Advertisement
ಆರಂಭದಲ್ಲಿ ಕಂಬಳದ ಛಾಯಾಚಿತ್ರ ತೆಗೆಯುವ ಹವ್ಯಾಸದೊಂದಿಗೆ ಆರಂಭಗೊಂಡ ದಾಖಲೀಕರಣ, ಬಳಿಕ ವೀಡಿಯೊಗಳಾಗಿ ಮತ್ತು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಕಂಬಳಕ್ಕಾಗಿ ದುಡಿಯುವವರನ್ನು ಪರಿಚಯಿಸುವ ಕಂಬಳ ಲೋಕ-ಕಂಬಳ ಸಾಧಕರ ಯಶೋಗಾಥೆ ಎಂಬ ಪುಸ್ತಕ ಇದೀಗ ಬಿಡುಗಡೆಗೆ ಸಜ್ಜಾಗಿದೆ.
Related Articles
ರಮ್ಯಾ ನಿತ್ಯಾನಂದ ಶೆಟ್ಟಿ ಅವರು 2019ರಿಂದಲೇ ಕಂಬಳದ ಓಟಗಾರರು, ಯಜಮಾನರು, ಕೋಣಗಳು, ಕಂಬಳದ ಪರಿಕರಗಳು-ಅಲಂಕಾರಿಕ ವಸ್ತುಗಳ ತಯಾರಕರು, ವೀಕ್ಷಕ ವಿವರಣೆಗಾರರು, ತೀರ್ಪುಗಾರರು, ಫ್ಲ್ಯಾಗ್ ತೀರ್ಪುಗಾರರು, ಛಾಯಾಗ್ರಾಹಕರು ಮೊದಲಾದವರ ವ್ಯಕ್ತಿ ಪರಿಚಯವನ್ನು ಅಕ್ಷರ ರೂಪಕ್ಕಿಳಿಸಿದ್ದರು. ಆದರೆ ಪುಸ್ತಕ ಮಾಡಿರಲಿಲ್ಲ. 2024ರಲ್ಲಿ ಅದನ್ನು ಪುಸ್ತಕ ಮಾಡಬೇಕು ಎಂಬ ಯೋಚನೆಯಿಂದ ಮಾರ್ಚ್ನಿಂದ ಕಂಬಳ ಲೋಕ 1, 2, 3, 4 ಎಂದು ಹಂತ ಹಂತವಾಗಿ 4 ಸಣ್ಣ ಪುಸ್ತಕಗಳನ್ನು ಪ್ರಕಟಿಸಿದ್ದರು. ಇದೀಗ ಎಲ್ಲವೂ ಸೇರಿ 272 ಪುಟಗಳ ಪುಸ್ತಕ ಸಿದ್ಧವಾಗಿದೆ. ಕಂಬಳ ಲೋಕ ಪುಸ್ತಕವು ಡಿ. 30ರಂದು ಬೆಳಗ್ಗೆ 10.30ಕ್ಕೆ ಸಿದ್ಧಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
Advertisement