Advertisement
ಸಾರ್ವಜನಿಕ ಶ್ರೀ ಗಣೇಶೋತ್ಸವಗಳು ಸರಳವಾಗಿ ಆಚರಿಸಲ್ಪಡುತ್ತಿದ್ದರೂ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಚೌತಿ ಬಡಿಸುವ ಸಂಪ್ರದಾಯವಿರುವುದರಿಂದ ಕಬ್ಬಿನ ವ್ಯಾಪಾರ ಕಂಡುಬಂದಿತ್ತು. ಹೂವು, ತರಕಾರಿ, ಹಣ್ಣಿನ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ರಾಶಿ ಕಂಡುಬಂತು.
ಪ್ರತಿವರ್ಷ ಗಣೇಶೋತ್ಸವ ಮುನ್ನಾ ದಿನ ರಸ್ತೆ ಬದಿಗಳಲ್ಲಿ ಹೂವಿನ ವ್ಯಾಪಾರ ಅಬ್ಬರದಿಂದ ನಡೆಯುತ್ತಿದ್ದು, ಈ ಬಾರಿ ಕೆಲವೊಂದು ರಾಶಿಗಳು ಮಾತ್ರ ಕಂಡುಬಂತು. ಖರೀದಿಸುವವರ ಸಂಖ್ಯೆ ಕಡಿಮೆ ಇತ್ತು. ಜತೆಗೆ ಹಣ್ಣು, ತರಕಾರಿಗಳ ವ್ಯಾಪಾರವೂ ಕಂಡುಬಂತು.
ಸುಮಾರು ಒಂದೂವರೆ ಲಕ್ಷ ರೂ.ಗಳ ಹೂವನ್ನು ತಂದಿದ್ದೇವೆ ಎಂದು ಹೊಳೆ ನರಸೀಪುರದ ವರ್ತಕ ಹೊನ್ನೇಗೌಡ ಅವರು ಹೇಳುತ್ತಾರೆ. ಹೂವಿನ ವ್ಯಾಪಾರ ಸ್ವಲ್ಪ ಮಟ್ಟಿಗೆ ಕಂಡು ಬಂದರೂ ಹಿಂದಿನ ಅಬ್ಬರವಿರಲಿಲ್ಲ. ಧಾರಣೆಯಲ್ಲೂ ಕೊಂಚ ಮಟ್ಟಿನ ವ್ಯತ್ಯಾಸ ಕಂಡು ಬಂದಿದೆ ಎಂದು ಬಿ.ಸಿ. ರೋಡ್‌ನ ಹೂವಿನ ವರ್ತಕ ಲೋಕೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.