗಳ ಅವಧಿ ಮುಗಿದ ಅನಂತರ ಮನೆಗೆ ತೆರಳಬಹುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next