Advertisement

ಬಂಟ್ವಾಳ: ಧಾರಾಕಾರ ಮಳೆಯಿಂದ ಗುಡ್ಡ ಕುಸಿಯುವ ಭೀತಿ

12:49 PM Oct 14, 2020 | Mithun PG |

ಬಂಟ್ವಾಳ: ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಹಲವೆಡೆ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆ ಬಸ್ತಿಕೋಡಿ ಬಳಿ ಅಗೆದ ಗುಡ್ಡ ಕುಸಿಯಲಾರಂಭಿಸಿದ್ದು, ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡದ ಮೇಲೆ ಬೃಹದಾಕಾರದ ಮರಗಳಿದ್ದು, ಆತಂಕಕ್ಕೆ ಕಾರಣವಾಗಿದೆ.

Advertisement

ಬಾಳ್ತಿಲ ಗ್ರಾಮದ ಸಣ್ಣಕುಕ್ಕು ವನಜಾಕ್ಷಿ ಅವರ ಕಚ್ಚಾ ಮನೆಯ ಒಂದು ಭಾಗ ಕುಸಿದು ಬಿದ್ದಿದೆ‌. ಕೆದಿಲ ಗ್ರಾಮದ ಕೃಷ್ಣಮೂರ್ತಿ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟವೂ ಏರಿಕೆಯಾಗಿದ್ದು, ಬೆಳಗ್ಗಿನ ಜಾವ 6.2 ಮೀ.ನಷ್ಟಿತ್ತು.

ಇದನ್ನೂ ಓದಿ: Watch: ಗುಡ್ಡದ ಮೇಲಿದ್ದ ನಾಸಿಕ್ ಕೋಟೆ ಏರಿದ 68ರ ಅಜ್ಜಿ: ಟ್ವೀಟರ್ ನಲ್ಲಿ ಪ್ರಶಂಸೆ

ಇದನ್ನೂ ಓದಿ: ವಿಡಿಯೋ ವೈರಲ್: ಆನೆ ಮೇಲೆ ಯೋಗ: ದಿಢೀರ್ ಕೆಳಗೆ ಬಿದ್ದ ಬಾಬಾರಾಮ್ ದೇವ್

Advertisement

ಮತ್ತೊಂದೆಡೆ ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್ ಪಕ್ಕದಲ್ಲಿ ಹೆದ್ದಾರಿ ಇಲಾಖೆಯ ಅಸಮರ್ಪಕ ಚರಂಡಿ ಕಾಮಗಾರಿಯಿಂದಾಗಿ ರಾತ್ರಿ ಸುರಿದ ಮಳೆಯಿಂದ ಶ್ರೀ ಅಯ್ಯಪ್ಪ ಮಂದಿರದ ಒಳಗೆ ನೀರು ನುಗ್ಗಿದೆ. ಜೊತೆಗೆ ಸಮೀಪದ ಮೂರು ಮನೆಗಳಿಗೂ ನೀರು ನುಗ್ಗಿ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಿತ್ತು ಹೋದ ಬಸ್ಸಿನ ಚಕ್ರ ! ಅಪಾಯ ತಪ್ಪಿಸಿ ಪ್ರಯಾಣಿಕರ ಜೀವ ರಕ್ಷಿಸಿದ ಬಸ್ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next