Advertisement
ತಾಲೂಕು ಕೇಂದ್ರ ಬಿ.ಸಿ. ರೋಡ್‌ನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಹಿತ ತುಂಬೆ ಹಾಗೂ ವಿಟ್ಲದಲ್ಲಿ ಸಸ್ಯಕ್ಷೇತ್ರಗಳಿದ್ದು, ಒಟ್ಟು ಮೂರು ಕಡೆಗಳಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ಕ್ಷೇತ್ರವನ್ನು ಹೊಂದಿದೆ. ಹೀಗಾಗಿ ಮಂಜೂರಾದ 25 ಹುದ್ದೆಗಳಲ್ಲಿ 17 ಹುದ್ದೆ ಗಳು ಖಾಲಿ ಇದ್ದಾಗ ಸವಾಲಿನಲ್ಲೇ ಕಾರ್ಯ ನಿರ್ವಹಿಸಬೇಕಾದ ಒತ್ತಡ ಇರುತ್ತದೆ.
ತಾಲೂಕಿನ ತೋಟಗಾರಿಕೆ ಇಲಾಖೆಯ ಮುಖ್ಯಸ್ಥರಾಗಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಒಂದು ಹುದ್ದೆ ಭರ್ತಿಯಾಗಿದ್ದು, ಮಂಜೂರಾಗಿರುವ 2 ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳಲ್ಲಿ 2 ಕೂಡ ಖಾಲಿ ಇವೆ. ಸಹಾಯಕ ತೋಟಗಾರಿಕೆ ಅಧಿಕಾರಿ 5 ಹುದ್ದೆಗಳಲ್ಲಿ 2 ಭರ್ತಿಯಾಗಿದ್ದು, ಮೂರು ಹುದ್ದೆಗಳು ಖಾಲಿ ಇವೆ. ತೋಟಗಾರಿಕೆ ಸಹಾಯಕರು 4 ಹುದ್ದೆ ಗಳಲ್ಲಿ 2 ಭರ್ತಿ ಇದ್ದು, 2 ಖಾಲಿ ಇವೆ. ತೋಟಗಾರರು ಒಟ್ಟು 12 ಹುದ್ದೆಗಳಲ್ಲಿ 2 ಮಾತ್ರ ಭರ್ತಿ ಇದ್ದು, 10 ಹುದ್ದೆಗಳು ಖಾಲಿ ಇವೆ. ದ್ವಿತೀಯ ದರ್ಜೆ ಸಹಾಯಕ 1 ಹುದ್ದೆಯು ಭರ್ತಿ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ಕಡೆಗಳಲ್ಲಿ ಕಾರ್ಯಕ್ಷೇತ್ರ
ತಾಲೂಕು ತೋಟಗಾರಿಕೆ ಇಲಾಖೆಯ ತುಂಬೆ ಕಾರ್ಯಕ್ಷೇತ್ರದಲ್ಲಿ ಪ್ರಯೋ ಗಾಲಯ ಸಹಿತ ಅಡಿಕೆ, ಕಾಳುಮೆಣಸು, ತೆಂಗು ಮೊದಲಾದ ಹತ್ತಾರು ಬಗೆಯ ಗಿಡಗಳನ್ನು ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತದೆ. ಹೀಗಾಗಿ ತುಂಬೆಯಲ್ಲಿ ಇಬ್ಬರು ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ಸಹಾಯಕರು ಹಾಗೂ ತೋಟಗಾರರು ಅಗತ್ಯವಿದ್ದಾರೆ.
Related Articles
Advertisement
ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಣೆಪ್ರಸ್ತುತ ಇಲಾಖೆಯಲ್ಲಿ ಬಂಟ್ವಾಳ ತಾಲೂಕಿಗೆ ಮಂಜೂರಾಗಿರುವ 25 ಹುದ್ದೆಗಳಲ್ಲಿ 8 ಭರ್ತಿ ಇದ್ದು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಹಿತ 2 ಸಸ್ಯ ಕ್ಷೇತ್ರಗಳ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಫೀಲ್ಡ್ ವರ್ಕ್ ಇರುವ ಕಾರಣ ಹೊಂದಾಣಿಕೆ ಮಾಡಿಕೊಂಡು ಕೃಷಿಕರಿಗೆ ತೊಂದರೆ ಯಾಗದಂತೆ ಕೆಲಸ ಮಾಡ ಲಾಗುತ್ತಿದೆ.
-ಪ್ರದೀಪ್ ಡಿ’ಸೋಜಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಬಂಟ್ವಾಳ