Advertisement

ಬಂಟ್ವಾಳ: 3 ಮಲೇರಿಯಾ, 14 ಡೆಂಗ್ಯೂ ಪ್ರಕರಣ ಪತ್ತೆ

12:19 PM Jul 06, 2018 | |

ಬಂಟ್ವಾಳ: ಮಲೇರಿಯಾ-3, ಡೆಂಗ್ಯೂ-14 ಪ್ರಕರಣ ತಾ| ವ್ಯಾಪ್ತಿಯಲ್ಲಿ ಕಳೆದ ಮಳೆಗಾಲದ ಬಳಿಕ ದಾಖಲಾಗಿದೆ
ಎಂದು ತಾ| ಆರೋಗ್ಯಾಧಿಕಾರಿ ದೀಪಾ ಪ್ರಭು ಮಾಹಿತಿ ನೀಡಿದ್ದಾರೆ. ಅವರು ಜು. 4ರಂದು ಬಿ.ಸಿ. ರೋಡ್‌ ತಾ.ಪಂ. ಎಸ್‌ಜಿಆರ್‌ಎಸ್‌ವೈ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ
ನೀಡಿದರು. 

Advertisement

ಇವುಗಳ ಪೈಕಿ ಬಂಟ್ವಾಳ ನಗರದಲ್ಲಿ 2, ಪುದು ಗ್ರಾಮದಲ್ಲಿ 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಪುದು, ದೈವಸ್ಥಳ, ಪಂಜಿಕಲ್ಲು, ವಾಮದಪದವು, ಸಜಿಪ, ಅಳಿಕೆ, ಕುರ್ನಾಡು ವಿಟ್ಲ ಭಾಗದಲ್ಲಿ ತಲಾ ಒಂದೊಂದು ಮಲೇರಿಯಾ ಶಂಕಿತ ಪ್ರಕರಣಗಳು ವರದಿ ಆಗಿವೆ. ಪುಂಜಾಲಕಟ್ಟೆ 3, ಬಂಟ್ವಾಳ ನಗರ 2, ಮಂಚಿ 3, ನರಿಕೊಂಬು 2, ಕುರಿಯಾಳ 4 ಸಹಿತ ವಿವಿಧ ಪ್ರದೇಶದಲ್ಲಿ ಒಟ್ಟು 14 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿಯಿಂದ 78 ಶಂಕಿತ ಡೆಂಗ್ಯೂ ಪತ್ತೆಯಾಗಿದ್ದು, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂ ಹಾಗೂ ಮಲೇರಿಯಾ ರೋಗ ಸಂಪೂರ್ಣ ನಿಯಂತ್ರದಲ್ಲಿದೆ ಎಂದು ಹೇಳಿದರು.

ಶಂಕಿತವಿರುವ ಪ್ರದೇಶಗಳಿಗೆ ಭೇಟಿ ನೀಡಿ, ಇನ್ನೊಂದು ಸುತ್ತಿನ ಫಾಗಿಂಗ್‌ ನಡೆಸುವಂತೆ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ  ಅವರು ಸೂಚನೆ ನೀಡಿದರು. ರಾಸುಗಳಿಗೆ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ ಸೂಚನೆ ನೀಡಿದರು. ಶ್ಮಶಾನವನ್ನು ಮುಕ್ತಿಧಾಮ ಮಾಡುವ ಯೋಜನೆಗಳಿರುವುದರಿಂದ ಅವರಿಗೆ ಬೇಕಾದಷ್ಟು ಗಿಡ ವಿತರಣೆ ಮಾಡುವಂತೆ ಎಂದು ಇಒ ರಾಜಣ್ಣ ಸೂಚಿಸಿದರು.

ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ. ಬಂಗೇರ, ತಾ.ಪಂ. ಕಾರ್ಯ ನಿರ್ವಣಾಧಿಕಾರಿ ರಾಜಣ್ಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬಂಟಾಳ ತಾ| ಪ್ರ ಥಮ
ವರ್ಷದಿಂದ ವರ್ಷಕ್ಕೆ ಶಾಲಾ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದರೂ ಕಳೆದ ವರ್ಷ ಕ್ಕಿಂತ ಈ ವರ್ಷ ಹೆಚ್ಚು ದಾಖಲಾತಿಯಾಗಿದೆ. ಮಕ್ಕಳ ಕೊರತೆಯಿಂದ ಜಕ್ರಿಬೆಟ್ಟು ಮತ್ತು ತೋರಣಕಟ್ಟೆ ಎರಡು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ, ಸ್ಯಾಟ್ಸ್‌ನ ಆನ್‌ಲೈನ್‌ ದಾಖಲಾತಿಯಲ್ಲಿ ಬಂಟ್ವಾಳ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್‌ ಅವರು ಸಭೆಯ ಗಮನಕ್ಕೆ ತಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next