Advertisement

ಬಂಟ್ವಾಳ: ಇವಿಎಂ ಯಂತ್ರ ನಿಭಾವಣೆ ಮಾಹಿತಿ, ತರಬೇತಿ

03:02 PM Apr 01, 2019 | Naveen |

ಬಂಟ್ವಾಳ : ಲೋಕಸಭೆ ಚುನಾವಣೆ ಸಹಜ ಮತದಾನ ಪ್ರಕ್ರಿಯೆ ನಡೆಯುವಂತೆ ಮಾ. 31ರಂದು ಮೊಡಂಕಾಪು ಇನ್ಫೆಂಟ್‌ ಜೀಸಸ್‌ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಇವಿಎಂ ಯಂತ್ರ ಸಹಿತ ವಿವಿಧ ಮಾಹಿತಿ ತರಬೇತಿ ಸಹಾಯಕ ಚುನಾವಣಾಧಿಕಾರಿ ಮಹೇಶ್‌ ನೇತೃತ್ವದಲ್ಲಿ ನಡೆಯಿತು.

Advertisement

576 ಮಂದಿ ಅಧಿಕಾರಿಗಳು
ಒಟ್ಟು 576 ಮಂದಿ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದು ಇಬ್ಬರು ಗೈರಾಗಿದ್ದರು. ತರಬೇತಿ ಕೇಂದ್ರದ ಬಳಿ ಆ್ಯಂಬುಲೆನ್ಸ್‌ ವ್ಯವಸ್ಥೆ, ಊಟೋಪಚಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪವರ್‌ ಪಾಯಿಂಟ್‌ ಆಡಿಯೋ ಮತ್ತು ವೀಡಿಯೋ ಮೂಲಕ ಪ್ರಾತ್ಯಕ್ಷಿಕೆಯಲ್ಲಿ ಚುನಾವಣೆ ಹೇಗೆ ನಡೆಯುತ್ತದೆ. ಅಲ್ಲಿ ಬರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಮಧ್ಯಾಹ್ನ ಅನಂತರ ಇವಿಎಂ ಬಳಸುವುದು ಹೇಗೆ, ಅಂಧ ಮತದಾರರು ಬಂದರೆ ಅವರು ಹೇಗೆ ಮತದಾನ ಮಾಡುವುದು, ಇವಿಎಂ ದೋಷದ ಸಮಸ್ಯೆ ಬಂದರೆ ಅದನ್ನು ನಿಭಾಯಿಸುವ ಕ್ರಮ, ವಿವಿ ಪ್ಯಾಟ್‌ ಮತ್ತು ಮತದಾನ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನ ಕುರಿತು ತಿಳಿಸಲಾಯಿತು. ಇಬ್ಬರು ಇಡಿಸಿ ಅಧಿಕಾರಿಗಳು ಚುನಾವಣೆಯಂದು ಅರ್ಜಿ ನಮೂನೆ 12, 12ಎ ನೀಡುವ ಮತ್ತು ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ತರಬೇತಿ ಕೇಂದ್ರದ ಬಳಿ ವಿಶೇಷವಾಗಿ ಸ್ವಾಗತ ಕೊಠಡಿ ಇದ್ದು, ತರಬೇತಿ ಪಡೆಯಲು ಬಂದವರಿಗೆ ಸಹಕಾರಿಯಾಗಲು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು.

ಮುಂದಿನ ಎ. 9 ರಂದು ಎರಡನೇ ಹಂತದ ತರಬೇತಿ ನಡೆಯಲಿದ್ದು ಅಂದು ಬೇರೆಬೇರೆ ತಾಲೂಕಿನ ಅಧಿಕಾರಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್‌ ಸಣ್ಣರಂಗಯ್ಯ ತಿಳಿಸಿದರು.

ತಾ.ಪಂ. ಕಾ.ನಿ. ಅಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌, ಚುನಾವಣಾ ಉಪ ತಹಶೀಲ್ದಾರ್‌ ದಾದಾ ಫೈರೋಜ್‌, ಪ್ರಥಮ ದರ್ಜೆ ಸಹಾಯಕ ರಾಜ್‌ ಕುಮಾರ್‌, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Advertisement

21 ತರಬೇತಿ ಕೊಠಡಿ
ತರಬೇತಿಗೆ ಒಟ್ಟು 21 ತರಬೇತಿ ಕೊಠಡಿಗಳಿದ್ದು ಪ್ರತೀ ಕೊಠಡಿಯಲ್ಲಿ ಓರ್ವ ಸೆಕ್ಟರ್‌ ಆಫೀಸರ್‌, ಒಬ್ಬರು ಗ್ರಾಮಕರಣಿಕರು, ಓರ್ವ ಡಾಟಾ ಎಂಟ್ರಿ ಆರೇಟರ್‌ ಇದ್ದು ಮತಗಟ್ಟೆ ಅಧಿಕಾರಿಗಳಾದ ಪಿಆರ್‌ಒ ಮತ್ತು ಎಪಿಆರ್‌ಒಗಳು ವಿವಿಧ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next